ಪುಸ್ತಕ ಪರಿಚಯ
ಲೇಖಕರು: Ashwin Rao K P
December 02, 2023

ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲೇ ಯಶೋಧರಾ ದಾಸಪ್ಪ ಅವರು ರಾಜಕಾರಣಿಯಾಗಿ, ಶಾಸನ ಸಭೆಯ ಪ್ರತಿನಿಧಿಯಾಗಿ, ಸ್ವತಂತ್ರ ಭಾರತದಲ್ಲಿ ರಾಜ್ಯದ ಸರಕಾರದ ಮಂತ್ರಿಯಾಗಿ ಕೆಲಸ ನಿರ್ವಹಿಸಿ ಯಶಸ್ವಿಯಾದವರು. ದೇಶ ಕಂಡ ಈ ಅಪರೂಪದ ರಾಜಕಾರಣಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷರೂ ಆಗಿದ್ದರು. ಇವರು ನಮ್ಮ ರಾಜ್ಯದ ಪ್ರಥಮ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ. ಇವರ ನಂತರ ಈವರೆಗೂ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮಹಿಳಾ ಅಧ್ಯಕ್ಷರ ನೇಮಕ ಆಗಿಲ್ಲ. ಇಂದಿನ ಕಾಂಗ್ರೆಸ್ ಮಂದಿಗೇ…
ಲೇಖಕರು: Ashwin Rao K P
November 30, 2023

ಭಾರತ ಕಂಡ ಶ್ರೇಷ್ಟ ವಿಜ್ಞಾನಿ ಪ್ರೊ. ಸಿ ಎನ್ ಆರ್ ರಾವ್ ಅವರು “A Life in Science” ಎಂಬ ಹೆಸರಿನಲ್ಲಿ ತಮ್ಮ ಆತ್ಮ ಕಥೆಯನ್ನು ಬರೆದಿದ್ದಾರೆ. ಆಂಗ್ಲ ಭಾಷೆಯಲ್ಲಿರುವ ಈ ಆತ್ಮಕಥೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಖ್ಯಾತ ಅನುವಾದಕರಾದ ಎಂ ಎಸ್ ಎಸ್ ಮೂರ್ತಿ ಇವರು. “ವಿಜ್ಞಾನದೊಳಗೊಂದು ಜೀವನ" ಎಂಬ ಹೆಸರಿನಲ್ಲು ಪ್ರೊ. ರಾವ್ ಅವರ ಆತ್ಮಕಥೆ ಕನ್ನಡಕ್ಕೆ ಬಂದಿದೆ. ಅನುವಾದಕರು ತಮ್ಮ ಮಾತಿನಲ್ಲಿ ಹೇಳಿರುವುದು ಹೀಗೆ...
“೧೯೩೪ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಸಿ. ಎನ್. ಆರ್. ರಾವ್ ಇಂದು…
ಲೇಖಕರು: addoor
November 29, 2023

ಉತ್ತರಕನ್ನಡದ ಹೆಸರುವಾಸಿ ಪರಿಸರ ಬರಹಗಾರ ಶಿವಾನಂದ ಕಳವೆ ಅವರ ಅಪರೂಪದ ಪುಸ್ತಕವಿದು. ಕಾಲುದಾರಿಯಲ್ಲಿ ಅಡ್ಡಾಡುವ, ಬೆಟ್ಟಗುಡ್ಡಗಳನ್ನು ಏರಿಳಿಯುವ ಶಿವಾನಂದ ಕಳವೆ ಪ್ರಾಣಿ-ಪಕ್ಷಿ-ಕೀಟಗಳಿಗೆ ದನಿ ಕೊಡುತ್ತಾರೆ. ಗದ್ದೆತೋಟಗಳ ನಡುವೆ ನಡೆಯುತ್ತಾ, ಬೈಕ್ ಓಡಿಸುತ್ತಾ ಉತ್ತರಕನ್ನಡದ ಮೂಲೆಮೂಲೆಯ ಹಳ್ಳಿ ತಲಪುವ ಅವರು ಗುಡಿಸಲುಗಳ ಒಳಗಿರೋ ಮಾತುಗಳಿಗೆ ಧ್ವನಿಯಾಗುತ್ತಾರೆ. ಎಲ್ಲ ದನಿಗಳಿಗೂ ಅಕ್ಷರದ ರೂಪ ನೀಡಿ, ನಮ್ಮೆದುರು ಅದ್ಭುತ ಚಿತ್ತಾರ ಹರಡುತ್ತಾರೆ.
“ಸುದ್ದಿ ಕಟ್ಟೆಗೆ ಹೆಜ್ಜೆ” ಎಂಬ…
ಲೇಖಕರು: Ashwin Rao K P
November 28, 2023

ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿರುವ ಡಾ.ಶಶಿಕಿರಣ್ ಶೆಟ್ಟಿಯವರು ಬರೆದ ಪುಟ್ಟ ಪುಟ್ಟ ಕತೆಗಳ ಸಂಗ್ರಹವೇ “ಬದುಕ ಬದಲಿಸುವ ಕತೆಗಳು". ಶಶಿಕಿರಣ್ ಇವರು ಈ ಪುಸ್ತಕದಲ್ಲಿ ತಮ್ಮ ವೃತ್ತಿ ಜೀವನದಲ್ಲಿ ಹಾದು ಹೋದ, ಸಮಾಜದಲ್ಲಿ ನಡೆಯುತ್ತಿರುವ ಮತ್ತು ತಾವು ವಿವಿದೆಡೆಗಳಿಂದ ಕೇಳಿದ ವಿಷಯಗಳನ್ನು ಕತೆಯ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಆ ಕತೆಗಳಿಗೆ ಪುಸ್ತಕವೆಂಬ ಚೌಕಟ್ಟು ಹಾಕಿ ಓದುಗರಿಗೆ ಉಣಬಡಿಸಲು ಹೊರಟಿದ್ದಾರೆ. ಇಲ್ಲಿರುವ ಎಲ್ಲಾ ಕತೆಗಳು ನಮ್ಮ ಸುತ್ತಮುತ್ತಲು ನಡೆಯುವಂಥದ್ದೇ. ಈ…
ಲೇಖಕರು: Ashwin Rao K P
November 24, 2023

ಐತಿಹಾಸಿಕ ಕಾದಂಬರಿಗಳನ್ನು ಬರೆಯುವುದು ಒಂದು ಸಾಹಸದ ಕಥೆ. ಏಕೆಂದರೆ ಐತಿಹಾಸಿಕ ಕಾದಂಬರಿಗಳನ್ನು ಬರೆಯಲು ಹೊರಟಾಗ ನೀವು ನಿಮ್ಮ ಮನದಲ್ಲಿ ಮೂಡಿದ ಕಲ್ಪನಾ ಲಹರಿಗಳನ್ನೆಲ್ಲಾ ಅದರಲ್ಲಿ ಅಳವಡಿಸುವಂತಿಲ್ಲ. ಕಥೆಗೆ ಪೂರಕ ಎಂದು ಅನಗತ್ಯ ವಿಷಯಗಳನ್ನು ತುರುಕುವಂತಿಲ್ಲ. ಇಂತಹ ಕಾದಂಬರಿಗಳನ್ನು ಬರೆಯಲು ತಾಳ್ಮೆ, ತಿರುಗಾಟದ ಹುಚ್ಚು, ಅಧ್ಯಯನ ಪ್ರವೃತ್ತಿ ಎಲ್ಲವೂ ಅತ್ಯಂತ ಅಗತ್ಯ. ಇಂತಹ ಎಲ್ಲಾ ಗುಣಗಳನ್ನು ತುಂಬಿಕೊಂಡಿರುವ ಕನ್ನಡ ಅಪರೂಪದ ಕಾದಂಬರಿಕಾರ ಸಂತೋಷಕುಮಾರ ಮೆಹೆಂದಳೆ ಎಂದರೆ ತಪ್ಪಾಗಲಾರದು…
ಲೇಖಕರು: addoor
November 23, 2023

ಕನ್ನಡದ ಸುಪ್ರಸಿದ್ಧ ಲೇಖಕ ಡಾ. ಸಿ.ಆರ್. ಚಂದ್ರಶೇಖರ್ ಬರೆದ ಪುಸ್ತಕವಿದು. ಅವರು ಕನ್ನಡ ಮತ್ತು ಇಂಗ್ಲಿಷಿನಲ್ಲಿ 110ಕ್ಕಿಂತ ಅಧಿಕ ಪುಸ್ತಕಗಳನ್ನು ಬರೆದವರು. ಇದರಲ್ಲಿರುವ ಸೂತ್ರಗಳನ್ನು ಅನುಸರಿಸಿ ಆರೋಗ್ಯವಂತ ವ್ಯಕ್ತಿಗಳಾಗುವುದು ನಮ್ಮ ಕೈಯಲ್ಲೇ ಇದೆ.
ಈ ಪುಸ್ತಕದ ಮುನ್ನುಡಿಯಲ್ಲಿ ಆರೋಗ್ಯವಂತ ವ್ಯಕ್ತಿಯ ಲಕ್ಷಣಗಳನ್ನು ಅವರು ಹೀಗೆಂದು ತಿಳಿಸಿದ್ದಾರೆ: “ಒಬ್ಬ ವ್ಯಕ್ತಿ ಆರೋಗ್ಯವಂತನಾದ, ಉಪಯುಕ್ತ ಹಾಗೂ ಯಶಸ್ವೀ ವ್ಯಕ್ತಿ ಎನಿಸಿಕೊಳ್ಳಬೇಕಾದರೆ, ಬರಿಯ ದೇಹ ಗಟ್ಟಿ ಮುಟ್ಟಾಗಿದ್ದರೆ ಸಾಲದು…