ಪುಸ್ತಕ ಪರಿಚಯ

ಲೇಖಕರು: Ashwin Rao K P
October 07, 2022
ಜೈವಿಕ ಮಹಾಯುದ್ಧ ಮುಂದೇನು...? ಇದು ಕೆ. ನಟರಾಜ್ ಅವರ ಹದಿಮೂರನೆಯ ಪುಸ್ತಕ. ಈ ಪುಸ್ತಕ ಇಂದಿನ ರಾಷ್ಟ್ರ-ರಾಷ್ಟ್ರಗಳ ವಿನಾಶದ ತೊಳಲಾಟವನ್ನು ಪ್ರತಿಬಿಂಬಿಸುತ್ತದೆ. ಮನುಷ್ಯ ನಾಗರೀಕತೆಯ ಹೊಸ್ತಿಲಲ್ಲಿ ಹೆಜ್ಜೆ ಇಟ್ಟಾಗಿನಿಂದ ಆತನ ವಿಲಕ್ಷಣ ಮನಸ್ಸು ವಿನಾಶದ ಕಡೆಗೇ ತುಡಿಯುತ್ತಿರುವುದು ಇತಿಹಾಸ ಕಂಡುಕೊಂಡ ಸತ್ಯ. ಮಾನವನ ಅಭ್ಯುದಯಕ್ಕೆ ವಿಜ್ಞಾನ ಆವಿಷ್ಕಾರಗೊಳ್ಳುತ್ತಿರುವಂತೆಯೇ ಅದರ ಇನ್ನೊಂದು ವಿನಾಶದ, ವಿಧ್ವಂಸದ ಮಜಲು ತೆರೆದುಕೊಳ್ಳುತ್ತಿರುವುದನ್ನು ಇತಿಹಾಸದ ಪುಟ ಪುಟಗಳಲ್ಲಿ ಕಾಣಬಹುದು…
ಲೇಖಕರು: addoor
October 06, 2022
ಪ್ರಾಚೀನ ಭಾರತದ ಸಾಧನೆಯನ್ನು ತಿಳಿಸುವ ಲೇಖನಗಳ ಸಂಗ್ರಹ ಈ ಕೃತಿ. ಇದರ ಪ್ರಕಟಣೆಗೆ ಸಹಕಾರ ನೀಡಿದವರು ಸುರತ್ಕಲ್‌ನ ಶ್ರೀ ಶಾರದಾ ಮಹೋತ್ಸವ ಸಮಿತಿ. 2016ರಲ್ಲಿ ಅದರ 42ನೇ ಶಾರದೋತ್ಸವ ಸಂದರ್ಭದಲ್ಲಿ ಇದನ್ನು ಪ್ರಕಟಿಸಲಾಯಿತು. ಶಾರದೋತ್ಸವದಲ್ಲಿ ಭಕ್ತರು ಶಾರದೆಯನ್ನು ಪೂಜಿಸಿ, ಪ್ರಸಾದವನ್ನು ಕೊಂಡೊಯ್ಯುವುದರ ಜೊತೆಗೆ, ಸಂಸ್ಕಾರ ನೀಡುವ ಕೃತಿಯೊಂದನ್ನು ಪ್ರಸಾದರೂಪವಾಗಿ ಒಯ್ದು ಮನೆಮಂದಿಗೆ ಸಂಸ್ಕಾರದ ಸುಗಂಧವನ್ನೂ ನೀಡುವಂತಾಗಬೇಕೆಂಬುದು ಸಮಿತಿಯ ಆಶಯ. ಅದಕ್ಕಾಗಿ, ಸಂಸ್ಕಾರಪೂರ್ಣ…
ಲೇಖಕರು: Ashwin Rao K P
October 05, 2022
ಮಾನಸಗಂಗೋತ್ರಿ, ಮೈಸೂರು ಇದರ ಪ್ರಸಾರಾಂಗ ವಿಭಾಗದವರು ‘ಪ್ರಚಾರ ಪುಸ್ತಕ ಮಾಲೆ' ಎಂಬ ಹೆಸರಿನಲ್ಲಿ ಉತ್ತಮ, ಮಾಹಿತಿದಾಯಕ ಸರಣಿ ಪುಸ್ತಕಗಳನ್ನು ಹೊರತರುತ್ತಿದ್ದರು. ಈ ಮಾಲೆಯ ೧೧ ನೇ ಪ್ರಕಟಣೆಯೇ ಎ. ನಾರಾಯಣ ರಾವ್ ಅವರು ಬರೆದ ‘ಪ್ರಾಣಿ ಜೀವನ' ಎಂಬ ಪುಸ್ತಕ. ಪುಸ್ತಕ ಸುಮಾರು ೪ ದಶಕಗಳಷ್ಟು ಹಿಂದಿನದಾದರೂ ಬಹಳಷ್ಟು ಉತ್ತಮ ಮಾಹಿತಿಗಳನ್ನು ಒಳಗೊಂಡಿದೆ.  ಮೈಸೂರು ವಿಶ್ವವಿದ್ಯಾನಿಲಯದ ಅಂದಿನ ಉಪಕುಲಪತಿಗಳಾದ ಇ ಜಿ ಮೆಕಾಲ್ಪೈನ್ ಅವರು ತಮ್ಮ ಮುನ್ನುಡಿಯಲ್ಲಿ ಈ ರೀತಿಯಾಗಿ ಅಭಿಪ್ರಾಯಗಳನ್ನು…
ಲೇಖಕರು: Ashwin Rao K P
October 01, 2022
ಅಮರ ಸುಳ್ಯ ೧೮೩೪-೩೭ರ ಜನತಾ ಬಂಡಾಯದ ಖ್ಯಾತಿಯ ‘ಸಂಘಟನಾ ಚತುರ ಕೆದಂಬಾಡಿ ರಾಮಗೌಡ' ಬಗ್ಗೆ ಡಾ.ಪೂವಪ್ಪ ಕಣಿಯೂರು ಇವರು ಒಂದು ಪುಸ್ತಕವನ್ನು ಬರೆದಿದ್ದಾರೆ. ಈ ಕೃತಿಯನ್ನು ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ವಿಶ್ವವಿದ್ಯಾಲಯವು ಪ್ರಕಾಶಿಸಿದೆ. ಪುಸ್ತಕದ ಬೆನ್ನುಡಿಯಲ್ಲಿ ಕಂಡು ಬಂದ ಬರಹ ಹೀಗಿದೆ- “ ಅಖಂಡ ಭಾರತದ ರಾಷ್ಟ್ರೀಯತೆಯ ಪರಿಕಲ್ಪನೆ ಹುಟ್ಟಿಕೊಳ್ಳುವ ೧೮೮೫ಕ್ಕಿಂತ ಪೂರ್ವದಲ್ಲಿ ವಸಾಹತುಶಾಹಿ ಬ್ರಿಟೀಷರ ವಿರುದ್ಧ ನಡೆದ ಪ್ರತಿರೋಧಗಳು ಪ್ರಾದೇಶಿಕ ಮಿತಿಯಲ್ಲಿ ಮತ್ತು ರಾಜಪ್ರಭುತ್ವದ…
ಲೇಖಕರು: Ashwin Rao K P
September 29, 2022
ಡಾ॥ ಬಿ.ಎಸ್.ಶೈಲಜಾ ಇವರ ಸಂಪಾದಕತ್ವದಲ್ಲಿ ನವಕರ್ನಾಟಕ ಪ್ರಕಾಶನ ಇವರು ಹೊರತಂದಿರುವ ಆಕಾಶ ವೀಕ್ಷಣೆಗೆ ಮಾರ್ಗದರ್ಶಿ ಪುಸ್ತಕವೇ ‘ಬಾನಿಗೊಂದು ಕೈಪಿಡಿ'. ಈ ಪುಸ್ತಕದ ಬೆನ್ನುಡಿಯಲ್ಲಿ "ಹೊಸತು ಪತ್ರಿಕೆಯ ವಿವಿಧ ಸಂಚಿಕೆಗಳಲ್ಲಿ ಪ್ರಕಟವಾಗಿರುವ ಹಲವಾರು ವಿಷಯಗಳಿಗೆ ಸಂಬಂಧಿಸಿದ ಲೇಖನಗಳನ್ನು ವಿಷಯವಾರಾಗಿ ವಿಂಗಡಿಸಿ 'ಹೊಸತು ವಾಚಿಕೆ' ರೂಪದಲ್ಲಿ ಓದುಗರಿಗೆ ನೀಡುತ್ತಿದ್ದೇವೆ. ಯಾವುದೇ ವಿಷಯಕ್ಕೆ ಸಂಬಂಧಿಸಿದ ಲೇಖನಗಳು ಒಂದೆಡೆ ದೊರೆತರೆ ಬೌದ್ಧಿಕ ಮತ್ತು ಕ್ರಿಯಾತ್ಮಕ ಚರ್ಚೆಗೆ ಅನುವು…
ಲೇಖಕರು: addoor
September 28, 2022
ಹಿಂದು ಧರ್ಮದ ಬಗ್ಗೆ ಎಲ್ಲ ಅವಶ್ಯ ಮಾಹಿತಿಯನ್ನು ಎಲ್ಲರಿಗೂ ಅರ್ಥವಾಗುವಂತೆ ವಿವರಿಸುವ ಪುಸ್ತಕ ಇದು. ಲೇಖಕರು 1939ರಲ್ಲಿ ಆಗಿನ ಮದ್ರಾಸಿನ ಪಚ್ಚೆಯಪ್ಪಾ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿದ್ದಾಗ, ಆ ಸಂಸ್ಥೆಯಲ್ಲಿ ಧಾರ್ಮಿಕ ಶಿಕ್ಷಣವನ್ನು ಪ್ರಸ್ತುತಗೊಳಿಸಲಿಕ್ಕಾಗಿ ಬರೆದ ಪುಸ್ತಕ. ಇದನ್ನು ಎನ್. ಪಿ. ಶಂಕರನಾರಾಯಣ ರಾವ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಇಂಗ್ಲಿಷಿನಲ್ಲಿ “ವಾಟ್ ಈಸ್ ಹಿಂದುಯಿಸಂ" ಎಂಬ ಶೀರ್ಷಿಕೆಯ ಈ ಪುಸ್ತಕ ಹಲವಾರು ಬಾರಿ ಮರುಮುದ್ರಣಗೊಂಡಿದೆ. ಇದು ಅದರ ತಿದ್ದಿದ ಆವೃತ್ತಿ…
1