ಪುಸ್ತಕ ಪರಿಚಯ

ಲೇಖಕರು: Ashwin Rao K P
January 31, 2023
“ಕರ್ನಾಟಕದ ಒಂದು ಭಾಗದವರು ಇನ್ನೊಂದು ಭಾಗದ ಓದುಗರನ್ನು ಮನಸ್ಸಿನಲ್ಲಿಟ್ಟುಕೊಂಡು ತಮ್ಮ ಅನುಭವ ಹಂಚಿಕೊಳ್ಳುವ ವಿನ್ಯಾಸವು ಕನ್ನಡದಲ್ಲಿ ಜನಪ್ರಿಯವಾಗಿದೆ. ಆದರೆ ಇಲ್ಲಿ ಅಧಿಕಾರ ಕೇಂದ್ರವಿರುವ ದಕ್ಷಿಣದ ಕರ್ನಾಟಕದ ಎದುರು, ಉತ್ತರ ಕರ್ನಾಟಕ ವಿಶಿಷ್ಟವಾದ ಭಾಷೆಯನ್ನಾಗಲಿ ಅನುಭವವನ್ನಾಗಲಿ ವೈಭವೀಕರಿಸುವುದಿಲ್ಲ ಇಲ್ಲವೇ ಕೀಳೀಕರಿಸುವುದಿಲ್ಲ. ತನ್ನ ಪಾಲಿಗೆ ಕನ್ನಡ ನಾಡಿನ ಬದುಕೆಲ್ಲ ಒಂದೇ ಎಂಬ ಸಮದರ್ಶಿಯಾದ ದೃಷ್ಟಿಕೋನವು ಇಲ್ಲಿ ಕೆಲಸ ಮಾಡುತ್ತದೆ,'' ಎನ್ನುತ್ತಾರೆ "ಮಿಲ್ಟ್ರಿ ಟ್ರಂಕು'…
January 29, 2023
“ಪ್ರೇಮ ಋತುಮಾನಗಳಾಗಿ, ಶತಮಾನದ ಭಾವಗಳಾಗಿ, ಯುಗ ಯುಗಗಳ ಬಂಧನಗಳಾಗಿ ಬೆಳೆದರೂ ಹಳತಾಗುವುದಿಲ್ಲ. ಅಳತೆಯ ಸೆಳೆತದಲ್ಲಿ ಸಿಲುಕಿ ನಲುಗುವ ಹಲವಾರು ಪಡ್ಡೆ ಹುಡುಗರನ್ನು ಇಬ್ಬನಿಯ ರೂಪಕದಲ್ಲಿ ವಿವರಿಸುವ ಪ್ರಯತ್ನ‌ ಕೂಡ ಪ್ರಯಾಸದಿಂದ ಕೂಡಿದ್ದರೂ ಕೆಚ್ಚೆದೆಯಲ್ಲಿ ದೇಶಬಾಂದವರನ್ನು ಹಚ್ಚೆ ಹಾಕಿಸಿಕೊಳ್ಳಿ ಎನ್ನುವ 'ಮೌನರಾಗ' ಹೊಸತಲೆಮಾರಿನ ಹೋರಾಟಗಾರರಿಗೆ ಪರಿಚಯ ಮಾಡಿಸುತ್ತದೆ" ಷಕೀಬ್ ಎಸ್. ಕಣದ್ಮನೆ ನವಿಲೇಹಾಳ್ ಅವರ ʻಮೋಹದ ಮೋಡಗಳುʼ ಕವನ ಸಂಕಲನ. 72 ಪುಟಗಳ ಈ ಕವನ ಸಂಕಲನವು ಪುಟ್ಟದಾಗಿದ್ದರೂ…
ಲೇಖಕರು: Ashwin Rao K P
January 28, 2023
‘ಮೌನದ ಚಿಪ್ಪಿನೊಳಗೆ' -ಮನದ ಕಣಿವಿಗೆ ಆಶಾಕಿರಣ ಎಂಬ ಕೃತಿಯನ್ನು ರಚಿಸಿದ್ದಾರೆ ಧಾರಿಣ್ ಮಾಯಾ ಇವರು. ದಿನನಿತ್ಯದ ಮನಸ್ಸಿನ ಕೋಲಾಹಲ-ನೋವಿನೆಳೆಗಳು, ಬದುಕಿನ ಬವಣೆ-ಏರಿಳಿತಗಳು, ಕಗ್ಗಂಟು-ಮಜಲುಗಳನ್ನು ತನ್ನ ಮಡಿಲಲ್ಲೇ ಮುಚ್ಚಿಟ್ಟು, ಹೆಣ್ಣು ತನ್ನ ಜೀವನ ನಡೆಸುವ ಪರಿಯನ್ನು ಇಲ್ಲಿ ಅನಾವರಣಗೊಳಿಸಿದ್ದಾರೆ. ಪುರುಷನಿಂದ ಮಾನಸಿಕ ಹಾಗು ಲೈಂಗಿಕ ದೌರ್ಜನ್ಯಕ್ಕೊಳಗಾದ ಹೆಣ್ಣುಮಕ್ಕಳ ಬದುಕಿನ ಕರಾಳತೆಗೆ ಕನ್ನಡಿ ಹಿಡಿವ ಪ್ರಯತ್ನ ಮಾಡಿದ್ದಾರೆ ಲೇಖಕಿ ಧಾರಿಣಿ ಮಾಯಾ. ಅವರು ತಮ್ಮ ‘ಮೌನದ…
January 26, 2023
ಎಚ್.ಎಸ್. ಸತ್ಯನಾರಾಯಣರವರು ತಮ್ಮ ವೈಯಕ್ತಿಕ ಬದುಕಿನ ಅನುಭವಗಳನ್ನು, ಅವರು ಅನುಭವಿಸಿದ ಕಷ್ಟಕೋಟಲೆಗಳನ್ನು ಯಾವುದೇ ಸಂಕೋಚಕ್ಕೆ ಒಳಗಾಗದೇ ನಿರ್ಭೀತಿಯಿಂದ, ಪ್ರಾಮಾಣಿಕವಾಗಿ ಓದುಗರ ಮುಂದೆ ಎಳೆ ಎಳೆಯಾಗಿ ಬಿಚ್ಚಿಡುವ ಮೂಲಕ ಅವರ ಬಗ್ಗೆ ಮತ್ತಷ್ಟು ಗೌರವ ಭಾವ ಹುಟ್ಟುವಂತೆ ಪ್ರಬಂಧ ರಚಿಸಿದ್ದಾರೆ. ಹಾಸ್ಯ ಬರಹಗಳಲ್ಲಿ ಲಲಿತ ಪ್ರಬಂಧಗಳು ಬಹಳ ಮುಂಚೂಣಿಯಲ್ಲಿರುವ ಸಶಕ್ತವಾದ ಪ್ರಕಾರವೆನ್ನಬಹುದು. ಯಾರು ಸಹನೆ ಮತ್ತು ತಾಳ್ಮೆಯ ಗುಣವನ್ನು ಹೊಂದಿದ್ದು ಗಂಭೀರ ವಿಷಯವನ್ನೂ ಕೂಡ ಸಕಾರಾತ್ಮಕ…
ಲೇಖಕರು: addoor
January 25, 2023
ಬುದ್ಧನ ಎರಡು ಜಾತಕ ಕತೆಗಳು ಈ ಮಕ್ಕಳ ಪುಸ್ತಕದಲ್ಲಿವೆ. ಇವುಗಳ ಮೂಲ ಲೇಖಕರಾದ ಕೃಷ್ಣ ಚೈತನ್ಯರು ಬರೆದ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದವರು ಹೆಚ್.ಕೆ. ರಾಮಕೃಷ್ಣ. ಸಿದ್ಧಾರ್ಥನು ಜ್ನಾನೋದಯ ಪಡೆದು ಬುದ್ಧನಾಗಿ, ಜೀವನದ ಅರ್ಥ ತಿಳಿದುಕೊಂಡ. ಸುಖಶಾಂತಿಗಳ ಗಳಿಕೆಗಾಗಿ ಮನುಷ್ಯರು ಹೇಗೆ ಬದುಕಬೇಕೆಂಬ ಸಂದೇಶ ನೀಡಿದ. ಅದಕ್ಕಾಗಿ ಮಾನವರು ನಿಸ್ವಾರ್ಥಿಗಳಾಗಿ, ಕರುಣಾಳುಗಳಾಗಿ ಬಾಳಬೇಕೆಂಬುದೇ ಅವನು ತೋರಿದ ಪಥ. ತನ್ನ ಸಹಜೀವಿಗಳ ನೆರವಿಗಾಗಿ ಬುದ್ಧನು ಅನೇಕ ಪುನರ್ಜನ್ಮ ತಳೆದನೆಂದು ಪ್ರತೀತಿ.…
ಲೇಖಕರು: Ashwin Rao K P
January 24, 2023
‘ಬಾ ಇಲ್ಲಿ ಸಂಭವಿಸು..' ಎನ್ನುವುದು ರಾಷ್ಟ್ರಕವಿ ಕುವೆಂಪು ಅವರ ಜನಪ್ರಿಯ ಕವಿತೆಯ ಸಾಲು. ಲೇಖಕರಾದ ಕೆ. ನಟರಾಜ್ ಅವರು ತಮ್ಮ ದ್ವಿತೀಯ ಕವನ ಸಂಕಲನಕ್ಕೆ ಇದೇ ಹೆಸರನ್ನು ಇರಿಸಿದ್ದಾರೆ. ಈ ಕವನ ಸಂಕಲನದಲ್ಲಿ ೧೦೪ ಪುಟ್ಟ ಕವನಗಳಿವೆ. ಕೆ ನಟರಾಜ್ ಅವರು ತಮ್ಮ ಮಾತಿನಲ್ಲಿ ಅಭಿಪ್ರಾಯ ವ್ಯಕ್ತ ಪಡಿಸುವುದು ಹೀಗೆ- “ ‘ಬಾ ಇಲ್ಲಿ ಸಂಭವಿಸು...' ಎಂದರೆ ನಮ್ಮ ಸತ್ಯಾತ್ಮವನ್ನು ನಾವು ಕರೆಯುವ ಪರಿ. ಜೀವನದ ಈ ತೊಳಲಾಟದಲ್ಲಿ, ಹೋರಾಟದಲ್ಲಿ ಕೊನೆಗೂ ಸತ್ಯಕ್ಕೆ ಶರಣಾಗುವ ಸಾಲುಗಳು. ಬಹುಷಃ ಈ ಮನದಾಳದ…