ಪುಸ್ತಕ ಪರಿಚಯ

ಲೇಖಕರು: Ashwin Rao K P
October 29, 2022
ಮಂಗಳೂರಿನ ಸಾವಯವ ಕೃಷಿಕರ ಬಳಗವು ‘ವಿಷಮುಕ್ತ ಅನ್ನದ ಬಟ್ಟಲಿನತ್ತ ಪುಟ್ಟ ಹೆಜ್ಜೆ' ಎಂಬ ಪರಿಕಲ್ಪನೆಯ ಮಾಲಿಕೆಯ. ಮೊದಲ ಕೃತಿಯಾಗಿ ‘ಕೈತೋಟ ಕೈಪಿಡಿ' ಎಂಬ ಪುಟ್ಟ ಆದರೆ ಮಹತ್ವಪೂರ್ಣ ಪುಸ್ತಕವನ್ನು ಹೊರತಂದಿದ್ದಾರೆ. ಸ್ವತಃ ಪ್ರಗತಿಪರ, ಸಾವಯವ ಕೃಷಿಕರಾದ ಪುತ್ತೂರಿನ ಮಂಜುನಾಥ ಫಾರ್ಮ್ಸ್ ನ ಹರಿಕೃಷ್ಣ ಕಾಮತ್ ಅವರು ಉತ್ತಮ ಮಾಹಿತಿಗಳನ್ನು ವಿವಿಧ ಮೂಲಗಳಿಂದ ಹೆಕ್ಕಿ ತಂದು ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಪುಸ್ತಕಕ್ಕೆ ಮೊದಲ ಮಾತನ್ನು ಬರೆದಿದ್ದಾರೆ, ಸಾವಯವ ಕೃಷಿಕ ಗ್ರಾಹಕ ಬಳಗ ಇದರ…
ಲೇಖಕರು: Ashwin Rao K P
October 27, 2022
ಕೆ ಆರ್ ಉಮಾದೇವಿ ಉರಾಳ ಇವರ ನೂತನ ಪ್ರಬಂಧಗಳ ಸಂಕಲನವೇ ‘ಮುಳ್ಳುಬೇಲಿಯ ಹೂಬಳ್ಳಿ’. ಹಲವು ನೆನಪುಗಳು ಜೀವನ ತತ್ವವೊಂದನ್ನು ಅರಿವಿಗೆ ತರುವುದಕ್ಕೆ 'ಬೇವೆಂದೆಣಿಸಿದ್ದು ಬೆಲ್ಲವೆಂದೆನಿಸುವಾಗ' ಪ್ರಬಂಧ ಸಾಕ್ಷಿ. ಒಂದು ರಸ್ತೆ ಅಪಘಾತದ ನೋವು ಹಿಂಸೆಗಳಿಂದ ಕೊನೆಗೂ ಚೇತರಿಸಿಕೊಂಡು ವಾಕರಿನಲ್ಲಿ ನಡೆಯಲು ಪ್ರಾರಂಭಿಸಿದಾಗ ಲೇಖಕಿಗೆ ಸರಳ ತತ್ವ ಸಾಕ್ಷಾತ್ಕಾರವಾದ ಅನುಭವವಾಗುತ್ತದೆ. 'ಇದೆ' ಅಂದುಕೊಂಡರೆ ಎಲ್ಲವೂ ಇದೆ: 'ಇಲ್ಲ' ಅಂದುಕೊಂಡರೆ ಯಾವುದೂ ಇಲ್ಲ. ಹಾಗಾಗಿ 'ಇದೆ' ಎಂಬ ಭಾವ ತುಂಬಿದ ಬದುಕೇ…
ಲೇಖಕರು: addoor
October 27, 2022
ಕನ್ನಡದಲ್ಲಿ ಮಕ್ಕಳ ಸಾಹಿತ್ಯಕ್ಕೆ ಶ್ರೀನುಡಿ ಬರೆದವರೇ ಪಂಜೆ ಮಂಗೇಶರಾಯರು. ಅವರ ಹಲವು ಪದ್ಯಗಳು ಮೂರು ತಲೆಮಾರುಗಳ ಮಕ್ಕಳ ಬಾಯಿಯಲ್ಲಿ ನಲಿದಾಡಿದವು. ಮಕ್ಕಳಿಗೆ ಕನ್ನಡ ನುಡಿಯ ಸೊಗಡನ್ನು ಪರಿಚಯಿಸಿದವು. ಮಕ್ಕಳ ಪದಸಂಪತ್ತನ್ನು ಹೆಚ್ಚಿಸಿದವು. ಕನ್ನಡ ನಾಡಿನ ಹೆತ್ತವರ ಇಂಗ್ಲಿಷ್ ಮಾಧ್ಯಮದ ಮೋಹದಲ್ಲಿ, ಖಾಸಗಿ ಶಾಲೆಗಳ ಬಾಲವಾಡಿಗಳ ಇಂಗ್ಲಿಷ್ ಮಾಧ್ಯಮದ ಅಬ್ಬರದಲ್ಲಿ, ಬ್ರಿಟಿಷರು ತಮಗೆ ಬೇಕಾದ ಕಾರಕೂನರನ್ನು ರೂಪಿಸಲು ಆರಂಭಿಸಿದ "ಮೆಕಾಲೆ ಶಿಕ್ಷಣ ಪದ್ಧತಿ”ಯ ಅಂಧ ಅನುಸರಣೆಯಲ್ಲಿ, ಕ್ರಮೇಣ…
ಲೇಖಕರು: Ashwin Rao K P
October 25, 2022
ಲೇಖಕ ಗಿರಿರಾಜ ಬಿ ಎಂ ಅವರ ಕಥಾ ಸಂಕಲನ ಸ್ನೇಕ್ ಟ್ಯಾಟು. ಕೃತಿಯಲ್ಲಿ ಲೇಖಕರೇ ಹೇಳಿರುವಂತೆ, ೨೨ ವರ್ಷಗಳ ನಡುವೆ, ಆಗಾಗ ಬರೆದ ಇಲ್ಲಿನ ಕಥೆಗಳು ನನ್ನ ಬದುಕು, ಬದಲಾವಣೆ, ಬೆಳವಣಿಗೆಗೆ ಸಾಕ್ಷಿಯಾಗಿವೆ. ದಾಖಲೀಕರಣದ ವಿಷಯದಲ್ಲಿ ತುಂಬ ಸೋಂಬೇರಿಯಾಗಿರುವುದರಿಂದ ಹಲವಾರು ಕಥೆಗಳು ಕಳೆದುಹೋಗಿವೆ. ಅದ್ಹೇಗೊ ಇಲ್ಲಿನವು ಉಳ್ಕೊಬಿಟ್ಟವು. ಈಗ ಓದಿದರೆ ಕೆಲವು ವಾಕ್ಯಗಳು, ಈಡಿಯಂಗಳು ಬಾಲಿಶ ಅನಿಸಿದರೂ ಅವು ಅವತ್ತಿನ ನನ್ನ ನಿಜ ಅನಿಸಿಕೆಗಳಾದ್ದರಿಂದ, ಅದನ್ನು ತಿದ್ದಿ ಹಾಳೆ ಹಾಳು ಮಾಡುವ ಕೆಲಸಕ್ಕೆ…
ಲೇಖಕರು: Ashwin Rao K P
October 21, 2022
‘ಫಾಸಿಗೆ ಸಾಕ್ಷಿ' ಎಂಬ ಕಾದಂಬರಿಯನ್ನು ಬರೆದವರು ಮಾಲತಿ ಮುದಕವಿ ಇವರು. ಮಾಲತಿಯವರು ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿದ್ದಾರೆ. ಕನ್ನಡದ ಹಲವಾರು ಪತ್ರಿಕೆಗಳಲ್ಲಿ ಇವರ ಬರಹಗಳು ಬೆಳಕು ಕಂಡಿವೆ. ಹಲವಾರು ಬಹುಮಾನ, ಪುರಸ್ಕಾರಗಳೂ ಲಭಿಸಿವೆ.  ಮಾಲತಿ ಮುದಕವಿ ಅವರ ಕಾದಂಬರಿ ‘ಫಾಸಿಗೆ ಸಾಕ್ಷಿ’ಯಲ್ಲಿ ಓರ್ವ ವ್ಯಕ್ತಿ ಜೀವನದಲ್ಲಿ ಒಮ್ಮೊಮ್ಮೆ ಅತ್ಯಂತ ವಿಚಿತ್ರ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಒಮ್ಮೆ ಒಬ್ಬ ಮರಣದಂಡನೆ ಕೊಡುವ ವ್ಯಕ್ತಿಯನ್ನು ಭೆಟ್ಟಿಯಾಗುವ ಯೋಗವು ನನಗೆ…
ಲೇಖಕರು: addoor
October 20, 2022
ಎಂ.ಎಸ್. ಶ್ರೀರಾಮ್ ಅವರ ಎಂಟು ಸಣ್ಣಕತೆಗಳ ಸಂಗ್ರಹ “ತೇಲ್ ಮಾಲಿಶ್.” ಇದು ಅವರ ಮೂರನೆಯ ಕಥಾಸಂಕಲನ.  ಆಂಧ್ರಪ್ರದೇಶದ ನೆಲ್ಲೂರಿನಲ್ಲಿ 1962ರಲ್ಲಿ ಜನಿಸಿದ ಶ್ರೀರಾಮ್ ಉಡುಪಿ, ಬೆಂಗಳೂರು, ಮೈಸೂರು, ಗುಜರಾತಿನ ಆಣಂದ್‌ನಲ್ಲಿ ವ್ಯಾಸಂಗ ಮಾಡಿದವರು. ಹೈದರಾಬಾದಿನ ಸ್ವಯಂಸೇವಾ ಸಂಸ್ಥೆಯಲ್ಲಿ ಎರಡು ವರುಷ ಕೆಲಸ ಮಾಡಿದರು. ಅನಂತರ ಆಣಂದದ ಗ್ರಾಮೀಣ ನಿರ್ವಹಣಾ ಸಂಸ್ಥೆಯಲ್ಲಿ ಬೋಧಕರಾಗಿ, ಹೈದರಾಬಾದಿನ ಬೇಸಿಕ್ಸ್ ಸಂಸ್ಥೆಯಲ್ಲಿ ಉಪಾಧ್ಯಕ್ಷರಾಗಿ ಕೆಲಸ ನಿರ್ವಹಿಸಿದರು. ಈ ಎಲ್ಲ ಅನುಭವಗಳಿಂದ…
1