DLI ಪುಸ್ತಕನಿಧಿ: ವಿ.ಸೀ. ಅವರ ಶೃಂಗಾರ ವಿಹಾರ- (ಕನ್ನಡ ಕಾವ್ಯಗಳ ಪ್ರಣಯಪ್ರಸಂಗಗಳು)
ಶೃಂಗಾರ ವಿಹಾರ- (ಕನ್ನಡ ಕಾವ್ಯಗಳ ಪ್ರಣಯಪ್ರಸಂಗಗಳು) ಇದು ಕನ್ನಡದ ಹಿರಿಯಸಾಹಿತಿ ಎಂ.ವಿ.ಸೀತಾರಾಮಯ್ಯನವರ ಪುಸ್ತಕ. ಪುಸ್ತಕದ ಗಾತ್ರವೇನೋ ಚಿಕ್ಕದೇ. ಆದರೆ ಇದರಲ್ಲಿ ಒಟ್ಟು ಆರು ಕತೆಗಳಿವೆ.
೧) ಪಾಂಡುವಿನ ಮರಣ- ಇದು ಕನ್ನಡದ ಆದಿಕವಿ ಪಂಪನು ಬರೆದ ಭಾರತದಿಂದ ಆಯ್ದ ಕತೆ. ಮಹಾಭಾರತದಲ್ಲಿ ಪಾಂಡವರ ತಂದೆ (! - ಹಾಗಂತ ಯಾರೂ ಹೇಳಿಲ್ಲ ಆ ಮಾತು ಬೇರೆ)ಯ ಮರಣದ ಕತೆ ಇದೆ. ಪಾಂಡುರಾಜನಿಗೆ ಒಂದು ಸಲ ಮುನಿಯೊಬ್ಬನು ನಲ್ಲೆಯನ್ನು ಬಯಸಿ ಕೂಡಿದಾಗ ಅವನಿಗೆ ಮರಣ ಉಂಟಾಗಲಿ ಎಂದು ಶಾಪ ಕೊಟ್ಟನು. ಆಗ ಧೃತರಾಷ್ಟ್ರನಿಗೆ ಅಧಿಕಾರ ಒಪ್ಪಿಸಿ, ಅವನು ಹೆಂಡತಿಯರಾದ ಮಾದ್ರಿ ಮತ್ತು ಕುಂತಿಯರೊಂದಿಗೆ ಅಡವಿಗೆ ಹೋದನು. ಅಲ್ಲಿ ವಸಂತಮಾಸ ಬಂದಾಗ ಮಾದ್ರಿಯನ್ನು ಕೂಡುವ ಬಯಕೆ ಉಂಟಾಗಿ ಆ ಸಮಯದಲ್ಲಿ ಸತ್ತು ಹೋದನು. ಆ ಕತೆ ಇಲ್ಲಿದೆ.
೨) ಪ್ರಣಯಾವರ್ತ - ಇದು ಹನ್ನೆರಡನೇ ಶತಮಾನದಲ್ಲಿದ್ದ ನಾಗಚಂದ್ರನು ಬರೆದ ರಾಮಚಂದ್ರಚರಿತ ಪುರಾಣ ಎಂಬ ಕಾವ್ಯದಿಂದ ಆರಿಸಿಕೊಂಡಿದ್ದು, ಈ ನಾಗಚಂದ್ರನು ಅಭಿನವಪಂಪ ಎಂದು ಹೆಸರಾಗಿದ್ದನೆ. ಈ ಕಾವ್ಯವು ಪಂಪರಾಮಾಯಣ ಎಂದು ಪ್ರಸಿದ್ಧವಾಗಿದೆ. ( ಆದಿಕವಿ ಪಂಪನು ಇದ್ದದ್ದು ಇದಕ್ಕೆ ಎರಡು-ಮೂರು ಶತಮಾನ ಹಿಂದೆ). ವಾಲ್ಮೀಕಿರಾಮಾಯಣಕ್ಕಿಂತ ಕೊಂಚ ಬೇರೆ ಆಗಿರುವ ಜೈನರಾಮಯಣವನ್ನು ಇದು ಆಧರಿಸಿದೆ. ಇಲ್ಲಿ ಸೀತೆಗೆ ಒಬ್ಬ ಅಣ್ಣನಿದ್ದನು. ನಾರದನು ಸೀತೆಯನ್ನು ಮೋಹಿಸಿ ಅಪಮಾನ ಹೊಂದಿದ ನಾರದನು ಸೀತೆಯ ಅಣ್ಣನಿಗೆ ಸೀತೆಯ ಮೇಲೆ ವ್ಯಾಮೋಹ ಉಂಟಾಗುವಂತೆ ಮಾಡುತ್ತಾನೆ.ಸೀತೆಯ ಅಣ್ಣನಿಗೆ ಸೀತೆ ತನ್ನ ತಂಗಿ ಎಂದು ಅರಿವಾದಾಗ ಪಶ್ಚಾತ್ತಾಪ ಪಡುತ್ತಾನೆ.
೩)ಕಾಮಲತೆ- ಇದು ಅಲ್ಲಮ ಕಾಮಲತೆಯರ ಪ್ರಣಯದ ಕತೆ. ಇದು ಹನ್ನೆರಡನೇ ಶತಮಾನದ ಹರೀಶ್ವರ( ಅಂದರೆ ಹರಿಹರ) ಕವಿಯ 'ಪ್ರಭುದೇವರ ರಗಳೆ'ಯಿಂದ ಆಯ್ದ ಭಾಗ. ಅಲ್ಲಮಪ್ರಭುವಿಗೆ ಕಾಮಲತೆಯಲ್ಲಿದ್ದ ತೀವ್ರವಾದ ಪ್ರೇಮವು ಅವಳ ಸಾವಿನಿಂದಾಗಿ ತೀವ್ರ ವೈರಾಗ್ಯಕ್ಕೆ ತಿರುಗಿದ ಕತೆ.
೪)ಮುಂದಿನ ಅಮೃತಮತಿಯ ಕತೆ ೧೨-೧೩ನೇ ಶತಮಾನದ ಜನ್ನನ ಯಶೋಧರಚರಿತೆಯಲ್ಲಿ ಇರುವಂಥದು. ಸುಂದರನೂ ಸರ್ವಗುಣಸಂಪನ್ನನೂ ಆದ ರಾಜನ ಮಡದಿಯು ಕುರೂಪಿಯೂ ದುಷ್ಟನೂ ಆದ ಮಾವುತನೊಬ್ಬನ ಕೊಳಲಗಾನಕ್ಕೆ ಮಾರುಹೋಗಿ ಅವನ ಜತೆ ಪ್ರಣಯವ್ಯವಹಾರವನ್ನಿಟ್ಟುಕೊಂಡ ಕತೆ . ವಿಷಯ ತಿಳಿದ ರಾಜನು ಒಂದು ಅರೆಗಳಿಗೆ ಅವರನ್ನು ಕೊಲ್ಲಬೇಕೆಂದು ವಿಚಾರಮಾಡಿದನು . ನಂತರ ತನ್ನನ್ನು ತಾನೇ ನಿಯಂತ್ರಿಸಿಕೊಂಡನು. ಮುಂದೆ ವೈರಾಗ್ಯಹೊಂದಿ ರಾಜ್ಯತ್ಯಾಗ ಮಾಡಿ ಅವನು ತನ್ನ ತಾಯಿಯೊಡನೆ ಅಡವಿಗೆ ಹೋಗಲು ಸಿದ್ದ್ಧನಾದಾಗ ಅವರನ್ನು ವಿಷ ಉಣ್ಣಿಸಿ ಅಮೃತಮತಿಯು ಅವರನು ಕೊಂದಳು. ಇಲ್ಲಿ - ರಾಜನಿಗೆ - ಗಮನಿಸಿ - ಸಂಕಲ್ಪಮಾತ್ರದಿಂದಲೇ ಪಾಪ ಉಂಟಾಗುತ್ತದೆ. ಈ ಕತೆಯನ್ನು ಆಧರಿಸಿ ಗಿರೀಶ ಕಾರ್ನಾಡರು ಬರೆದ 'ಹಿಟ್ಟಿನ ಹುಂಜ' ನಾಟಕದಲ್ಲಿ ಈ ರಾಜ ಮತ್ತು ಅವನ ತಾಯಿ ಮುಂದೆ ತುಂಬ ನೀಚ ಜನ್ಮಗಳನ್ನು ಎತ್ತುತ್ತಾರೆ. ಅಮೃತಮತಿ ಮತ್ತು ಅವಳ ಪ್ರಿಯಕರನಿಗಾದರೋ ಒಳ್ಳೊಳ್ಳೇ ಜನ್ಮಗಳೇ ಉಂಟಾಗುತ್ತವೆ!!.
೫) ಮುಂದಿನ ಕತೆ -ಚಂಡಶಾಸನನದು , ಜನ್ನನ ಅನಂತನಾಥ ಪುರಾಣದಿಂದ ಆರಿಸಿಕೊಂಡದ್ದು. ಚಂಡಶಾಸನ ಎಂಬ ರಾಜನು ತನ್ನ ಗೆಳೆಯ ರಾಜ ವಸುಷೇಣನಲ್ಲಿಗೆ ಅತಿಥಿಯಾಗಿ ಹೋದಾಗ ಅವನ ಹೆಂಡತಿ ಸುನಂದಾದೇವಿಯನ್ನು ಕಂಡು ಮರುಳಾಗಿ ಅವಳನ್ನು ಕದ್ದೊಯ್ಯುತ್ತಾನೆ ರಾವಣನ ಹಾಗೆ . ಅವಳ ಗಂಡನು ತನ್ನ ಸೈನ್ಯವನ್ನು ತೆಗೆದುಕೊಂಡು ಯುದ್ಧಕ್ಕೆ ಹೋಗುತ್ತಾನೆ. ಚಂಡಶಾಸನನು ಎಷ್ಟೇ ಅವಳನ್ನು ಒಲಿಸಿಕೊಳ್ಳಲು ಪ್ರಯತ್ನಿಸಿದರೂ ಅವಳು ಮರುಳಾಗಳು ಸೀತೆಯ ಹಾಗೆ. ಆದರೆ ಮುಂದೆ ಕತೆ ದುರಂತದಲ್ಲಿ ಮುಗಿತಾಯ ಹೊಂದುತ್ತದೆ. ಗಂಡ ಸತ್ತ ಸುದ್ದಿಯನ್ನ್ನು ಅವಳು ನಂಬಿದರೆ ಮನಸ್ಸು ಬದಲಿಸಿಯಾಳು ಎಂದು ಅವನ ಕೃತಕ ತಲೆಯನ್ನು ಅವಳಿಗೆ ತೋರಿಸುತ್ತಾನೆ. ಅವಳೋ ದುಃಖದಿಂದ ಸತ್ತುಬಿಡುತ್ತಾಳೆ. ಚಂಡಶಾಸನನಾದರೋ ತೀವ್ರ ದುಃಖದಿಂದ ಅವಳ ದೇಹದ ಜತೆಗೇ ತಾನೂ ಸಹಗಮನ ಮಾಡುತ್ತಾನೆ. ರಾಜನೆಂಥವನೇ ಆಗಲಿ ತಾವು ಅವನನ್ನು ಅನುಸರಿಸಬೇಕೆಂದು ಅವನ ರಾಣಿಯರೂ ಅವನನ್ನು ಹಿಂಬಾಲಿಸುತ್ತಾರೆ. ಅತ್ತ ಆ ಸುನಂದಾದೇವಿಯ ಗಂಡನು ಇದೆಲ್ಲವನ್ನು ನೋಡಿ ವೈರಾಗ್ಯ ಹೊಂದಿ ರಾಜ್ಯವನ್ನು ತೊರೆದು ತಪಸ್ಸಿಗೆ ತೆರಳಿದನು.
೬) ಕೊನೆಯ ಕತೆ ದ್ರೌಪದಿ(ಸೈರಂಧ್ರಿ) , ಕೀಚಕರದು . ಇದು ಕುಮಾರವ್ಯಾಸನ ಭಾರತದಿಂದ ಆಯ್ದದ್ದು.
ಈ ಪುಸ್ತಕವು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ( http://www.dli.gov.in/ ) ತಾಣದಲ್ಲಿ ಇದೆ.
Comments
ಶ್ರೀಕಾಂತರವರಿಗೆ, DLI ನಿಜಕ್ಕು
ಶ್ರೀಕಾಂತರವರಿಗೆ, DLI ನಿಜಕ್ಕು ಆಸಕ್ತಿದಾಯಕವಾಗಿದೆ, ಮೊದಲು ನನ್ನ ಪರದೆಯಲ್ಲಿ ಖಾಲಿ ಪುಟಗಳಷ್ಟೆ ಬರುತ್ತಿದ್ದವು, ಸರಿಪಡಿಸಿದೆ ಈಗ ಅರಾಮವಾಗಿ ಅಲ್ಲಿರುವ ಎಲ್ಲ ಪುಸ್ತಕಗಳನ್ನು ಓದಬಹುದು, ಕನ್ನಡ ಶುದ್ದ ಸಾಹಿತ್ಯಕ್ಕೆ ಸಂಬಂದಿಸಿದಂತೆ, ೪೦೦ ಅದಿಕ ಪುಸ್ತಕ ೯೦೦೦೦ ಅದಿಕ ಪುಟಗಳು !!! , ಹುಡುಕುತ್ತಿದ್ದಂತೆ ಆಶ್ಚರ್ಯ ೧೯೦೦ ರಲ್ಲಿ ಪ್ರಕಟವಾಗ ಪುಸ್ತಕ ಕತೆಗಳೆಲ್ಲ ಇವೆ, ಮಹಾತ್ಮ , ಬೇವು ಬೆಲ್ಲ ದಂತ ಒಂದೆರಡು ಕತೆ ಓದಿದೆ, ನಂಬಲೆ ಸಾದ್ಯವಿಲ್ಲ, ಬೇವು ಬೆಲ್ಲ ಪುಸ್ತಕದ ಬೆಲೆ ೬ ಪೈಸೆ, ಮತ್ತು ನಾನು ಹುಟ್ಟಿದ ವರ್ಷ ೧೯೫೯ರಲ್ಲಿ ಪ್ರಕಟವಾಗಿರುವ ಪುಸ್ತಕವದು, ಮಹಾತ್ಮದ ಬೆಲೆ ೨ ಆಣೆ, ೦ ಪೈಸೆಗಳು !!! ಥ್ಯಾಂಕ್ಸ್ ಇಂತಹ ವಿವರ ಒದಗಿಸುತ್ತಿರುವದಕ್ಕೆ. ನಾನು ಸಾದ್ಯವಾದಗಲೆಲ್ಲ ಅಲ್ಲಿರುವ ಕತೆಗಳನ್ನೆಲ್ಲ , ಓದಿ ಮುಗಿಸಲು ಪ್ರಯತ್ನಿಸುವೆ. ನಿಜಕ್ಕು ಇದೊಂದು ಉತ್ತಮ ಕಾರ್ಯ !
In reply to ಶ್ರೀಕಾಂತರವರಿಗೆ, DLI ನಿಜಕ್ಕು by partha1059
ಪಾರ್ಥರೇ,
ಪಾರ್ಥರೇ,
ಮೊದಲು ಅಲ್ಲಿ ಕನ್ನಡದ ೨೫೦೦೦ ಪುಸ್ತಕಗಳಿದ್ದವು , ಈಗ ಕೇವಲ ೩೫೦೦. ಉಳಿದೆಲ್ಲ ಭಾಷೆಗಳಲಿ ತಲಾ ೨೫/೩೫ ಸಾವಿರ ಪುಸ್ತಕ ಇವೆ. ಇದಕ್ಕೆ ಏನಾದರೂ ಮಾಡಬಹುದೋ ಯಾರಾದರೂ ನೋಡಿ, ಈ ತಾಣ ಇಂಡಿಯನ್ ಇನ್ಸ್ಟಿಟ್ಯೂಟ ಆಫ್ ಸೈನ್ಸ ನವರು ಹೋಸ್ಟ್ ಮಾಡಿದ್ದಾರೆ. ಅಲ್ಲಿ ಯಾರಾದರೂ ಯಾರಿಗಾದರೂ ಗೊತ್ತಿದ್ದವರಿದ್ದರೆ ಈ ಬಗ್ಗೆ ಹೀಗೇಕೆ ಅಂತ ವಿಚಾರಿಸುತ್ತೀರಾ ?
ಹಾಗೇನಾದರೂ ಒಂದು ವೇಳೆ ಮೊದಲಿನಂತೆ ಎಲ್ಲ ೨೫೦೦೦+ ಪುಸ್ತಕ ಲಭ್ಯವಾಗುವುದಾದರೆ ಹೇಗಿರುತ್ತದೆ, ನೋಡಿ?
(ನಾನಂತೂ ಅಲ್ಲಿರುವದರ ಪೈಕಿ ೧೫೦೦ ಪುಸ್ತಕ ತಿರುವಿ ಹಾಕಬೇಕಂತ ಮಾಡಿದ್ದೇನೆ . ಈ ತನಕ ೩೦ ಪುಸ್ತಕ ಮುಗಿಸಿದ್ದೇನೆ. ಯಾವದೇ ವಿಶೇಷ ಸಂಗತಿ ತಿಳಿದು ಬಂದಲ್ಲಿ ಸಂಪದದಲ್ಲಿ ಈ ಸರಣಿಯಲ್ಲಿ ಬರೆದು ತಿಳಿಸಬೇಕೆಂದು ಮಾಡಿರುವೆ. )
In reply to ಶ್ರೀಕಾಂತರವರಿಗೆ, DLI ನಿಜಕ್ಕು by partha1059
ಪಾರ್ಥರೆ ನಮಸ್ಕಾರಗಳು. ನಾನು ಸಹ
ಪಾರ್ಥರೆ ನಮಸ್ಕಾರಗಳು. ನಾನು ಸಹ ಅನೇಕ ಪ್ರಯತ್ನ ಮಾಡಿದರೂ ತೆರದ ಪುಸ್ತಕದ ಖಾಲಿ ಪುಟಗಳೆ ಕಾಣುತ್ತದೆ. ನನಗೂ ಸಹಾಯ ಮಾಡಿ ನನಗೂ ಪುರಾತನ ಪುಸ್ತಕ ಗಳನ್ನು ಓದುವ ಆಸೆ. ಶ್ರೀಕಾಂತರ ಡಿ.ಎಲ್. ಐ ಪರಿಚಯ ಲೇಖನಕ್ಕೆ ನನ್ನ ಅಭಿನಂದನೆಗಳು................ರಮೇಶ್ ಕಾಮತ್
In reply to ಪಾರ್ಥರೆ ನಮಸ್ಕಾರಗಳು. ನಾನು ಸಹ by swara kamath
ಹಿರಿಯರೇ ನೀವ್ ಅದನ್ನು ಓದಲು
ಹಿರಿಯರೇ ನೀವ್ ಅದನ್ನು ಓದಲು ಸಮಸ್ಯೆ ಇದೆ ಎಂದು ಹೇಳಿದ್ದು ನೋಡಿ ನಾ ಅಲ್ಲಿಗೆ ಹೋಗಿ ನೋಡಿದಾಗ ನನಗೂ ಓದಲು ಬರೀ ಖಾಲಿ ಹಾಳೆ ಕಾನಿಸಿತು ಆಮೆಲೆ ಅದು ಬ್ರೌಸೆರ್ನಲ್ಲಿ ಅಥವಾ ಸಿಸ್ಟಂಗೆ ಒಂದು ಪುಟ್ಟ ಸಾಫ್ಟ್ವೇರ್(atiff ) http://www.alternatiff.com/ ಹಾಕಿಕೊಂಡು ರೆಜಿಸ್ಟರ್ ಮಾಡಿದರೆ ನೀವೂ ಓದಬಹದು..ಅದೆಲ್ಲವನ್ನು ಪ್ರಾಕ್ಟಿಕಲ್ ಆಗಿ ಮಾಡಿರುವೆ..ಆ ಬಗ್ಗೆ ಇಲ್ಲಿ ಚಿತ್ರ ಸಮೇತ ಬರಹ .ನಿರೀಕ್ಷಿಸಿ...
ಶುಭವಾಗಲಿ..
\।
ಶ್ರೀಕಾಂತ್ ಅವರೇ-ನೀವೂ ಆಗಾಗ ಕೆಲ
ಶ್ರೀಕಾಂತ್ ಅವರೇ-ನೀವೂ ಆಗಾಗ ಕೆಲ ತಾಂತ್ರಿಕ-ಸಾಮಾನ್ಯ ಜ್ಞಾನದ ವಿಷ್ಯ-ಕೊಂಡಿ ಕೊಟ್ಟು ನಮ್ಮನ್ನು ಆ ವಿಷಯಗಳ ಬಗ್ಗೆ ತಿಳಿವ ಹಾಗೆ ಮಾಡುವಿರಿ..
ಈ ಬರಹ ಈಗ ನೋಡಿದೆ-ಓದಿದೆ-ಈ ಹಿಂದೆ ಸಂಪದದಲ್ಲಿ ಸ್ಫಗಟ್ಟಿ (!!)ಎಂದು ಹೆಸರಾದ (ಅವರ ಹೆಸರೂ ನೆನಪಿಗೆ ಬರ್ತಿಲ್ಲ )ಒಬ್ಬರು ಈ ಡಿ ಎಲ್ ಐ ಬಗ್ಗೆ ಬರೆದಿದ್ದರು -ಅದರಲ್ಲಿ ಯಾವೆಲ್ಲ ಪುಸ್ತಕಗಳು ಇವೆ ಎಂದೆಲ್ಲ ಇತ್ತು..ನಾನು ಅದನ್ನು ಅಸ್ಟಾಗಿ ಗಮನಿಸಿರಲಿಲ್ಲ.
ಆದರೆ ಈಗ ನಿಮ್ಮ ಬರಹ ಮತ್ತು ಗುರುಗಳ(ಶ್ರೀಯುತ ಪಾರ್ಥ ಸಾರಥಿ ಅವರು)ಮತ್ತು ಹಿರಿಯರ (ಸ್ವರ ಕಾಮತ್ )ಪ್ರತಿಕ್ರಿಯೆ ಅವರ ಅನುಭವ ಗಮನಿಸಿ ನಾನೂ ಅದನ್ನು ನೋಡಿ ಕೆಲ ಪುಸ್ತಕ ಡೌನ್ಲೋಡ್ ಮಾಡಿದೆ ಓದಿದೆ....
ಈ ಬಗ್ಗೆ ವಿವರಣೆಯ ಬರಹದ(ಚಿತ್ರ -ಫೈಲ್ ಓಪನ್ ಕ್ಲೋಸ್ -ಡೌನ್ಲೋಡ್ ಇತ್ಯಾದಿ) ಸಮೇತ ಅಗತ್ಯ ಇದೆ ಅನ್ಸುತ್ತೆ..(ಸ್ವರ ಕಾಮತ್ ಅವರ)ಸಂಶಯಕ್ಕೆ ಆ ಫೈಲು ಓದಲು ತೊಂದರೆ ಆಗುತ್ತಿರುವ ಬಗ್ಗೆ..
ಅದಕಾಗಿ ನಾನು ಆ ಬಗ್ಗೆ ಬರಹ ಬರೆದು ಸೇರಿಸುವೆ..ಓದಿ..ನೋಡಿ..ಪ್ರತಿಕ್ರಿಯಿಸಿ..
ಉತ್ತಮ ಬರಹ-ನಾ ಮರೆತಿದ್ದ ಮಾಹಿತಿ ಮತ್ತೆ ನೆನಪಿಗೆ ಬಂತು..
ನಿಮಗೆ ಅನಂತ ನನ್ನಿ
ಶುಭವಾಗಲಿ..
\।