ವಿಕಿಪೀಡಿಯ:ಮೈಸೂರು ವಿವಿ ವಿಶ್ವಕೋಶದಲ್ಲಿ ಬರಹಗಳ ಸೇರ್ಪಡೆ
ಮೈಸೂರು ವಿಶ್ವದ್ಯಾನಿಲಯ ಕನ್ನಡ ವಿಶ್ವಕೋಶವನ್ನು ಪ್ರಕಟಿಸಿದೆ. ಅದು ಸುಮಾರು ಮೂರು ದಶಕಗಳಷ್ಟು ಹಳೆಯದು. ಮೈಸೂರು ವಿಶ್ವವಿದ್ಯಾನಿಲಯವು ಈ ವಿಶ್ವಕೋಶವನ್ನು ಅಂಕೀಕರಿಸಿ (digitization) ಯುನಿಕೋಡ್‍ಗೆ ಪರಿವರ್ತಿಸಿ ಅದನ್ನು ಮುಕ್ತ ಪರವಾನಗಿಯಲ್ಲಿ ಪುನಃ ಬಿಡುಗಡೆ ಮಾಡಲು ಸೆಂಟರ್ ಫಾರ್ ಇಂಟರ್‍ನೆಟ್ ಆಂಡ್ ಸೊಸೈಟಿಯ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಯೋಜನೆಯ ಮೊದಲ ಹಂತದಲ್ಲಿ ವಿಶ್ವಕೋಶದ ಮೊದಲ ಆರು ಸಂಪುಟಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ವಿಶ್ವಕೋಶದ ಲೇಖನಗಳನ್ನು ಪ್ರತ್ಯೇಕಿಸಿ ಯುನಿಕೋಡ್‍ಗೆ ಪರಿವರ್ತಿಸಿ ಅವುಗಳನ್ನು ಕನ್ನಡ ವಿಕಿಸೋರ್ಸ್‍ಗೆ ಸೇರಿಸಲಾಗುವುದು. ಈ ಲೇಖನಗಳು ಕನ್ನಡ ವಿಕಿಪೀಡಿಯದ ಲೇಖನಗಳಿಗೆ ಮಾಹಿತಿಯನ್ನು ಪೂರೈಸಿ ಲೇಖನಗಳ ಗುಣಮಟ್ಟವನ್ನು ಮತ್ತು ಸಂಖ್ಯೆಯನ್ನು ಹೆಚ್ಚಿಸಿ ತನ್ಮೂಲಕ ಕನ್ನಡ ವಿಕಿಪೀಡಿಯವನ್ನು ಶ್ರೀಮಂತಗೊಳಿಸುತ್ತವೆ. ( ನೋಡಿ )
ಈ ಯೋಜನೆಯಲ್ಲಿ ಕನ್ನಡ ವಿಕಿಪೀಡಿಯದ ಮುಂದಾಳಾದ ಶ್ರೀಯುತ ಪವನಜರಿಂದ ಒಂದು ಯೂನಿಕೋಡ್ ಪಠ್ಯದ ಕಡತವನ್ನು ತೆಗೆದುಕೊಂಡು ಸುಮಾರು ಇನ್ನೂರು ಪುಟಗಳಷ್ಟು ಮಾಹಿತಿಯನ್ನು ಸುಮಾರು ಇನ್ನೂರು ತಲೆಬರಹಗಳ ಅಡಿಯಲ್ಲಿ ನಾನು ಸೇರಿಸಿದ್ದೇನೆ - ಇವು 'ಉ' ಅಕ್ಷರದಿಂದ ಆರಂಭವಾಗುವ ಮಾಹಿತಿಪುಟಗಳು. ನಾನು ಮತ್ತು ಇತರರು ಸೇರಿಸಿದ ಬರಹಗಳ ಪಟ್ಟಿಯನ್ನು ಇಲ್ಲಿ ಕ್ಲಿಕ್ಕಿಸಿ ನೋಡಬಹುದು . ಈ ಕೊಂಡಿಯನ್ನು ಮುಂದಿನ ಉಪಯೋಗಕ್ಕೆಂದು ಬೇಕಿದ್ದರೆ ಉಳಿಸಿಕೊಳ್ಳಿ . ಹಾಗೆಯೇ ಇಲ್ಲಿನ ಪುಟಗಳ ತಲೆಬರಹಗಳ ಮೇಲೂ ಕಣ್ಣಾಡಿಸಿ. ( ಮುಂದೂ ಇನ್ನಷ್ಟು ಮಾಹಿತಿಪುಟಗಳು ಇಲ್ಲಿ ಲಭ್ಯ ಅಗಬಹುದು. )
Comments
ಉ: ವಿಕಿಪೀಡಿಯ:ಮೈಸೂರು ವಿವಿ ವಿಶ್ವಕೋಶದಲ್ಲಿ ಬರಹಗಳ ಸೇರ್ಪಡೆ
ಇದು ಒಟ್ಟೂ ವಿಶ್ವಕೋಶದ ಸುಮಾರು ಮೂವತ್ತರ ಒಂದು ಭಾಗ- ನಾನು ತೆಗೆದುಕೊಂಡ ಸಮಯ- ಸುಮಾರು ಹತ್ತು ಘಂಟೆಗಳು.