ಪುಸ್ತಕ ಪರಿಚಯ

ಲೇಖಕರು: Ashwin Rao K P
February 07, 2023
ಇತ್ತೀಚೆಗೆ ನಮ್ಮನ್ನು ಅಗಲಿದ ಸ್ವಾಮಿ ಸಿದ್ದೇಶ್ವರರು ತಮ್ಮ ಪ್ರಖರವಾದ ಪ್ರವಚನಗಳಿಗೆ ಬಹಳ ಖ್ಯಾತಿಯನ್ನು ಪಡೆದವರು. ಅವರ ಮಾತುಗಳನ್ನು ಆಲಿಸಲು ಬೆಳ್ಳಂಬೆಳಿಗ್ಗೆ ಜನರು ತಂಡೋಪತಂಡವಾಗಿ ಅವರ ಆಶ್ರಮಕ್ಕೆ ಬರುತ್ತಿದ್ದರು. ಅವರು ತಮ್ಮ ಪ್ರವಚನಗಳಲ್ಲಿ ಹೇಳಿದ ಹಲವಾರು ಕಥೆಗಳು, ವಿಷಯಗಳು ಮಕ್ಕಳಿಗೆ ದಾರಿದೀಪವಾಗುವಂಥವುಗಳು. ಅಂತಹ ೩೬ ಕಥೆಗಳನ್ನು ಲೇಖಕರಾದ ರೋಹಿತ್ ಚಕ್ರತೀರ್ಥ ಇವರು ಮಕ್ಕಳಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ ನಿರೂಪಣೆ ಮಾಡಿ ‘ಮಕ್ಕಳಿಗಾಗಿ ಸ್ವಾಮಿ ಸಿದ್ಧೇಶ್ವರರ ಕಥೆಗಳು' ಎಂಬ…
February 05, 2023
“ಇಲ್ಲಿಯ ಕಥೆಗಳಲ್ಲಿ ಬಲಿಯಾಗುವ ಯಾರೊಬ್ಬರೂ ತಪ್ಪಿತಸ್ತರಲ್ಲ ಎನ್ನುವುದು ಕೇಡಿನ ಭೀಕರತೆಯನ್ನು ಹೆಚ್ಚು ಮಾಡುತ್ತದೆ. ಕತೆಗಾರ ಮಲ್ಲಿಕಾರ್ಜುನ ಅವರು ಸಹಜವಾಗಿ ಕಟ್ಟಿದ ಕಥೆಗಳು ನಮ್ಮ ಅಂತರಂಗಕ್ಕೆ ಇಳಿಯುತ್ತವೆ. ಆದರೆ ಕೆಲವು ಸಲ ಅವರು ಮಹತ್ವಾಕಾಂಕ್ಷಿಯಿಂದ ಕಥೆಗಳಲ್ಲಿ ಇಣುಕಿದಾಗ ಕಥೆ ಓದುಗರ ಪರಿಧಿಯಿಂದ ದೂರ ಹೋಗುತ್ತದೆ ಎನ್ನಿಸುತ್ತದೆ” ಲೇಖಕ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ ದೀಡೆಕೆರೆ ಜಮೀನು ಪುಸ್ತಕಕ್ಕೆ ನಾನು ಬರೆದ ಮುನ್ನುಡಿ ನಿಮ್ಮ ಓದಿಗಾಗಿ... ಕನ್ನಡದಲ್ಲಿ ಗ್ರಾಮೀಣ ಸಂವೇದನೆಯ…
ಲೇಖಕರು: Ashwin Rao K P
February 04, 2023
ಕಥೆಗಾರ ಶಿವಕುಮಾರ ಮಾವಲಿ ಅವರು ‘ಪ್ರೇಮದ ಆಫೀಸು ಮತ್ತು ಅವಳು' ಎಂಬ ಕುತೂಹಲ ಭರಿತ ಶೀರ್ಷಿಕೆಯನ್ನು ಹೊಂದಿರುವ ಕಥಾ ಸಂಕಲನವನ್ನು ಹೊರತಂದಿದ್ದಾರೆ. "ಕೆಲವೊಮ್ಮೆ ನಾಟಕೀಯತೆ ಈ ಕತೆಗಳ ಸಂವಿಧಾನವೇನೋ ಅನ್ನಿಸುವಷ್ಟರಲ್ಲೇ, ಬದುಕಿನಲ್ಲಿರುವ ನಾಟಕೀಯತೆಯನ್ನು ಅವು ನೆನಪಿಸುತ್ತವೆ. 'ಕತೆ ಕಟ್ಟುವಿಕೆ' ಎಂಬುದನ್ನೇ ನಾನು ನಂಬುತ್ತೇನೆ. ಕೆಲವೇ ನಿಮಿಷಗಳಲ್ಲಿ ಓದಿ ಮುಗಿಸಬಹುದಾದ ಕತೆಯೊಂದು ಅನಂತರದಲ್ಲಿ ಓದುಗನಲ್ಲಿಯೂ ಮುಂದುವರೆಯಬಹುದು" ಎನ್ನುವುದು ಲೇಖಕರಾದ  ಶಿವಕುಮಾರ ಮಾವಲಿ ಅವರ ಮಾತು . “…
ಲೇಖಕರು: Ashwin Rao K P
February 02, 2023
ಭಾರತದ ಪ್ರಥಮ ಮಹಿಳಾ ಶಿಕ್ಷಕಿಯಾದ ಸಾವಿತ್ರಿಬಾಯಿ ಫುಲೆ ಅವರ ಬಗ್ಗೆ ನೀವು ಈಗಾಗಲೇ ಕೇಳಿರಬಹುದು. ಸಾವಿತ್ರಿಬಾಯಿಯವರ ಬದುಕಿನ ಹೋರಾಟದ ಕಥೆಯನ್ನು ನಾಟಕದ ಮೂಲಕ ಪ್ರಸ್ತುತ ಪಡಿಸಿದ್ದಾರೆ ವೈಜ್ಞಾನಿಕ ಬರಹಗಾರ, ಕವಿ ಕೆ ನಟರಾಜ್ ಅವರು. ತಮ್ಮ ಲೇಖಕರ ನುಡಿಯಲ್ಲಿ ಅವರು ಹೇಳಿದ್ದು “ಸಾವಿತ್ರಿ ಬಾಯಿ ಫುಲೆ ಹಾಗೂ ಜ್ಯೋತಿರಾವ್ ಫುಲೆಯವರ ಹೆಸರು ಭಾರತದ ಇತಿಹಾಸದಲ್ಲಿ ಮರೆಯಲಾಗದ ಹೆಸರುಗಳು. ಕತ್ತಲೆಯ ಕೂಪದಂತಿದ್ದ ಭಾರತೀಯ ಸಮಾಜವನ್ನು ಬೆಳಕಿನಡೆಗೆ ಕೊಂಡೊಯ್ದವರು. ಭಾರತೀಯ ಸ್ತ್ರೀ ಸಮಾಜಕ್ಕೆ ಹೊಸ…
ಲೇಖಕರು: addoor
February 02, 2023
ಬಿ.ಎಸ್. ರುಕ್ಕಮ್ಮ ಅವರ ಈ ಮಕ್ಕಳ ಕತೆಗಳ ಸಂಕಲನದಲ್ಲಿ ಹತ್ತು ಮಕ್ಕಳ ಕತೆಗಳಿವೆ. ಇವೆಲ್ಲವೂ ವಿವಿಧ ಲೇಖಕರು ಬರೆದ ಮಕ್ಕಳ ಕುತೂಹಲ ಕೆರಳಿಸುವ ಕತೆಗಳು. ಮೊದಲನೆಯ ಕತೆ “ಜಾಣರು ತೋಡಿದ ಬಾವಿ”. ಪರೋಪಕಾರಿ ಗಣಪತಿ ಮತ್ತು ಅವನ ಗೆಳೆಯ ಧನಪ್ಪನ ಕತೆ. ತನ್ನ ಹೊಲದಲ್ಲಿ ಬಾವಿ ತೋಡಲು ಹೊರಟ ಧನಪ್ಪನಿಗೆ ಗಣಪತಿಯ ಸಹಾಯ. ಇಬ್ಬರೂ ಹತ್ತಡಿ ಆಳದ ಬಾವಿ ತೋಡುತ್ತಾರೆ. ಅನಂತರ, ಮಳೆ ಬಂದರೆ ಬಾವಿಯಿಂದ ತೆಗೆದ ಮಣ್ಣೆಲ್ಲ ಕೊಚ್ಚಿ ಹೋಗುತ್ತದೆ ಎಂಬ ಆತಂಕ ಧನಪ್ಪನಿಗೆ. ಹಾಗಾಗಿ ಎರಡನೇ ಬಾವಿ ತೋಡಿ ಅದರಲ್ಲಿ…
ಲೇಖಕರು: Ashwin Rao K P
January 31, 2023
“ಕರ್ನಾಟಕದ ಒಂದು ಭಾಗದವರು ಇನ್ನೊಂದು ಭಾಗದ ಓದುಗರನ್ನು ಮನಸ್ಸಿನಲ್ಲಿಟ್ಟುಕೊಂಡು ತಮ್ಮ ಅನುಭವ ಹಂಚಿಕೊಳ್ಳುವ ವಿನ್ಯಾಸವು ಕನ್ನಡದಲ್ಲಿ ಜನಪ್ರಿಯವಾಗಿದೆ. ಆದರೆ ಇಲ್ಲಿ ಅಧಿಕಾರ ಕೇಂದ್ರವಿರುವ ದಕ್ಷಿಣದ ಕರ್ನಾಟಕದ ಎದುರು, ಉತ್ತರ ಕರ್ನಾಟಕ ವಿಶಿಷ್ಟವಾದ ಭಾಷೆಯನ್ನಾಗಲಿ ಅನುಭವವನ್ನಾಗಲಿ ವೈಭವೀಕರಿಸುವುದಿಲ್ಲ ಇಲ್ಲವೇ ಕೀಳೀಕರಿಸುವುದಿಲ್ಲ. ತನ್ನ ಪಾಲಿಗೆ ಕನ್ನಡ ನಾಡಿನ ಬದುಕೆಲ್ಲ ಒಂದೇ ಎಂಬ ಸಮದರ್ಶಿಯಾದ ದೃಷ್ಟಿಕೋನವು ಇಲ್ಲಿ ಕೆಲಸ ಮಾಡುತ್ತದೆ,'' ಎನ್ನುತ್ತಾರೆ "ಮಿಲ್ಟ್ರಿ ಟ್ರಂಕು'…