ಪುಸ್ತಕ ಪರಿಚಯ
ಲೇಖಕರು: Ashwin Rao K P
October 18, 2023

“ಓದಿನ ಒಕ್ಕಲು” ಕೃತಿಯು ರಂಗನಾಥ ಕಂಟನಕುಂಟೆ ಅವರ ಸಾಹಿತ್ಯ ಚಿಂತನೆಯ ಬರೆಹಗಳ ಸಂಕಲನವಾಗಿದೆ. ಓದಿನ ಒಕ್ಕಲು' ಸಾಹಿತ್ಯ ಚಿಂತನೆಯ ಬರೆಹಗಳು, ಸಾಹಿತ್ಯದ ಮೂಲಕ ಸಮಾಜ, ಸಂಸ್ಕೃತಿ, ಅಧಿಕಾರ ರಾಜಕಾರಣ, ಭಾಷೆ, ಜನಪದ ಸಾಹಿತ್ಯ, ಹೆಣ್ಣು ಕಥನಗಳನ್ನು ಒಳಗೊಂಡಂತೆ ಲೋಕದ ಸ್ಥಾಪಿತ ಮೌಲ್ಯಗಳನ್ನು, ಬದುಕಿನ ವಿವಿಧ ಮಗ್ಗುಲುಗಳನ್ನು ಮುಖಾಮುಖಿಯಾಗಲು ಯತ್ನಿಸ ಲಾಗಿದೆ. ಸಾಹಿತ್ಯದ ನೆಲೆಯಲ್ಲಿ ನಿಂತು ಲೋಕಸಂವಾದ ಮತ್ತು ವ್ಯಕ್ತಿಯ ಒಳಸಂವಾದ ನಡೆಸಲಾಗಿದೆ. ಲೋಕಸಂವಾದ ನಡೆಸುತ್ತಲೇ ಸಾಹಿತ್ಯ ಸಂವಾದವನ್ನು…
ಲೇಖಕರು: Ashwin Rao K P
October 16, 2023

ಬಸಯ್ಯ ಸ್ವಾಮಿ ಕಮಲದಿನ್ನಿ (ಡಾ ಬಸಯ್ಯ ಸ್ವಾಮಿ) ಅವರು “ಕನ್ನಡ ಕಾದಂಬರಿಗಳಲ್ಲಿ ವಲಸೆ ಪ್ರಜ್ಞೆ" ಎಂಬ ಮಾಹಿತಿಪೂರ್ಣ ಕೃತಿಯನ್ನು ಹೊರತಂದಿದ್ದಾರೆ. ಸುಮಾರು ೧೭೦ ಪುಟಗಳ ತಮ್ಮ ಕೃತಿಗೆ ಬಸಯ್ಯ ಸ್ವಾಮಿಯವರು ಬರೆದ ಲೇಖಕರ ಮಾತಿನಿಂದ ಆಯ್ದ ಸಾಲುಗಳು ಇಲ್ಲಿವೆ...
‘ದೊಡ್ಡ ಕಣ್ಣಿಂದ ಹಿಂದೂಸ್ಥಾನವೆಲ್ಲ ತನ್ನದು' ಎಂಬ ಹೆಮ್ಮೆ ಕೊಚ್ಚಬಹುದಾದರೂ ಯಾವುದನ್ನು ಮುಟ್ಟಿದರೂ ತನ್ನದಲ್ಲ ಎಂಬ ಭಾವ”– ಚಿಗುರಿದ ಕನಸು
“ಒಬ್ಬ ಮನುಷ್ಯ ತನ್ನ ದೇಶವನ್ನು ಏಕೆ ಪ್ರೀತಿಸುತ್ತಾನೆ? ಏಕೆಂದರೆ ಅಲ್ಲಿ ರೊಟ್ಟಿ…
ಲೇಖಕರು: Ashwin Rao K P
October 13, 2023

ಭರವಸೆಯ ಕವಯತ್ರಿ ಸುಮತಿ ಕೃಷ್ಣಮೂರ್ತಿ ಅವರು ಬರೆದಿರುವ “ಹೆಣ್ಣಾಲದ ಮರ" ಎನ್ನುವ ಕವನ ಸಂಕಲನ ಇತ್ತಿಚೆಗೆ ಬಿಡುಗಡೆಯಾಗಿದೆ. ಸುಮತಿಯವರ ಕವನಗಳ ಬಗ್ಗೆ ಸಾಹಿತಿ ಎಚ್ ಎಸ್ ವೆಂಕಟೇಶಮೂರ್ತಿಯವರು ತಾವು ಬರೆದ ಮುನ್ನುಡಿಯಲ್ಲಿ ಹೀಗೆ ಅಭಿಪ್ರಾಯ ಪಟ್ಟಿದ್ದಾರೆ...
“ಸುಮತಿ ಕೃಷ್ಣಮೂರ್ತಿ ತಮ್ಮ ಅಪಾರವಾದ ಕಾವ್ಯ ಪ್ರೀತಿಯಿಂದ ನನಗೆ ಪ್ರಿಯರಾದವರು. ಹಿಂದಿನಿಂದ ಗೊತ್ತಾದದ್ದು ಅವರು ಸ್ವತಃ ಒಳ್ಳೆಯ ಕವಿ ಎಂಬುದು. ತಮ್ಮ ಕವಿತೆಗಳ ಹಸ್ತ ಪ್ರತಿ ಕಳಿಸಿ ಮುನ್ನುಡಿಯಾಗಿ ಕೆಲವು ಮಾತು ಬರೆದುಕೊಡುವಿರಾ…
ಲೇಖಕರು: addoor
October 12, 2023

ಇದರಲ್ಲಿವೆ "ಬದುಕು ಬದಲಿಸುವ 18 ಜನರ” ಕಥೆಗಳು. ಪ್ರತಿಯೊಂದು ಕಥೆ ಓದಿದಾಗಲೂ ನಮ್ಮಲ್ಲಿ ಮೂಡುವ ಪ್ರಶ್ನೆ: ಬದುಕಿನಲ್ಲಿ ಹೀಗೂ ಗೆಲ್ಲಲು ಸಾಧ್ಯವೇ? “ಸಾಧ್ಯ" ಎಂದು ಆಗಷ್ಟೇ ಓದಿದ ಸತ್ಯಕಥೆ ಸಾರಿಸಾರಿ ಹೇಳುತ್ತದೆ.
“ಪ್ರತಿ ಅವಮಾನ ನಿಮ್ಮ ಆತ್ಮಸ್ಥೈರ್ಯ ಹೆಚ್ಚಿಸಲಿ” ಎಂಬ ಮೊದಲ ಬರಹವನ್ನು ಲೇಖಕರು ಶುರು ಮಾಡೋದು ಹೀಗೆ: "ನಾವು ಯಾವಾಗ್ಲು ಹಾಗೆ, ಬೇರೆಯವರಿಗೆ ಹೋಲಿಕೆ ಮಾಡಿಕೊಂಡು ನಮ್ಮನ್ನು ನಾವೇ ಮರೆತು ಬಿಡುತ್ತೇವೆ. "ಛೇ, ಅವನ್ನ ನೋಡು ಹಾಗಿದಾನೆ. ನನ್ನ ನೋಡು ಹೀಗಿದೀನಿ. ಎಲ್ಲದಕ್ಕೂ…
ಲೇಖಕರು: Ashwin Rao K P
October 11, 2023

ಛಂದ ಪುಸ್ತಕ ಪ್ರಕಾಶನದ ನೂರನೇ ಪುಸ್ತಕವಾಗಿ “ಸರಿಗನ್ನಡಂ ಗೆಲ್ಗೆ" ಪ್ರಕಟವಾಗಿದೆ. ಪತ್ರಕರ್ತ ಹಾಗೂ ಮುಖಪುಟ ವಿನ್ಯಾಸಗಾರರಾದ ‘ಅಪಾರ' ಇವರು ಈ ಪುಸ್ತಕದ ಲೇಖಕರು. ಇವರು ಕನ್ನಡದ ಬೆರಗನ್ನು ಕುರಿತ ೬೦೦ ಸ್ವಾರಸ್ಯಕರ ಕಿರು ಟಿಪ್ಪಣಿಗಳನ್ನು ಈ ಪುಸ್ತಕದಲ್ಲಿ ಪ್ರಕಟಿಸಿದ್ದಾರೆ. ಇವೆಲ್ಲವೂ ‘ಕಲರ್ಸ್ ಕನ್ನಡ’ ಟಿವಿ ಚಾನೆಲ್ ನಲ್ಲಿ ಪ್ರಸಾರವಾದ ಕಿರುಟಿಪ್ಪಣಿಗಳು. ಕಿರುತೆರೆಯಲ್ಲಿ ಬರುತ್ತಿದ್ದ “ಕನ್ನಡತಿ" ಧಾರಾವಾಹಿಯನ್ನು ಇನ್ನಷ್ಟು ಆಸಕ್ತಿದಾಯಕವನ್ನಾಗಿಸಲು ಮಾಡಿದ ಕಿರು ಪ್ರಯತ್ನವೇ ‘…
ಲೇಖಕರು: Ashwin Rao K P
October 09, 2023

ಮಕ್ಕಳಿಗಾಗಿ ಕಾದಂಬರಿ ಬರೆಯುವವರು ಅಪರೂಪದಲ್ಲಿ ಅಪರೂಪ. ಏಕೆಂದರೆ ಮಕ್ಕಳಿಗೆ ಸುದೀರ್ಘ ಓದು ಹಿಡಿಸುವುದಿಲ್ಲ. ಅಷ್ಟೊಂದು ತನ್ಮಯತೆಯಿಂದ ಓದಲು ಅವರಿಗೆ ಕಷ್ಟವಾಗುತ್ತದೆ. ಓದುತ್ತಾ ಓದುತ್ತಾ ಹಿಂದಿನ ಕಥೆ ಮರೆತುಹೋಗುತ್ತದೆ ಎಂಬೆಲ್ಲಾ ಆಪಾದನೆಗಳ ನಡುವೆ ಲೇಖಕರಾದ ಹ ಸ ಬ್ಯಾಕೋಡ ಅವರು “ಜುಟ್ಟಕ್ಕಿ" ಎನ್ನುವ ಸ್ವಾರಸ್ಯಕರವಾದ ಕಾದಂಬರಿಯನ್ನು ಹೊರತಂದಿದ್ದಾರೆ. ಈ ಕಾದಂಬರಿಗೆ ಅವರು ಬರೆದ ಲೇಖಕರ ಮಾತಿನಿಂದ ಆಯ್ದ ಕೆಲವು ಸಾಲುಗಳು ಇಲ್ಲಿವೆ...
“ಅಕ್ಷರ ಕಲಿಕೆಗೂ ಮುನ್ನ ಮುಗ್ಧ ಮಕ್ಕಳಲ್ಲಿ ಸರಿ…