ಪುಸ್ತಕ ಪರಿಚಯ

ಲೇಖಕರು: Ashwin Rao K P
December 15, 2022
ಲೇಖಕ, ಅಂಕಣಕಾರ ಯೋಗೀಂದ್ರ ಮರವಂತೆ ಅವರು ಪಶ್ಚಿಮ ಕರಾವಳಿಯಲ್ಲಿರುವ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮರವಂತೆ ಗ್ರಾಮದವರು. ಇಂಗ್ಲೆಂಡ್ ನ  ಬ್ರಿಸ್ಟಲ್ ನಗರದ "ಏರ್ ಬಸ್"  ಕಂಪನಿಯಲ್ಲಿ ವಿಮಾನಶಾಸ್ತ್ರ ತಂತ್ರಜ್ಞರಾಗಿರುವ ಅವರು ಬ್ರಿಟನ್ನಿನ ಜೀವನಾನುಭವಗಳನ್ನು ಅಂಕಣಗಳಾಗಿ ಪ್ರಬಂಧಗಳಾಗಿ ಕನ್ನಡದ ಪತ್ರಿಕೆಗಳಲ್ಲಿ ಹಂಚಿಕೊಂಡಿದ್ದಾರೆ. ಸುಧಾ ವಾರಪತ್ರಿಕೆಯ 2019 ಹಾಗು 2021ರ  ಯುಗಾದಿ ಸ್ಪರ್ಧೆಗಳಲ್ಲಿ  ಇವರ ಪ್ರಬಂಧಗಳು  ಬಹುಮಾನ ಪಡೆದಿವೆ. ಯೋಗೀಂದ್ರ ಮರವಂತೆ ಅವರ ನೂತನ ಪ್ರಬಂಧ…
ಲೇಖಕರು: Ashwin Rao K P
December 13, 2022
ಚರಿತ್ರೆ ಎಂದರೆ ಏನು ಎಂಬ ಪ್ರಶ್ನೆ ಪ್ರತಿಯೊಬ್ಬ ಚರಿತ್ರೆಕಾರನಿಗೂ ಕಾಡಲೇಬೇಕಾದ ಹಾಗೂ ಎಂದೂ ಕೊನೆಯಾಗಲಾರದ ಪ್ರಶ್ನೆ. ಚರಿತ್ರೆ, ಚರಿತ್ರೆಕಾರ, ಚಾರಿತ್ರಿಕ ಸತ್ಯ ಮುಂತಾದ ಸಂಗತಿಗಳಿಗೆ ಅಂತಿಮ ಎನ್ನಬಹುದಾದ ತೀರ್ಮಾನಗಳನ್ನು ನೀಡಲು ಸಾಧ್ಯವಿಲ್ಲ. ಏಕೆಂದರೆ ಚರಿತ್ರೆ ಒಂದು ರಚನೆಯಾದರೂ ಅದು ಅಂತಿಮ ರಚನೆಯಲ್ಲ. ಆದರೆ ಚರಿತ್ರೆ ರಚನೆ ಇರುವುದೇ ಪುನಾರಚನೆಗಾಗಿ ಎನ್ನುವುದು ವಾಸ್ತವ. ಕಾರ್ ಚರಿತ್ರೆಯ ಜೀವಂತಿಕೆಯನ್ನು ಸರಿಯಾಗಿಯೇ ಗ್ರಹಿಸಿದ ಕಾರಣದಿಂದಾಗಿ ಇದನ್ನೊಂದು ನಿರಂತರ ಪ್ರಕ್ರಿಯೆ ಹಾಗೂ…
December 12, 2022
ನಮ್ಮ ಪುಣ್ಯಭೂಮಿಯನ್ನೂ ಒಳಗೊಂಡಂತೆ ಪ್ರಾಚೀನ ಕಾಲದಿಂದಲೂ ವಿಶ್ವದ ಹಲವಾರು ಸಂಸ್ಕೃತಿ ಮತ್ತು ನಾಗರಿಕತೆಗಳಲ್ಲಿ ‘ದೇವದಾಸಿ’ ಪದ್ಧತಿ ಅಧಿಕೃತವಾಗಿಯೇ ರೂಢಿಯಲ್ಲಿತ್ತೆಂಬ ಅನೇಕ ವಿವರಗಳೊಂದಿಗೆ ಡಾ. ಜಗದೀಶ್ ಕೊಪ್ಪ ಅವರು ಈ ಕೃತಿಯನ್ನು ಪ್ರಾರಂಭಿಸುತ್ತಾರೆ. ಒಟ್ಟು ಹದಿನೈದು ಅಧ್ಯಾಯಗಳಲ್ಲಿ ಈ ಪದ್ಧತಿಯ ಉಗಮ ಮತ್ತು ಬೆಳವಣ ಗೆಯ ಚಾರಿತ್ರಿಕ ಘಟ್ಟಗಳನ್ನು, ಸಾಂಸ್ಕೃತಿಕ ಪಲ್ಲಟಗಳನ್ನು ನಿರೂಪಿಸಿದ್ದಾರೆ. ಇಪ್ಪತ್ತೊಂದನೆಯ ಶತಮಾನದ ಈ ಗಳಿಗೆಯವರೆಗೂ ಅನಧಿಕೃತವಾಗಿ, ಗುಪ್ತವಾಗಿ ಈ ಅನಿಷ್ಟ ಪದ್ಧತಿ…
ಲೇಖಕರು: Ashwin Rao K P
December 10, 2022
ಡಾ. ವಿರೂಪಾಕ್ಷ ದೇವರಮನೆ ಮೂಲತಃ ಹೊಸಪೇಟೆಯ ನಾಗೇನಹಳ್ಳಿಯವರು. ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಹಾಗೂ ಮಂಗಳೂರಿನ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯಲ್ಲಿ ಮನೋವೈದ್ಯಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು 2008ರಿಂದ ಉಡುಪಿಯ ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ಮನೋವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಲ್ಲಿ ಲೇಖಕರಾದ ವೈದ್ಯರು ಮಾನವ ಸಂಬಂಧಗಳು, ಸಂಬಂಧಗಳಲ್ಲಿ ಸಂವಹನ ಹಾಗೂ ಸಾಮರಸ್ಯ, ಪೇರೆಂಟಿಂಗ್, ಮಕ್ಕಳ ಆರೈಕೆ…
December 09, 2022
ಸಣ್ಣಕತೆಯ ತೀವ್ರತೆ ಮತ್ತು ಕಾದಂಬರಿಯ ವಿಸ್ತಾರ -ಎರಡನ್ನೂ ಈ ಕಾದಂಬರಿ ಹೊಂದಿದೆ. ಅದೇ ಕಾರಣಕ್ಕೆ ಇದಕ್ಕೆ ಅಪರಿಮಿತ ವೇಗ ಪ್ರಾಪ್ತಿಯಾಗಿದೆ. ಓದಿ ಮುಗಿಸಿದ ನಂತರ ಕಾದಂಬರಿ ನಮ್ಮೊಳಗೆ ವಿಸ್ತರಿಸುತ್ತಾ ಹೋಗುತ್ತದೆ. ಹಲವು ಪ್ರಶ್ನೆಗಳನ್ನೂ ಹುಟ್ಟುಹಾಕುತ್ತದೆ. ನಿಜ ಮತ್ತು ಸುಳ್ಳನ್ನು ಹೊದ್ದುಕೊಂಡಿರುವ, ಯಾವುದು ನಿಜ ಯಾವುದು ಸುಳ್ಳು ಎಂದು ಗುರುತಿಸಲಿಕ್ಕಾಗದ ಮಾಯೆಯೊಂದು ಈ ಕತೆಯನ್ನು ತನಗೇ ತಾನೇ ಹೇಳಿಕೊಳ್ಳುತ್ತಿರುವಂತಿದೆ ಎನ್ನುತ್ತಾರೆ ಲೇಖಕ ಜೋಗಿ. ತಮ್ಮ ‘ಆರಂಭದ ಮಾತು’ ಇಲ್ಲಿ…
ಲೇಖಕರು: Ashwin Rao K P
December 08, 2022
ರಂಜನಿ ರಾಘವನ್ ಅವರು ಮೂಲತಃ ಬೆಂಗಳೂರಿನವರು. ಬರಹಗಾರ್ತಿ, ನಟಿ, ಸೃಜನಶೀಲ ನಿರ್ದೇಶಕಿಯೂ ಆಗಿದ್ದಾರೆ. ಪ್ರಸ್ತುತ ಕಲರ್ಸ್ ಕನ್ನಡದ ‘ಕನ್ನಡತಿ’ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ. ರಂಜನಿ ರಾಘವನ್ ಅವರ ಚೊಚ್ಚಲ ಕಾದಂಬರಿ ‘ಸ್ವೈಪ್ ರೈಟ್’. ‘ನಿನ್ನ ಬೆರಳಂಚಲಿ ನಾನು’ ಎಂಬ ಉಪಶೀರ್ಷಿಕೆಯನ್ನು ಈ ಕೃತಿ ಹೊಂದಿದೆ. ಕೃತಿಯಲ್ಲಿ ಕತೆಗಾರ ವಸುಧೇಂದ್ರ ಅವರ ಮುನ್ನುಡಿಯ ಮಾತುಗಳಿವೆ. ಅವರು ಹೇಳುವಂತೆ, ಬೆಂಗಳೂರಿನ ಯುವಜನತೆ ತನ್ನದೇ ಆದ ವಿಭಿನ್ನ ಪರಿಸರವನ್ನು ಕಟ್ಟಿಕೊಂಡಿದೆ. ದೊಡ್ಡ ಕನಸುಗಳು,…