ಪುಸ್ತಕ ಪರಿಚಯ
ಲೇಖಕರು: Ashwin Rao K P
December 27, 2023

ಸಪ್ನ ಬುಕ್ ಹೌಸ್ ನವರು ‘ಮಹಾಭಾರತದ ಪ್ರಸಿದ್ಧ ಪಾತ್ರಗಳು' ಎನ್ನುವ ಮಾಲಿಕೆಯಲ್ಲಿ ಹೊರತಂದ ಪುಸ್ತಕಗಳಲ್ಲಿ ಮೊದಲ ಪುಸ್ತಕ ‘ಪಿತಾಮಹ ಭೀಷ್ಮ’. ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಂದಾದ ಭೀಷ್ಮನ ವಿವರಗಳನ್ನು ಪುಟ್ಟದ್ದಾಗಿ ಈ ಪುಸ್ತಕದಲ್ಲಿ ನೀಡಿದ್ದಾರೆ. ೨೦೦೫ರಲ್ಲಿ ಪ್ರಥಮ ಮುದ್ರಣ ಕಂಡ ಈ ಕೃತಿ ಈಗ ನಾಲ್ಕನೇ ಮುದ್ರಣವಾಗಿ ಹೊರಬಂದಿದೆ.
ಈ ಮಾಲಿಕೆಯ ಬಗ್ಗೆ ಪ್ರಕಾಶಕರು ಬೆನ್ನುಡಿಯಲ್ಲಿ ಹೀಗೆ ಅಭಿಪ್ರಾಯ ಪಟ್ಟಿದ್ದಾರೆ “ಜಗತ್ತಿನ ಮಹಾಕಾವ್ಯಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ‘ಮಹಾಭಾರತದ…
ಲೇಖಕರು: Ashwin Rao K P
December 22, 2023

ನಕ್ಕರೆ ಅದೇ ಸ್ವರ್ಗ ! ನಗಬೇಕು, ನಗೆ ಬೇಕು ಬರಡು ಬದುಕಿನಲ್ಲಿ ! ಮುದುಡಿದ ಮನಸ್ಸಿಗೆ ನಗೆಯಂಥ ಸಿಹಿಮದ್ದು ಇನ್ನೊಂದಿಲ್ಲ ! ಈ ಧಾವಂತದ ದಿನಗಳಲ್ಲಿ ನಗುವನ್ನು ಮರೆಯುವಂತೆಯೇ ಇಲ್ಲ. ನೀವು ಕಿಸೆಯಲ್ಲಿರಿಸಿಕೊಳ್ಳಬಹುದಾದ ಈ ‘ನಗೆ ತುಂತುರು' ತುಣುಕುಗಳನ್ನು ರಚಿಸಿರುವ ಶ್ರೀ ಎಸ್ ಎನ್ ಶಿವಸ್ವಾಮಿಯವರು ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿದ್ದರು. ಖ್ಯಾತ ನಗೆ ಬರಹಗಾರರು, ಕಚಗುಳಿಯಾಡಿಸಿ ನಗಿಸುವಂಥ ಈ ತುಣುಕುಗಳಿಗೆ ಶ್ರೀ ಹರಿಣಿ ಸೊಗಸಾದ ಚಿತ್ರ ರಚಿಸಿದ್ದಾರೆ. ನಿಮ್ಮ ನಗು ಬರಿಯ ಮುಗುಳಿನಲ್ಲಿ…
ಲೇಖಕರು: Ashwin Rao K P
December 20, 2023

ಎಸ್.ಕೆ. ಮಂಜುನಾಥ್ ಅವರ 'ಗಾಳಿಯ ಎದೆಸೀಳಿ ಹೊರಟ ಹಕ್ಕಿ' ಎಂಬ ಈ ೭೬ ಪುಟಗಳ ಪುಟ್ಟ ಕವನ ಸಂಕಲನದಲ್ಲಿ ನಲವತ್ತೆರಡು ಕವಿತೆಗಳಿವೆ. ಹಿರಿಯ ಲೇಖಕ ಮಹಾದೇವ ಶಂಕನಪುರ ಅವರು ಕವಿ ಎಸ್.ಕೆ. ಮಂಜುನಾಥ್ ಅವರ ಕವನ ಸಂಕಲನ ‘ಗಾಳಿಯ ಎದೆಸೀಳಿ ಹೊರಟ ಹಕ್ಕಿ’ ಗೆ ಬರೆದ ಮುನ್ನುಡಿಯ ಆಯ್ದ ಸಾಲುಗಳು ನಿಮ್ಮ ಓದಿಗಾಗಿ....
“ಕವಿ ಎಸ್.ಕೆ. ಮಂಜುನಾಥ್ ಈಗಾಗಲೇ 'ಎದೆಗಿಲಕಿ' ಸಂಕಲನದ ಮೂಲಕ ಕಾವ್ಯಕ್ಷೇತ್ರದಲ್ಲಿ ಕೃಷಿ ಮಾಡಿದವರು, ಕನ್ನಡ ಕಾವ್ಯಲೋಕದಲ್ಲಿ ತಮ್ಮದೇ ವಿಶಿಷ್ಟ ಹೆಜ್ಜೆಗುರುತುಗಳನ್ನು…
ಲೇಖಕರು: Ashwin Rao K P
December 18, 2023

ಸದಾನಂದ ಎನ್ ಪಾಟೀಲ್ ಅವರು ನಿರೂಪಿಸಿರುವ “ಸತ್ಯಾಗ್ರಹಿ" ಎನ್ನುವ ಕೃತಿಯು ಶ್ರೀ ಕೇದಾರಲಿಂಗಯ್ಯ ಹಿರೇಮಠ ಅವರಿಗೆ ಸಮರ್ಪಿಸಿದ ಅಭಿನಂದನಾ ಗ್ರಂಥ. ಹುಲ್ಲೂರು ಗ್ರಾಮದ ಶ್ರೀ ಸಂಗನಬಸಯ್ಯ ಹಿರೇಮಠ ಅವರ ಮಗ ಶ್ರೀ ಕೇದಾರಲಿಂಗಯ್ಯ ಅವರು ಪ್ರಾರಂಭದಿಂದಲೂ ಬಡವರ ಪರವಾದ, ರೈತರ ಪರವಾದ, ನ್ಯಾಯದ ಪರವಾದ, ಹೋರಾಟಗಳನ್ನು ಮಾಡುತ್ತಲೆ ಬೆಳೆದವರು ಎನ್ನುವುದು ಕೃತಿಗೆ ಮುನ್ನುಡಿಯನ್ನು ಬರೆದ ಪ್ರೊ. ಎಚ್.ಟಿ. ಪೋತೆ ಅವರ ಮಾತು. ಅವರು ಬರೆದ ಮುನ್ನುಡಿಯ ಆಯ್ದ ನುಡಿಗಳು ಇಲ್ಲಿವೆ…
“ಶ್ರೀ ಕೇದಾರಲಿಂಗಯ್ಯ…
ಲೇಖಕರು: Ashwin Rao K P
December 15, 2023

ಉದಯೋನ್ಮುಖ ಲೇಖಕರಾದ ಮಂಜಯ್ಯ ದೇವರಮನಿ ಇವರು ತನ್ನ ನೂತನ ಕೃತಿ “ಬಿಟ್ಟು ಬಂದಳ್ಳಿಯ ನೆನಪುಗಳು” ಯಲ್ಲಿ ತಮ್ಮ ಊರಿನ ನೆನಪುಗಳನ್ನು ಕೆದಕಲು ಹೊರಟಿದ್ದಾರೆ. ಗ್ರಾಮೀಣ ಬದುಕು ಆಧುನಿಕತೆಯತ್ತ ವಾಲುತ್ತಿದೆ ಎನ್ನುವ ಲೇಖಕರು ತಮ್ಮ ಕೃತಿಗೆ ಬರೆದ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಸಾಲುಗಳು...
“ಚಿಕ್ಕಯ್ಯ ಊರಿನಿಂದ ಬಂದಿದ್ದರು. ತಿಂಗಳಿಗೋ ಆರು ತಿಂಗಳಿಗೋ ಏನಾದರೂ ಒಂದು ಕೆಲಸದ ನಿಮಿತ್ತ ಬೆನ್ನೂರಿಗೆ ಬರುತ್ತಿರುತ್ತಾರೆ. ಜಮೀನಿನ ಕಾಗದಪತ್ರ ಮಾಡಿಸಲೋ... ದನದ ವ್ಯಾಪಾರಕ್ಕೋ…
ಲೇಖಕರು: Ashwin Rao K P
December 13, 2023

ಈಗಾಗಲೇ ‘ಬದುಕ ಬದಲಿಸುವ ಕತೆಗಳು' ಪುಸ್ತಕದ ಮೊದಲನೇ ಭಾಗ ಬಹು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇಲ್ಲಿರುವ ಕತೆಗಳು ನಮ್ಮ ಬದುಕಿನ ಕತೆಗಳಂತೆಯೇ ಇವೆ ಎಂಬ ಅಭಿಮಾನದಿಂದ ಕೊಂಡು ಓದಿದವರು ಅದರ ಮುಂದಿನ ಭಾಗಕ್ಕಾಗಿ ಕಾಯುತ್ತಿದ್ದರು. ಡಾ. ಶಶಿಕಿರಣ್ ಶೆಟ್ಟಿ ಅವರ ‘ಬದುಕ ಬದಲಿಸುವ ಕತೆಗಳು' ಕೃತಿಯ ಎರಡನೇ ಭಾಗ ಇತ್ತೀಚೆಗೆ ಬಿಡುಗಡೆಯಾಗಿದೆ. ಮೊದಲ ಭಾಗದಲ್ಲಿ ೬೦ ಕತೆಗಳಿದ್ದರೆ, ಎರಡನೇ ಭಾಗದಲ್ಲಿ ೧೦೪ ಕತೆಗಳಿವೆ. ಭಾವನಾತ್ಮಕ ರೀತಿಯ ಕತೆಗಳನ್ನು ಓದುವವರಿಗೆ ಸುಗ್ಗಿಯೇ ಸರಿ.
ಹಿಂದಿನ…