ಪುಸ್ತಕ ಪರಿಚಯ

October 20, 2022
ಕಾಡು ಎರಡು ಅಕ್ಷರದ ಈ ಶಬ್ದ ಹಲವರಿಗೆ ಪ್ರೀತಿ. ಇದರ ಗರ್ಭದಲ್ಲಿ ಅಡಗಿರುವ ವಿಸ್ಮಯ ಅನನ್ಯ. ಇಂತಹ ಕಾಡಿನ ಮಧ್ಯೆ ಇದ್ದುಕೊಂಡು ನೈಸರ್ಗಿಕ ಜೀವನಶೈಲಿ ಮೂಲಕ ಆರೋಗ್ಯಕರ ಬದುಕು ಸಾಗಿಸುತ್ತಿರುವ ಬುಡಕಟ್ಟು ಜನಾಂಗವೆಂದರೆ ಕುಣಬಿ ಸಮುದಾಯ. ಒಂದರ್ಥದಲ್ಲಿ ಹೇಳಬೇಕೆಂದರೆ ನಿಜವಾದ ಮಣ್ಣಿನ ಮಕ್ಕಳು ಎಂದು ಕರೆಯಿಸಿಕೊಳ್ಳಲು ಯೋಗ್ಯತೆ ಹೊಂದಿರುವವರು. ಕಾಡಿನ ತಪ್ಪಲಲ್ಲಿ ಇದ್ದರೂ ಸ್ಪಂದನಶೀಲ ಗುಣದೊಂದಿಗೆ ಸಾಂಸ್ಕೃತಿಕ ಸಿರಿವಂತಿಕೆ, ಪಾರಂಪರಿಕ ಜ್ಞಾನದ ಭಂಡಾರವನ್ನೇ ಹೊತ್ತ ಅನೇಕ ಸಮುದಾಯಗಳು ನಮ್ಮ…
1
ಲೇಖಕರು: Ashwin Rao K P
October 18, 2022
ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಜೀವನ ಚರಿತ್ರೆಯನ್ನು ಲೇಖಕರಾದ ಬೆ ಗೋ ರಮೇಶ್ ಅವರು ಸೊಗಸಾಗಿ, ಸಂಕ್ಷಿಪ್ತವಾಗಿ ‘ಶ್ರೀ ರಾಘವೇಂದ್ರ ಚರಿತ್ರೆ' ಎಂಬ ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಇವರು ತಮ್ಮ ಮುನ್ನುಡಿಯಲ್ಲಿ ರಾಘವೇಂದ್ರ ತೀರ್ಥರವರೆಗಿನ ೧೭ ಮಂದಿ ಯತಿಯರ ಹೆಸರು ಮತ್ತು ಕಾಲಾವಧಿಯನ್ನು ನೀಡಿದ್ದಾರೆ. ಶ್ರೀ ರಾಘವೇಂದ್ರ ತೀರ್ಥರ ಬಳಿಕ ಇಪ್ಪತ್ತು ಯತಿಗಳು ಶ್ರೀಮಠದ ಗುರುಗಳಾಗಿ ಹೋಗಿದ್ದಾರೆ. ಅವರ ಮುನ್ನುಡಿಯ ಪ್ರಮುಖಾಂಶ ಹೀಗಿದೆ  “ಶ್ರೀ ಮನ್ಮಧ್ವಾಚಾರ್ಯರ ವೇದಾಂತ ಸಾಮ್ರಾಜ್ಯ…
ಲೇಖಕರು: Ashwin Rao K P
October 15, 2022
‘ತಿರುಕ್ಕುರಳ್' ಪುಸ್ತಕವು ಕನ್ನಡದಲ್ಲಿ ರಾಧಾಕೃಷ್ಣ ಇವರಿಂದ ಭಾವಾನುವಾದಗೊಂಡು ಹೊರಬಂದಿದೆ. ಈ ಪುಸ್ತಕವು ‘ಅರಿವಿನೆಡೆಗೆ ಅರಿವಿನ ಹೆಜ್ಜೆ...' ಎಂದು ಮುಖಪುಟದಲ್ಲಿ ಮುದ್ರಿಸಿದ್ದಾರೆ. ಪುಸ್ತಕವನ್ನು ಮಹಾ ದಾರ್ಶನಿಕ ಕವಿ ತಿರುವಳ್ಳವವರಿಗೆ ಅರ್ಪಣೆ ಮಾಡಲಾಗಿದೆ.  ರಾಧಾಕೃಷ್ಣರು ತಮ್ಮ ಅನುಭವವನ್ನು ‘ಬಿಟ್ಟೆನೆಂದರೂ ಬಿಡದೀ ಮಾಯೆ' ಎಂಬ ಲೇಖನದಲ್ಲಿ ಹಂಚಿಕೊಂಡಿರುವುದು ಹೀಗೆ - ಹನ್ನೆರಡು ವರ್ಷಗಳ ಹಿಂದೆ ನನ್ನ ಗೆಳೆಯ ರಾಜೇಶ್  ಶೇಟ್ ರೊಂದಿಗೆ ತಿರುವನಂತಪುರ ಮತ್ತು ಕನ್ಯಾಕುಮಾರಿಯ…
ಲೇಖಕರು: Ashwin Rao K P
October 13, 2022
‘ಪುರಾಣ ಕನ್ಯೆ' ಕಾದಂಬರಿಯು ಇಂತದ್ದೊಂದು ಅನನ್ಯವೂ ವಿಶಿಷ್ಟವೂ ಆದ ಸಾಂಸ್ಕೃತಿಕ ಲೋಕವನ್ನು ಸ್ಥಳೀಯ ಭಾಷೆಯಲ್ಲಿ ಕಟ್ಟಿಕೊಡುತ್ತಾ ಜನರ ದೈವವೊಂದರ ಕಲ್ಪನೆ ಇನ್ನಷ್ಟು ಸ್ಪುಟಗೊಳ್ಳುವಂತೆ ಮಾಡುತ್ತದೆ. ಈ ದೈವಗಳು ಹಿಂದೂ ಮುಸ್ಲಿಂ ವ್ಯತ್ಯಾಸ ಮಾಡುವುದಿಲ್ಲ ಎನ್ನುತ್ತಾರೆ ಲೇಖಕ ಪುರುಷೋತ್ತಮ ಬಿಳಿಮಲೆ. ಅವರು ಕಾ.ತ ಚಿಕ್ಕಣ್ಣ ಅವರ ‘ಪುರಾಣ ಕನ್ಯೆ’ ಕೃತಿಗೆ ಬರೆದಿರುವ ಮುನ್ನುಡಿ ನಿಮ್ಮ ಓದಿಗಾಗಿ “ಒಂದು ರೀತಿಯಿಂದ, “ಪುರಾಣ ಕನ್ಯೆ” ಹೆಸರಿನ ಈ ಕಾದಂಬರಿಯು ಚಿಕ್ಕಣ್ಣನವರ ‘ನಿಶಬುದೆಡೆಗೆ”…
ಲೇಖಕರು: addoor
October 13, 2022
ಎಚ್. ಎಸ್. ವೆಂಕಟೇಶಮೂರ್ತಿಯವರ ಆತ್ಮಕಥನಾತ್ಮಕವಾದ ಆಪ್ತ ಪ್ರಬಂಧಗಳ ಸಂಪುಟ "ಅನಾತ್ಮ ಕಥನ.” ಇವನ್ನು ಓದುತ್ತಿದ್ದಂತೆ, ಇವು ನಮ್ಮದೇ ಅನುಭವ ಅನಿಸುತ್ತದೆ. ಹಾಗಿದೆ ಎಚ್.ಎಸ್. ವಿ. ಅವರ ಮನಮುಟ್ಟುವ ಮತ್ತು ಹೃದಯಕ್ಕೇ ಇಳಿಯುವ ಶೈಲಿ. ಜೊತೆಗೆ ಈ ಬರಹಗಳಿಗಾಗಿ ಅವರು ತಮ್ಮ ಅನುಭವದಿಂದ ಆಯ್ದುಕೊಂಡ ಸಂಗತಿಗಳೂ ಅಂಥವೇ. ಕನ್ನಡಿಗರ ಮೆಚ್ಚಿನ ಕವಿಗಳಲ್ಲಿ ಒಬ್ಬರಾಗಿರುವ ಎಚ್.ಎಸ್.ವಿ. ಅವರು ಜನಿಸಿದ್ದು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹೋದಿಗ್ಗೆರೆಯಲ್ಲಿ. ಆರಂಭದ ಮೂವತ್ತು ವರುಷ ಅವರು…
ಲೇಖಕರು: Ashwin Rao K P
October 11, 2022
ಡಾ. ಅಜಿತ್ ಹರೀಶಿ ಹಾಗೂ ವಿಠಲ್ ಶೆಣೈ ಅವರು ತಮ್ಮಂತೆ ಕತೆಗಳನ್ನು ಬರೆಯುವ ಇಪ್ಪತ್ತೆಂಟು ಮಂದಿ ಕಥೆಗಾರರ ಕಥೆಗಳನ್ನು ಸಂಗ್ರಹಿಸಿ 'ಕಥಾಭರಣ' ಮಾಡಿದ್ದಾರೆ. ಪುಸ್ತಕಕ್ಕೆ ಖ್ಯಾತ ಕಾದಂಬರಿಕಾರ ವಸುಧೇಂದ್ರ ಇವರು ಮುನ್ನುಡಿ ಬರೆದಿದ್ದಾರೆ. ಇವರು ತಮ್ಮ ಮಾತುಗಳಲ್ಲಿ “ ಬಹುತೇಕ ಹಳ್ಳಿಗಳಲ್ಲಿ ಸುಗ್ಗಿ ಹಬ್ಬ ಮಾಡುತ್ತಾರೆ. ಹೊಸ ಬೆಳೆ ಮನೆಗೆ ಬಂದ ತಕ್ಷಣ, ಅದರಲ್ಲಿ ಮೊದಲ ಭಾಗವಾಗಿ ತಮ್ಮ ಯೋಗ್ಯತೆಗೆ ತಕ್ಕಂತೆ ಒಂದಿಷ್ಟು ಅನ್ನವನ್ನು ಊರ ದೇವರಿಗೆ ಅರ್ಪಿಸುತ್ತಾರೆ. ಬಡವ, ಬಲ್ಲಿದ, ಮೇಲು, ಕೀಳು…