ಹೂವಾದ ಗಳಿಗೆ
ಕವನ
ಕಿಟಕಿಗಳಿಂದಾಚೆ ಕಣ್ಣೋಟ
ಭಾವ ಹೇಳತೀರದು...!
ಕಿವಿಗೆ ಅಪ್ಪಳಿಸುತ್ತಿದೆ
ಸಂಭಾಷಣೆಯ ಅಲೆ....
ಎಷ್ಟೊಂದು ಚಂದ,ಸುಂದರ
ಆಹಾ.... ಹೇಳತೀರದು ಆ ಸೆಳೆತ...
ಬೆಂಡಾಗಿ ಮಾಗಿದ ಚಿತ್ರ..
ನೋಟದಲ್ಲೇ ಮರುಳು..
ಆ ಹುಡುಗನಿಗೆ
ಗೊತ್ತಾಗುವುದಾದ್ರೂ ಹೇಗೆ...!
ಮಾತಿನ ಭರದಲ್ಲಿ
ಹೇಳಿದ್ದಾಯಿತು ಎಲ್ಲಾ...!
ಆ ಕಡೆಯಿಂದ ನಿಶಬ್ದ
ಛೇ.... ಏನಪ್ಪಾ ಹೀಗಾಯ್ತು...!!
ವಾಸ್ತವದಲ್ಲಿ ಶೂನ್ಯ...
ಉದರದ ಪೋಷಣೆಯಲ್ಲಿ!
ದೃಷ್ಟಿಯಿಂದ ಇಬ್ಬರೂ ಬಹುದೂರ...
ಕಣ್ಣಿಲ್ಲದ ಊರಲ್ಲಿ
ಕನ್ನಡಿಯ ಮಾರಿದಂತೆ...!
ಅದೇ ಕ್ಷೀಣ ನೋಟ...
ದನಿಸುತ್ತಿದ್ದವು ಕಂಗಳು!
ಕತ್ತಲಾಗಿತ್ತು! ಒಳಗೂ..ಹೊರಗೂ..
ನೆಮ್ಮದಿಯ ನಿಟ್ಟುಸಿರಿನ ತೀರಕ್ಕೂ
ಬರಬೇಕಲ್ಲ ಕಾಲ....!
ಮೊಗ್ಗು ಹೂವಾದ ಗಳಿಗೆ...!!!
ಹೂವು ಸಾರ್ಥಕ್ಯದ ಕಡೆಗೆ...!!
-ದೀಪಾ ಪಾವಂಜೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್