ಅಂತರರಾಷ್ಟ್ರೀಯ ನ್ಯಾಯಕ್ಕಾಗಿ ವಿಶ್ವ ದಿನ
‘ಅಂತರರಾಷ್ಟ್ರೀಯ ನ್ಯಾಯಕ್ಕಾಗಿ ವಿಶ್ವ ದಿನ’ವನ್ನು ಪ್ರತಿವರ್ಷ ಜುಲೈ 17 ರಂದು ಆಚರಿಸಲಾಗುತ್ತದೆ. ಈ ದಿನಕ್ಕೆ ಅಂತರರಾಷ್ಟ್ರೀಯ ಅಪರಾಧ ನ್ಯಾಯದ ದಿನ ಅಥವಾ ಅಂತರರಾಷ್ಟ್ರೀಯ ನ್ಯಾಯ ದಿನ ಎಂದು ಸಹ ಹೆಸರಿನಿಂದ ಕರೆಯುತ್ತಾರೆ. ಈ ದಿನ ಸಂತ್ರಸ್ತರಿಗೆ ಶಕ್ತಿಯನ್ನು ನೀಡುತ್ತದೆ. ತಮಗೆ ಮಾಡಿದ ಅಪರಾಧಗಳ ವಿರುದ್ಧ ಅವರು ಅಂತಿಮವಾಗಿ ತಮ್ಮ ಪರವಾಗಿ ನಿಲ್ಲಬಹುದು. ಅಂತರರಾಷ್ಟ್ರೀಯ ನ್ಯಾಯವು ಪ್ರತಿದಿನ ಬಲಗೊಳ್ಳುತ್ತಿದೆ ಮತ್ತು ಜನರಿಗೆ ಅದರ ಬಗ್ಗೆ ಚೆನ್ನಾಗಿ ಅರಿವು ಮೂಡಿಸಬೇಕಾಗಿದೆ. ಈ ದಿನ ಸಂತ್ರಸ್ತರಿಗೆ ಯುದ್ಧ, ಮಾನವೀಯತೆ ಮತ್ತು ನರಮೇಧಕ್ಕೆ ಸಂಬಂಧಿಸಿದ ಅಪರಾಧಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಅನ್ಯಾಯಕ್ಕೊಳಗಾದವರಿಗೆ ನ್ಯಾಯದ ಅವಶ್ಯಕತೆಯ ಬಗ್ಗೆ ಜನರಿಗೆ ಅರಿವು ಮೂಡಿಸಲು, ಇದು ಪ್ರಮುಖ ಗಂಭೀರ ವಿಷಯಗಳನ್ನೂ ಎತ್ತಿ ತೋರಿಸಲು, ಜನರಿಗೆ ಮಾಡಿದ ಅಪರಾಧಗಳ ಬಗ್ಗೆ ಮಾತನಾಡಲು ಧೈರ್ಯವನ್ನು ಪಡೆಯಲು ಇದು ಸಹಾಯ ಮಾಡುತ್ತದೆ. ಅಪರಾಧಿಗಳು ಯಾವುದೇ ಅಪರಾಧಗಳನ್ನು ಮಾಡಿದರೆ ಅವರು ಎದುರಿಸಬೇಕಾದ ಪರಿಣಾಮಗಳ ಬಗ್ಗೆ ಎಚ್ಚರಿಸುತ್ತದೆ ಈ ದಿನ.
ಸಂತ್ರಸ್ತರ ಹಕ್ಕುಗಳನ್ನು ಉತ್ತೇಜಿಸುವಾಗ ನ್ಯಾಯವನ್ನು ಬೆಂಬಲಿಸುವ ಎಲ್ಲರನ್ನೂ ಒಟ್ಟುಗೂಡಿಸುವ ಈ ದಿನವು ಶಾಂತಿ ಭದ್ರತೆ ಮತ್ತು ಒಟ್ಟಾರೆಯಾಗಿ ವಿಶ್ವದ ಯೋಗಕ್ಷೇಮಕ್ಕೆ ಧಕ್ಕೆ ತರುವ ಸ್ವಭಾವದ ಅಪರಾಧಗಳನ್ನು ತಡೆಯಲು ಸಹಾಯ ಮಾಡುತ್ತದೆ. ಅಲ್ಲದೇ ಮಾನವೀಯತೆಯ ವಿರುದ್ಧ ಹನ್ನೊಂದು ವಿಶಾಲ ಅಪರಾಧಗಳನ್ನು ವ್ಯಾಖ್ಯಾನಿಸುವಾಗ ನ್ಯಾಯಾಲಯದ ಕಾರ್ಯಗಳು, ನ್ಯಾಯವ್ಯಾಪ್ತಿ ಮತ್ತು ರಚನೆಯನ್ನು ನಿರ್ಧಿಷ್ಟವಾಗಿ ಸ್ಥಾಪಿಸುತ್ತದೆ, ಅವುಗಳೆಂದರೆ, ನಿರ್ನಾಮ, ಕೊಲೆ, ಗುಲಾಮಗಿರಿ, ಚಿತ್ರಹಿಂಸೆ, ಜೈಲು ಶಿಕ್ಷೆ, ಅತ್ಯಾಚಾರ, ಬಲವಂತದ ಗರ್ಭಪಾತ ಮತ್ತು ಇತರ ಲೈಂಗಿಕ ಹಿಂಸೆ, ರಾಜಕೀಯದ ಮೇಲಿನ ಕಿರುಕುಳ, ಧಾರ್ಮಿಕ, ಜನಾಂಗೀಯ ಮತ್ತು ಲಿಂಗ ಆಧಾರಗಳು, ಜನಸಂಖ್ಯೆಯ ಬಲವಂತದ ವರ್ಗಾವಣೆ, ವ್ಯಕ್ತಿಗಳ ಬಲವಂತದ ಕಣ್ಮರೆ ಮತ್ತು ಉದ್ದೇಶಪೂರ್ವಕ ಸ್ವಭಾವದ ಅಮಾನವೀಯ ಕ್ರಿಯೆ ಇವುಗಳ ಮೇಲೆ ಬೆಳಕು ಚೆಲ್ಲಿ ಪರಿಹಾರಕ್ಕೆ ಹೋರಾಡಲು ಪೂರವಾದ ನ್ಯಾಯ ನೀಡುತ್ತದೆ.
ಏನೇ ಆಗಲಿ, ನಿಜವಾಗಿಯೂ ನ್ಯಾಯವಿಲ್ಲದೆ ಶಾಂತಿ ಇರಲು ಸಾಧ್ಯವಿಲ್ಲ. ಸತ್ಯವಿಲ್ಲದೆ ನ್ಯಾಯವಿಲ್ಲ. ಮತ್ತು ನಿಮಗೆ ಸತ್ಯವನ್ನು ಹೇಳಲು ಯಾರಾದರೂ ಎದ್ದೇಳದಿದ್ದರೆ ಯಾವುದೇ ಸತ್ಯವಿಲ್ಲ. ಎಂಬುದನ್ನು ಪ್ರತಿಯೊಬ್ಬರು ಅರಿಯಬೇಕು.
(ಆಧಾರ) - ಅರುಣ್ ಡಿ'ಸೋಜ, ಶಕ್ತಿನಗರ
ಚಿತ್ರ ಕೃಪೆ: ಇಂಟರ್ನೆಟ್ ತಾಣ