!!!ಸತ್ಯಂ ಶಿವಂ ಸುಂದರಂ!!!
!!!ಸತ್ಯಂ ಶಿವಂ ಸುಂದರಂ!!!
ತ್ರಿಮೂರ್ತಿ, ತ್ರಿನೇತ್ರ, ತ್ರಿಕಾಲಮೂರ್ತಿ...
ಮಹಾಶಿವರಾತ್ರಿ.....
ಶಿವರಾತ್ರಿಯ ಉತ್ಸಹವನ್ನು ಪ್ರತಿ ವರ್ಷ ದೇಶದಾದ್ಯಂತ ಆಚರಿಸಲಾಗುತ್ತದೆ. ಶಿವನ ದರ್ಶನವನ್ನು ಪಡೆದು ಬಿಲ್ವ ಪತ್ರವನ್ನು ಆರ್ಪಿಸಿ,ಉಪವಾಸವನ್ನು ಆಚರಿಸಿ ಇಡೀ ರಾತ್ರಿ ಜಾಗರಣೆಯನ್ನು ಮಾಡಿ ಶಿವರಾತ್ರಿಯನ್ನು ಆಚರಿಸಲಾಗುವುದು
ತ್ರಿಮೂರ್ತಿ, ತ್ರಿನೇತ್ರ,ತ್ರಿಕಾಲದರ್ಶಿ ಮತ್ತು ತ್ರಿಲೋಕನಾಥ ಎಂದು ಕರೆಯಲ್ಪಟ್ಟು ಲಿಂಗ ರೂಪದಲ್ಲಿರುವ ಪರಮ ಶಿವನನ್ನು ನಿರ್ವಿಕಾರ ರೂಪನೆಂಬಂತೆ ಪೂಜಿಸಲಾಗುತ್ತಿದೆ.
ಪ್ರಮುಖ ದೇವರ ಜನ್ಮವನ್ನು ದಿವಸದಲ್ಲಿ ಆಚರಿಸುತ್ತೇವಾದರೂ ಶಿವನ ಜನ್ಮ ದಿನವನ್ನು ಶಿವರಾತ್ರಿಯೆಂದು ರಾತ್ರಿಯಲ್ಲಿ ಆಚರಿಸುತ್ತಿರುವುದು ವಿಲಕ್ಷಣವಾದ ಸಂಗತಿ. ಹಿಂದೂ ಕ್ಯಾಲಂಡರ್ ನ ಅಂತಿವ ಮಾಸವಾದ ಫಾಲ್ಗುಣದ ೧೪ ನೇ ದಿನದಂದು ಅತ್ಯಂತ ಅಂಧಕಾರಮಯ ದಿನವಾಗಿರುವ ಅಮಾವಾಸ್ಯೆಯ ಮುಂದಿನ ದಿನವನ್ನು ಶಿವರಾತ್ರಿಯು ಆಚರಿಸಲ್ಪಡುತ್ತದೆ.
ಪರಶಿವನು ಸರ್ವರಿಗೂ ಒಳ್ಳೆಯದನ್ನೇ ಮಾಡಲಿ.
Rating