ಕವನಗಳು

ವಿಧ: ಕವನ
May 08, 2024
ಬೋನಿನ ಒಳಗಡೆ ಇರಿಸಿದ ತಿನಿಸನು ದಾನವಿದೆನ್ನುತ ಬಯಸದಿರು ಪ್ರಾಣವ ತೆಗೆಯುವ ರೂಪಿತ ಸಂಚಿದು ಬೇನೆಯ ಸುಳಿಯಲಿ ಸಿಲುಕದಿರು   ಬಲೆಯಲಿ ಸಿಲುಕಿಸಿ ಹಣಿಯುವ ತಂತ್ರವು ಒಳಗಡೆ ಇರಿಸಿದ ಸಿಹಿತಿಂಡಿ ಹಲವಿಧ ಹಾದಿಯ ಹಿಡಿವರು ಜಯಿಸಲು ಕಲೆಯಲಿ ಜಾಣರು ಈ ಮಂದಿ   ಜಾಲವನರಿಯುತ ಎಚ್ಚರದಿಂದಿರು ಕೋಲನು ಮರೆಯಲಿ ಇರಿಸಿಹರು ಕಾಲವು ಬದಲಿದೆ ಅವರಿಗೆ ಅರಿಯಲಿ ಸೋಲಿನ ರುಚಿಯನು ನೀ ತೋರು||   -ಪೆರ್ಮುಖ ಸುಬ್ರಹ್ಮಣ್ಯ ಭಟ್ (ಚಿತ್ರ ಕೃಪೆ : ಅಂತರ್ಜಾಲ) 
ವಿಧ: ಕವನ
May 07, 2024
ರೆಕ್ಕೆಯು ಕಳಚಿದೆ ಪಕ್ಕದೆ ಬಿದ್ದಿದೆ ಚೊಕ್ಕದ ಬಾಳಲಿ ಬರಸಿಡಿಲು ಕೊಕ್ಕಿಗೆ ಕಾಳನು ಇಕ್ಕುವರಿಲ್ಲದೆ ಹಕ್ಕಿಯು ನರಳಿದೆ ನೋವಿನೊಳು   ಕಿರಿಕಿರಿ ಮಾಡದೆ ಕರುಣೆಯ ನೋಟದೆ ಕರೆದಿದೆ ಸನಿಹಕೆ ಈ ಹಕ್ಕಿ ನೆರವನು ಬಯಸಿದೆ ದೊರೆಯುವ ಭರವಸೆ ಮೊರೆಯನು ಇಡುತಿದೆ ನೋವುಕ್ಕಿ   ಬಿಕ್ಕುವ ಪರಿಯಲಿ ಹಕ್ಕಿಯ ನೋಯಿಸಿ ದಕ್ಕಿಸಿಕೊಳ್ಳುವ ಧಾವಂತ ಸೊಕ್ಕಿನ ಕ್ರೌರ್ಯಕೆ ಸಿಕ್ಕದು‌ ಮನ್ನಣೆ ತಕ್ಕಡಿ ಹಿಡಿದಿಹ ಭಗವಂತ||   -ಪೆರ್ಮುಖ ಸುಬ್ರಹ್ಮಣ್ಯ ಭಟ್ (ಚಿತ್ರ ಕೃಪೆ : ವಾಟ್ಸಾಪ್) 
ವಿಧ: ಕವನ
May 06, 2024
ಶ್ವಾನಗಳು ತಮ್ಮ ಮಾತನ್ನೇ ಸಮರ್ಥಿಸಿಕೊಳ್ಳುತ್ತವೆ ಬಾಲ ಡೊಂಕಾದರೂ ದೊಡ್ಡವರು ನಾವೆಂಬ ಅಹಂನಲ್ಲಿ  ಕತ್ತೆಗಾದಷ್ಟೂ ಪ್ರಾಯವಾದರೂ ಸಹ ! ಊಟವಾಯ್ತೇಯೆಂದು ಕೇಳಿದರೆ ಮುಂಡಾಸು ಮೂವತ್ತು ಮಳ ಎನ್ನುವ ನೀರು ಶುನಕಗಳು !   ಅಪ್ಪ ನೆಟ್ಟಿರುವ ಆಲದ ಮರಕ್ಕೇ ಸುತ್ತು ಹೊಡೆಯುವ  ಮಗನಂತೆ ,ಕೊನೆಗೆ ಮಂಗನಂತೆ  ಹಳೆಯಕಾಲದ ಗೆಲ್ಲನ್ನೇ ಹಿಡಿದು ಜೋಕಾಲಿ ಹೊಡೆಯುತ್ತೇನೆ  ಎನ್ನುವ ಹಳೆ ಕಬ್ಬಿಣ ತಾಮ್ರಗಳಿಗೆ  ಎನೆನ್ನೋಣ ? ಬದಲಾವಣೆಗೆ ತಮ್ಮನ್ನು  ತೆರೆದುಕೊಳ್ಳದವರನ್ನು  ಯಾವುದೇ ಮೇನೆಯಲ್ಲಿ  ಕೂರಿಸಿದರೂ…
ವಿಧ: ಕವನ
May 05, 2024
ಹನಿ ಹನಿಯ ನೀರು ಸುತ್ತೆಲ್ಲ ಹರಿದು ನದಿಯಾಗಿ ಜೀವ ತಳೆಯೆ ಜಲ ಜಲದ ರೂಪ ಮಣ್ಣಿನಲಿ ಬೆರೆತು ಮುದದಿಂದ ಮುಂದೆ ಸಾಗೆ   ನೀರಾಟವಾಡಿ ಜಲಚರಕೆ ಖುಷಿಯು ಇಳೆಗೀಗ ಹಸಿರೆ ಉಸಿರು ಹೊಲದಲ್ಲಿ ಬೆಳೆಯು ನಳನಳಿಸುತಿರಲು ವರುಣನಿಗೆ ಮತ್ತೆ ಗೆಲುವು   ಹೊಂಗನಸು ತೇಲಿ ರೈತನಿಗೆ ತಾಗೆ ಹರುಹರುಷ ಮನಸಿನೊಳಗೆ ಕನಸೆಲ್ಲ ಕರಗಿ ನನಸೊಳಗೆ ಬರಲು ಮನೆಯೊಳಗೆ ಪ್ರೀತಿ ತೊಡುಗೆ   ಬಂತದೋ ಮಳೆಯು ವೈಯಾರದೊಳಗೆ ಸುತ್ತೆಲ್ಲ ಮಿಂಚು ಸಿಡಿಲೆ ಆಗಸದ ತುಂಬ ಹೊಂಗಿರಣದುಡುಗೆ ಪ್ರಕೃತಿಯೊಳು ಸವಿಯ ಸಂಜೆ *** ಸಾಹಿತ್ಯವು ಬೆಳಗಲಿ…
ವಿಧ: ಕವನ
May 04, 2024
ಪ್ರಕೃತಿಯ ಮಡಿಲಲಿ ಬೆಳೆದಿಹ ಮರವದು ಇಂದಿಗೆ ಕೇವಲ ನೆನಪಿನಲಿ ಮನುಜನ ಕ್ರೌರ್ಯದ ಕೊಡಲಿಯ ದಾಳಿಗೆ ಬೆಳೆದಿಹ ವೃಕ್ಷವು ಧರೆಗುರುಳಿ   ಉಳಿದಿಹ ಕಾಂಡವ ಬಿಸಿಲಿನ ತಾಪವು ಇರಿಸಿದೆ ನಡುವಲಿ ಅದಸೀಳಿ ಯಾವುದೊ ಸಸ್ಯದ ಬಲಿತಿಹ ಬೀಜವ ತಂದಿದೆ ಬೀಸಿದ ತಂಗಾಳಿ   ಸೀಳಲಿ ಉಳಿದಿಹ ಬೀಜವ ನೆನೆಸಿತು ಮೇಘವು ಮಳೆಯನು ತಾ ಸುರಿಸಿ ಇದ್ದೆಡೆಯಲ್ಲಿಯೆ ಮೊಳಕೆಯನೊಡೆಯಿತು ಚಂದದಿ ನಗುತಿದೆ ಅದು ಚಿಗುರಿ   ಜೀವವ ಕಳೆದಿಹ ವೃಕ್ಷವು ಕಾಂಡವ ದಾನವ ಮಾಡಿತೆ ತ್ಯಾಗಮಯಿ? ಮಾನವಗಿತ್ತಿದೆ ಮಾದರಿ ಪಾಠವ ಸಾರ್ಥಕ ಬದುಕಿನ…
ವಿಧ: ಕವನ
May 03, 2024
ಯಾರೂ ಕು-ಕವಿಗಳು ನಾಡಿನಲಿಲ್ಲ  ಬರೆದವನಿಗೆ ತಲೆ ಸರಿ ಇಲ್ಲ ! *** ಕಣ್ಣ ಸನ್ನೆಗೆ ಬಂದಳು ಬಾಹು ಬಂಧನಕೆ ಸಿಕ್ಕಳು ತಾಳಿ ಹಿಡಿದು ನಿಂತಳು ನೋಡುವುದೇನು ಈಗ ಅವಳ ಸುತ್ತಲೂ ಮಕ್ಕಳು ! *** ಜೀವನದ ದಾರಿಯಲಿ ಹಲವಾರು ತೊಂದರೆಯು ಪಾತಾಳ ಸೇರಿದರೂ ಬಿಡದಾದ ಚಂದಿರೆಯು ಹರಿದಿರುವ ಮನಸ್ಸಿನ ಹಿಂದೆಯೇ ಬರುವಳು ಬೇಡವೆಂದರೂ ನನ್ನನ್ನೇ ನೋಡುತಲೆ ತಬ್ಬುವಳು *** ನನ್ನ ಮನೆಯಂಗಳದ ರಾಣಿ ಬಲ್ಲವರಿಗೆ ಗೊತ್ತು ಅವಳ ವಾಣಿ ರಾತ್ರಿಯಾದರೆ ಬೊಬ್ಬೆ ಹಗಲಲ್ಲಿ ಬರಿ ನಿದ್ದೆ ಉಳಿದವರಿಗೆ ದಿನ ದಿನವು ಜಾಗರಣಿ ***…
ವಿಧ: ಕವನ
May 02, 2024
ಬಿಸಿಲಿನ ಬೇಗೆಗೆ ಬಸವಳಿದೀಜಗ ಕಸಿವಿಸಿಗೊಳ್ಳುತ ಕುಳಿತಿರಲು ನಸುಕಲಿ ಬಿರಿದಿಹ ಕುಸುಮವು ಮುದುಡಿದೆ ವಸುಧೆಯು ದಾಹದೆ ನೊಂದಿರಲು   ಮುತ್ತಿದ ಬೇಸಿಗೆ ಕುತ್ತನು ತಂದಿದೆ ಕತ್ತಲಿನಲ್ಲಿದೆ ಧರೆ ಜೀವಿ ಶಿಸ್ತನು ಕಾಯದೆ ಹೊತ್ತಿಗೆ ಸುರಿಯದೆ ಬತ್ತಿದೆ ಸುತ್ತಲ ಕೆರೆ ಬಾವಿ   ಹಕ್ಕಿಯು ಕುಳಿತಿದೆ ಕೊಕ್ಕನು ತೆರೆದಿದೆ ರೆಕ್ಕೆಯು ಸೋತಿದೆ ದಾಹದಲಿ ದಕ್ಕಿದ ಕಾಳನು ಮುಕ್ಕಲಿಕಾಗದು ದಕ್ಕದೆ ಜಲಹನಿ ಸನಿಹದಲಿ   ಜಗದಲಿ ಜೀವಿಯ ಮುಗಿಯದ ನೋವಿಗೆ ಸಿಗುವುದೆ ಶೀಘ್ರದೆ ಪರಿಹಾರ? ಮುಗಿಲಿದು ಬಂದಿತು ಗಗನದ…
ವಿಧ: ಕವನ
May 01, 2024
ನಮ್ಮ ಅವ್ವನ ರಟ್ಟಿ  ರೊಟ್ಟಿ ಬಡಿಯಾಕ ಗಟ್ಟಿ ಜ್ವಾಳ ಹಸನಮಾಡಿ ಇಟ್ಟಿ ತೊಗೊಂಡು ಗಿರಣಿಗೆ  ಹೊಂಟಿ    ಒಲೆಮ್ಯಾಲೆ ಹೆಂಚು ಇಟ್ಟಿ ಅದರೊಳಗೆ ನೀರು ಹಾಕಿ ಇಟ್ಟೆ ಒಲೆಯಲ್ಲಿ ಕಟ್ಟಿಗೆ ಇಟ್ಟೆ ಹಿಟ್ಟು ಕೊನಂಗಿಯಲ್ಲಿ ಹಾಕಿ ಇಟ್ಟೆ   ರೊಟ್ಟಿ ಬಡಿಯ್ಯಾಕ ಕುಂತಿ ಕೊನಂಬಿಗಿಯೊಳಗೆ ಡೋಣಿ ಮಾಡಿ  ಹಿಟ್ಟಲಿ ನೀರು ತಿರುಗಿಸಿ ತಿರುಗಿಸಿ  ಹಿಟ್ಟಿಗೆ ಜಿಗುಟು ಹಾಕಿ ಬಿಟ್ಟೆ ಅವ್ವ    ಹದಕ್ಕೆ ಕಲಸಿಕೊಂಡು ಬಿಟ್ಟು ಅದನ್ನು ಕೈಯಿಂದ ಮಿಜ್ಜಿ ಮಿಜ್ಜಿ ಹದಕ್ಕೆ ಹಿಟ್ಟು ಮಾಡಿ ಕೊಂಡೆವ್ವ ಸರಿಯಾಗಿ ಹಿಟ್ಟು…
ವಿಧ: ಕವನ
April 30, 2024
ದುಡಿಮೆಯಲಿ ನಾ ಸಾಗಿ ಗಡಿಬಿಡಿಯ ಬಾಳಲ್ಲಿ ಬಿಡುವನ್ನು ಬಯಸಿ ಮನ ರೋಸಿ ಹೋಗಿ ಕಡಲತ್ತ ಸೆಳೆದಿರಲು ದಡದಲ್ಲಿ ನಡೆದಿರಲು ತಡೆಯೊಡ್ಡಿ ಕರೆದಿತ್ತು ನನ್ನ ಕೂಗಿ   ನಡುವಿನಲಿ ಕರವಿಟ್ಟು ಬೆಡಗಿನಲಿ ಕುಳಿತಿರುವ ಹುಡುಗಿಯನು ನಾ ಕಂಡೆ ದಂಡೆಯಲ್ಲಿ ಕಡು ನೀಲಿ ಪೋಷಾಕು ಮುಡಿಯಲ್ಲಿ ಹೂವಿಟ್ಟು ಚಡಪಡಿಕೆ ಇಣುಕಿತ್ತು ಮೋರೆಯಲ್ಲಿ   ನಿಡುಸುಯ್ದು ಉಸಿರಲ್ಲಿ ನಡುಗುತಿಹ ಧ್ವನಿಯಲ್ಲಿ ನುಡಿದಿಹಳು ವೃತ್ತಾಂತ ಅಳೆದು ತೂಗಿ ಬಡತನದ ಬಾಳಲ್ಲಿ ಕಡೆಗಣಿಪ ಜನರೊಡನೆ ಹೊಡೆದಾಡಿ ಬಂದಿಹಳು ಸೋತುಹೋಗಿ   ಮಿಡಿಯುತಿಹ…
ವಿಧ: ಕವನ
April 29, 2024
ಕಿಟಕಿಗಳಿಂದಾಚೆ ಕಣ್ಣೋಟ ಭಾವ ಹೇಳತೀರದು...! ಕಿವಿಗೆ ಅಪ್ಪಳಿಸುತ್ತಿದೆ ಸಂಭಾಷಣೆಯ ಅಲೆ....   ಎಷ್ಟೊಂದು ಚಂದ,ಸುಂದರ ಆಹಾ.... ಹೇಳತೀರದು ಆ ಸೆಳೆತ... ಬೆಂಡಾಗಿ ಮಾಗಿದ  ಚಿತ್ರ.. ನೋಟದಲ್ಲೇ ಮರುಳು..   ಆ ಹುಡುಗನಿಗೆ ಗೊತ್ತಾಗುವುದಾದ್ರೂ ಹೇಗೆ...! ಮಾತಿನ ಭರದಲ್ಲಿ ಹೇಳಿದ್ದಾಯಿತು ಎಲ್ಲಾ...! ಆ ಕಡೆಯಿಂದ ನಿಶಬ್ದ ಛೇ.... ಏನಪ್ಪಾ ಹೀಗಾಯ್ತು...!!   ವಾಸ್ತವದಲ್ಲಿ ಶೂನ್ಯ... ಉದರದ ಪೋಷಣೆಯಲ್ಲಿ! ದೃಷ್ಟಿಯಿಂದ ಇಬ್ಬರೂ ಬಹುದೂರ... ಕಣ್ಣಿಲ್ಲದ ಊರಲ್ಲಿ ಕನ್ನಡಿಯ ಮಾರಿದಂತೆ...!   ಅದೇ…