ಅಕ್ಕ ಮಹಾದೇವಿ
![](https://saaranga-aws.s3.ap-south-1.amazonaws.com/s3fs-public/styles/medium/public/IMG_20211001_090753%20%281%29.jpg?itok=i_qVsOcM)
‘ಅಕ್ಕ ಮಹಾದೇವಿ' ಎಂಬ ಕಾದಂಬರಿಯನ್ನು ರಚಿಸಿದ್ದಾರೆ ಸು.ರುದ್ರಮೂರ್ತಿ ಶಾಸ್ತ್ರಿ ಇವರು. ‘ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ’ ಎಂದು ಮುಖಪುಟದಲ್ಲೇ ಟ್ಯಾಗ್ ಲೈನ್ ಮುದ್ರಿಸುವ ಮೂಲಕ ಕಾದಂಬರಿಯ ಬಗ್ಗೆ ಕುತೂಹಲ ಮೂಡಿಸಿದ್ದಾರೆ. ಪುಸ್ತಕದ ಬೆನ್ನುಡಿಯಲ್ಲಿ ವಚನಗಳನ್ನು ನೀಡಲಾಗಿದೆ. ಅದರಲ್ಲಿ
“ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ!
ಪ್ರಾಣಕ್ಕೆ ಮನವಾಗಿ ಕಾಡಿತ್ತು ಮಾಯೆ!
ಮನಕ್ಕೆ ನೆನಹಾಗಿ ಕಾಡಿತ್ತು ಮಾಯೆ
ನೆನಹಿಂಗೆ ಅರಿವಾಗಿ ಕಾಡಿತ್ತು ಮಾಯೆ!
ಜಗವ ಜಂಗುಳಿಗೆ ಬೆಂಗೋಲನೆತ್ತಿ ಕಾಡಿತ್ತು ಮಾಯೆ!
ಚೆನ್ನಮಲ್ಲಿಕಾರ್ಜುನ, ನೀನೊಡ್ಡಿದ ಮಾಯೆಯನಾರೂ ಗೆಲಬಾರದು!
***
ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ
ಅಕ್ಕಿ ಅಡಕೆ ತೆಂಗಿನಕಾಯ ಕಂಡೆ,
ಚಿಕ್ಕ ಚಿಕ್ಕ ಜಡೆಯ ಸುಲಿಪಲ್ಲ ಗೊರವನು
ಭಿಕ್ಷಕ್ಕೆ ಬಂದುದ ಕಂಡೆನವ್ವ!
ಮಿಕ್ಕಿ ಮೀರಿ ಹೋಹನ ಬೆಂಬತ್ತಿ ಕೈವಿಡಿದೆನು
ಚೆನ್ನಮಲ್ಲಿಕಾರ್ಜುನನ ಕಂಡು ಕಣ್ದೆರೆದೆನು!
***
ಬೆಟ್ಟದ ಮೇಲೊಂದು ಮನೆಯ ಮಾಡಿ
ಮೃಗಗಳಿಗೆ ಅಂಜಿದೆಡೆ ಎಂತಯ್ಯಾ?
ಸಮುದ್ರದ ತಡಿಯಲೊಂದು ಮನೆಯ ಮಾಡಿ
ನೊರೆ ತೆರೆಗಳಿಗಂಜಿದಡೆ ಎಂತಯ್ಯಾ?
ಸಂತೆಯೊಳಗೊಂದು ಮನೆಯ ಮಾಡಿ
ಶಬ್ದಕ್ಕೆ ನಾಚಿದಡೆ ಎಂತಯ್ಯಾ?
ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ,
ಲೋಕದಲ್ಲಿ ಹುಟ್ಟಿದ ಬಳಿಕ
ಸ್ತುತಿ ನಿಂದೆಗಳು ಬಂದೆಡೆ
ಮನದಲ್ಲಿ ಕೋಪವ ತಾಳದೆ
ಸಮಾಧಾನಿಯಾಗಿರಬೇಕು.”
***
ಕೊನೆಯ ವಚನವನ್ನು ಓದುವಾಗ ನಮ್ಮ ಶಾಲಾದಿನಗಳ ನೆನಪಾಗುವುದು ಖಂಡಿತ. ಏಕೆಂದರೆ ಆ ಸಮಯದಲ್ಲಿ ಸಾಧಾರಣವಾಗಿ ಪ್ರಚಲಿತದಲ್ಲಿದ್ದ ವಚನ ಇದು. ಕಾದಂಬರಿಯನ್ನು ಓದಿ ಕುತೂಹಲ ತಣಿಸಿಕೊಳ್ಳಬಹುದು.