ವಿಷಾದಿಸಿದ್ದೇವೆ..
ಸತ್ತ ನೇತಾರರಿಗಾಗಿ
ಶ್ರದ್ಧಾಂಜಲಿ ಅರ್ಪಿಸಲು ಸದಾ ಬದ್ಧರಾಗಿದ್ದೇವೆ
ಇದ್ದ ಸಾಮಾನ್ಯರಿಗಾಗಿ
ಸಮಾಧಿ ಕಟ್ಟುವವರ ಕಂಡು ಸಿಡಿಯಲಾರದಿದ್ದೇವೆ.
ದೇಶದ ಉಳಿವಿಗಾಗಿ
ಹುತಾತ್ಮರಾದವರ
ನೆನೆ ನೆನೆದು ಕಣ್ಣೀರಿಟ್ಟಿದ್ದೇವೆ;
ನಾಡಿನ ಆಗುಹೋಗುಗಳಿಗಾಗಿ ಶ್ರಮಿಸಿ,
ಭವಿಷ್ಯನುಡಿದವರ ಮನಗಳಿಗೆ ವಂದಿಸಿದ್ದೇವೆ.
ದೇಶದೊಳಗಿನ ಭಿನ್ನತೆ-ಬೇಧಭಾವಗಳ
ತೊಲಗಿಸಲಾದಿದ್ದೇವೆ;
ಅಕ್ಕಪಕ್ಕದವರಿಗಾಗಿ ಶುದ್ಧಾಚಾರ ಹೇಳಲು
ತಪ್ಪದೇ ಮರೆಯದಿದ್ದೇವೆ;
ಸಂಸಾರದೊಳಿತಿಗಾಗಿ
ಮನೆ-ಮನದೊಳಗಿನ ಕಸ-ಕೊಳೆ
ತೆಗೆದು ತೊಳೆಯಲಾಗದಿದ್ದೇವೆ;
ಸಾರ್ವತ್ರಿಕ ಏಳ್ಗೆಗಾಗಿ
ಆತ್ಮ-ಅರಿವುಗಳಿಗೆ “ಓ”ಗೊಟ್ಟೂ ದಿಕ್ಕು ಕಾಣದವರಿದ್ದೇವೆ.
ಹುಟ್ಟು ಪ್ರತಿಭೆಗಳಿಗೆ, ನಿಸ್ವಾರ್ಥಿ-ಸಮರ್ಥರಿಗಾಗಿ
ಸಮಾಜದಲಿ ಸ್ಥಾನಮಾನಗಳನೆ ಮೀಸಲಿಟ್ಟಿದ್ದೇವೆ;
ಹಿಂದುಳಿದ ದೀನದಲಿತರಿಗಾಗಿ
ಅವಕಾಶಗಳನೆ ಕಾಯ್ದಿರಿಸಿದ್ದೇವೆ
ಅದ್ಹೇಗೋ ಮೇಲರಗಿ ಬರುವ
ಸಮಯಸಾಧಕರಿಗಾಗಿ
ದಿನವೂ ವಿಷಾಧಿಸಿದ್ದೇವೆ.
-ಶಿವರಾಂ ಎಚ್ 15 ಆಗಸ್ಟ್ , 2006
ನನ್ನ ಕವನ ಸಂಕಲನಕ್ಕೆ ಇಲ್ಲಿ ನೋಡಿ-
[http://riterlines.blogspot.com|ರೈಟರ್ ಟೈಮ್ಸ್-ಕವನಗಳು]