ಪುಸ್ತಕ ಪರಿಚಯ

ಲೇಖಕರು: Ashwin Rao K P
November 22, 2022
ಎಲ್ಲೋ ಬಿದ್ದಿದ್ದ ಕಲ್ಲು ದೇವರಾಗುವುದೂ ಕಥೆಯೇ! ಹಾಗೆಯೇ ಎಂಥ ಕಷ್ಟದಲ್ಲಿಯೂ ಕಲ್ಲಾಗಿಯೇ ಇದ್ದುಬಿಡುವ ದೇವರದೂ ಕಥೆಯೇ. ಹುಣ್ಣಿಮೆಯಂದು ಕಡಲು ಅಬ್ಬರಿಸುವುದೂ ಕಥೆಯೇ, ಚಂಡಮಾರುತದಲ್ಲಿಯೂ ಗುಂಡುಕಲ್ಲಾಗಿ ನಿಂತೇ ಇರುವ ಬೆಟ್ಟದ ಕೆಟ್ಟ ಹಠವೂ ಕಥೆಯೇ. ದಿನವೂ ಎದುರಾಗುವ ಪಕ್ಕದ ಬೀದಿಯ ವ್ಯಕ್ತಿ ಖುಷಿಯಿಂದ ನೋಡಿದರೂ ಕಥೆಯೇ, ಕಣ್ಣು ಕೂಡಿಸದೆ ನೆಲ ನೋಡಿಕೊಂಡು ಹೋಗಿಬಿಟ್ಟರೂ ಕಥೆಯೇ! ಎನ್ನುತ್ತಾರೆ ಕತೆಗಾರ್ತಿ ಪೂರ್ಣಿಮಾ ಮಾಳಗಿಮನಿ. ಅವರು ಲೇಖಕ ಮಾರುತಿ ಎನ್ ಎನ್ ಅವರ ‘ಕರುವ್ಗಲ್ಲು’ ಕಥಾ…
November 21, 2022
ನಮ್ಮ ಮೊಬೈಲ್ ಒಳಗಿನ ಕೆಲವೊಂದು ಹಾಡುಗಳು, ಕೆಲವೊಂದು ಸಿನಿಮಾಗಳನ್ನು ನಾವು ಡಿಲಿಟ್ ಮಾಡುವುದೇ ಇಲ್ಲ. ಕಾರಣ ಅವುಗಳ ಜೊತೆ ನಮಗಿರುವ ತೀರಾ ಹತ್ತಿರದ ಭಾದ್ಯವೆ. ಪದೇ ಪದೇ ಅದೆ ಹಾಡನ್ನೋ ಅಥವಾ ಅದೆ ಸಿನಿಮಾನೋ ಕೇಳೋದು, ನೋಡೋದು ಮಾಡತ್ತೀವಿ. ಅದೆ ರೀತಿ ನಮ್ಮ ಸ್ವಂತದ ಗ್ರಂಥಾಲಯದಲ್ಲಿ ಸಾವಿರಾರು ಪುಸ್ತಕಗಳು ಇದ್ದರೂ ಸಹ ಕೆಲವೊಂದು ಪುಸ್ತಕಗಳು ನಮಗೆ ಮತ್ತೆ ಮತ್ತೆ ಓದುವಂತೆ ಪ್ರೇರೇಪಿಸಿತ್ತವೆ. ಅಂತಹ ಪ್ರೇರೇಪಿಸಿದ ಪುಸ್ತಕ ವೆಂದರೆ ವೀರಣ್ಣ ಮಡಿವಾಳರ ಖಂಡಕಾವ್ಯವಾದ 'ಎಲ್ಲೋ ಹಾಳಾಗಿ…
ಲೇಖಕರು: Ashwin Rao K P
November 19, 2022
ನಂದಕುಮಾರ್‌ ಜಿ.ಕೆ ಅವರ ಇನ್ನೊಂದು ಕಥಾಸಂಕಲನ ಬಿಳೆ ದಾಸ್ವಾಳವಾಗಿದೆ. ಎಲ್ಲಾ ಸಂಗತಿಯನ್ನು ಒಟ್ಟಿಗೆ ಕೊಂಡೊಯ್ಯುತ್ತಲೇ ಇನ್ನೊಂದಷ್ಟು ಬೆಲೆಬಾಳುವ ಸರಕನ್ನು ಹೊತ್ತೊಯ್ದು ಓದುಗರನ್ನು ತಲುಪಲು ಸಿದ್ದವಾಗಿದೆ ಅನ್ನೋದು ಐದು ಕತೆಗಳನ್ನು ರಂಗನಾಥ ಶಿವಮೊಗ್ಗ ಅವರು ಮುನ್ನುಡಿಯಲ್ಲಿ ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದ್ದು ಹೀಗೆ.... “ಆ ಬೆಲೆಬಾಳುವ ಸರಕುಗಳಲ್ಲಿ ನಾ ಕಂಡ ಒಂದಷ್ಟನ್ನ ನಿಮ್ಮ ಮುಂದೆ ಹಂಚಿಕೊಳ್ಳಬಲ್ಲೆ, ನನ್ನ ಕಣ್ಣಿಗೆ ಕಾಣದೇ ಉಳಿದದ್ದು ಓದುವ ನಿಮಗೆ ಹೊಳೆಸೀತು. ಹಣೆಪಟ್ಟಿ…
ಲೇಖಕರು: Ashwin Rao K P
November 17, 2022
ಡಾ. ಮುಮ್ತಾಜ್ ಬೇಗಂ ಅವರು ತಮ್ಮ ಲೇಖನಗಳ ಸಂಕಲನವನ್ನು ‘ಲೋಕವೇ ತಾನಾದ ಬಳಿಕ' ಎಂಬ ಹೆಸರಿನಲ್ಲಿ ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ. ಹೆಣ್ಣು ತನ್ನ ಬದುಕಿನ ಹಲವು ಮಜಲುಗಳಲ್ಲಿ ಅನೇಕ ಪಾತ್ರಗಳನ್ನು ನಿಭಾಯಿಸುತ್ತಾ ಎಲ್ಲರೊಳಗಿದ್ದು ತಾನಾಗ ಬಯಸುವುದಿದೆಯಲ್ಲ ಅದು ನಿಜವಾದ ಲೋಕವಾಗುವುದು ಎಂದರ್ಥ. ಲೋಕದ ಸೃಷ್ಟಿಗೆ ಗಂಡಿನಷ್ಟೇ ಹೆಣ್ಣು ಕಾರಣಳಾಗಿದ್ದರೂ ಆಕೆಯನ್ನು ಅರ್ಥೈಯಿಸುವ ಕ್ರಮ ಇನ್ನೂ ಬದಲಾಗಿಲ್ಲ ಎನ್ನುತ್ತಾರೆ ಲೇಖಕಿ ಮುಮ್ತಾಜ್ ಬೇಗಂ. ಇವರು ತಮ್ಮ ‘ಲೋಕವೇ ತಾನಾದ ಬಳಿಕ'  …
ಲೇಖಕರು: addoor
November 17, 2022
ವಿಶ್ವಕನ್ನಡ ಸಮ್ಮೇಳನ ಸಾಹಿತ್ಯಮಾಲೆಯ 100 ಮೇರುಕೃತಿಗಳಲ್ಲೊಂದಾಗಿ ಆಯ್ಕೆಯಾಗಿ ಮರುಮುದ್ರಣವಾದ ಕವನ ಸಂಕಲನ ಇದು. ಹೊಸ ಪೀಳಿಗೆಯ ಕವಿ ಎಂದು ಆರಂಭದಲ್ಲಿ ಗುರುತಿಸಲ್ಪಟ್ಟ ಎಚ್.ಎಸ್. ವೆಂಕಟೇಶಮೂರ್ತಿ ಅವರು ಕನ್ನಡಿಗರ ಮೆಚ್ಚಿನ ಕವಿ ಹಾಗು ಸಾಹಿತಿಯಾಗಿ ಬೆಳೆದವರು. ಕನ್ನಡದ ಮೇರುಕೃತಿಗಳ ಆ ಮಾಲೆಗೆ ಇದು ಆಯ್ಕೆಯಾದದ್ದು ಅವರ ಪ್ರತಿಭೆಯ ದ್ಯೋತಕ. ಕನ್ನಡದ ಪ್ರಸಿದ್ಧ ವಿಮರ್ಶಕರಾದ ಕೀರ್ತಿನಾಥ ಕುರ್ತುಕೋಟಿ ಅವರು ಇದರ ಮುನ್ನುಡಿಯಲ್ಲಿ ಬರೆದಿರುವ ಮಾತುಗಳು: “.... “ಇಂಡಿಯಾದ ನಿಬಿಡಾರಣ್ಯಗಳಲ್ಲಿ…
ಲೇಖಕರು: Ashwin Rao K P
November 15, 2022
ಸಾವಯವ ಕೃಷಿಕ ಗ್ರಾಹಕ ಬಳಗ, ಮಂಗಳೂರು ಇವರ ‘ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ' ಮಾಲಿಕೆಯ ಎರಡನೇ ಪುಸ್ತಕವೇ ‘ವಿಷಮುಕ್ತ ಆಹಾರವೇ ಆರೋಗ್ಯದ ಮಂತ್ರ'. ಇದನ್ನು ಬರೆದಿದ್ದಾರೆ ಅಡ್ಡೂರು ಕೃಷ್ಣ ರಾವ್ ಇವರು. ಇವರು ನಿವೃತ್ತ ಬ್ಯಾಂಕ್ ಅಧಿಕಾರಿ, ಬಳಕೆದಾರರ ವೇದಿಕೆಯ ಸಂಚಾಲಕರು, ಸಾವಯಕ ಕೃಷಿಕ ಗ್ರಾಹಕ ಬಳಗದ ಗೌರವ ಅಧ್ಯಕ್ಷರು ಹಾಗೂ ಸ್ವತಃ ಕೃಷಿಕರು. ವಿಷಮುಕ್ತ ಆಹಾರವನ್ನು ನಾವು ನಮ್ಮ ದಿನಬಳಕೆಯಲ್ಲಿ ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎಂದು ಈ ಪುಟ್ಟ ಪುಸ್ತಕದಲ್ಲಿ ಬಹಳ ಸೊಗಸಾಗಿ ಬರೆದಿದ್ದಾರೆ.…