'ಸಂಪದ'ದಲ್ಲಿ ಕನ್ನಡ ಗಣಕತಂತ್ರಾಂಶಕ್ಕಾಗಿ ಅನುವಾದ

'ಸಂಪದ'ದಲ್ಲಿ ಕನ್ನಡ ಗಣಕತಂತ್ರಾಂಶಕ್ಕಾಗಿ ಅನುವಾದ

ಸ್ವಲ್ಪ ದಿನಗಳಿಂದ ಬ್ಲಾಗನ್ನು ಬರೆಯಲಾಗಲಿಲ್ಲ ; ಅದಕ್ಕೆ ಒಂದು ಕಾರಣ ಎಂದರೆ 'ಸಂಪದ'ದಲ್ಲಿ ಕನ್ನಡ ಗಣಕತಂತ್ರಾಂಶಕ್ಕಾಗಿ ಅನುವಾದ ಮಾಡುತ್ತಿದ್ದೆ .

ನಾಡಿಗ್ ಅವರು ವೆಬ್ ಇಂಟರ್ಫೇಸ್ ಒದಗಿಸಿದ್ದು ಬಹಳ ಚೆನ್ನಾಗಿದೆ.
ನಾನು ಅನುವಾದ ಪ್ರಾರಂಭಿಸಿದ್ದು ಸೆಪ್ಟೆಂಬರ್ ಮೊದಲ ವಾರದಲ್ಲಿ . ಆಗ ಅಲ್ಲಿ ಇದ್ದ ಸುಮಾರು ೧೬,೦೦೦ ಶಬ್ದ/ವಾಕ್ಯ/ಪ್ಯಾರಾಗಳಲ್ಲಿ ಸುಮಾರು ೫,೦೦೦ ಅನುವಾದಗೊಂಡು ಅನುಮೋದಿಸಲ್ಪಟ್ಟಿದ್ದವು. ನಾನು ಸ್ವಲ್ಪ ಹಿಂಜರಿಯುತ್ತಲೇ ಆರಂಬಿಸಿದೆ. ನಂತರ ನನಗೆ ನಾಡಿಗ್ ಅವರು ಅನುಮೋದನೆಯ ಅಧಿಕಾರವನ್ನೂ ಕೊಟ್ಟರು .

ಒಂದು ತಿಂಗಳ ಅವಧಿಯಲ್ಲಿ ನಾನು ಸುಮಾರು ೨೦೦೦ ಕ್ಕೂ ಹೆಚ್ಚು ಶಬ್ದ/ವಾಕ್ಯ/ಪ್ಯಾರಾಗಳನ್ನು ಅನುವಾದ ಮಾಡಿದ್ದೇನೆ. ಇಂದಿನ ಸ್ಥಿತಿ ಹೀಗಿದೆ ಸುಮಾರು ೮೦೦೦ ಅನುವಾದ/ಅನುಮೋದನೆಗೊಂಡಿವೆ. ಇನ್ನೂ ೮೦೦೦ ದಷ್ಟು ಅನುವಾದ/ಅನುಮೋದನೆಗೆ ಕಾದಿವೆ.

Rating
No votes yet