ಅಕ್ಷಯ ಪಾತ್ರ!

ಅಕ್ಷಯ ಪಾತ್ರ!

ಅಕ್ಷಯ ಪಾತ್ರ ಸಂಸ್ಥೆಯ ವಿಷಯ ಎಷ್ಟು ಜನಕ್ಕೆ ತಿಳಿದಿದೆ? ಜಾಸ್ತಿ ಜನಕ್ಕೆ ತಿಳಿದಿಲ್ಲ ಎಂಬುದು ಅಚ್ಚರಿ ಏನಿಲ್ಲ. ನನಗೂ ಇತ್ತೀಚೆಗಷ್ಟೇ (ಸುಮಾರು ಎರಡು ವರುಷಗಳಿಂದ) ಪರಿಚಯವಾಗಿದ್ದು. ಪುರಾಣದಲ್ಲಿ ಕೇಳಿದ್ದ ಈ ಹೆಸರನ್ನು ಈ ಕಾಲದಲ್ಲಿ ನಿಜ ಮಾಡೋಣ ಬನ್ನಿ. ಈ ಸುಕಾರ್ಯಕ್ಕೆ ನಿಮ್ಮನ್ನೆಲ್ಲ ಕರೆಯಲು ಹೆಮ್ಮೆಯಾಗುತ್ತೆ. ನನಗೆ ಅಕ್ಷಯ ಪಾತ್ರವನ್ನು ಪರಿಚಯ ಮಾಡಿಸಿದ ನನ್ನ ಸ್ನೇಹಿತರಿಗೆ "ಇಗೋ ನನ್ನ ನಮನ".

ಅಕ್ಷಯ ಪಾತ್ರ (ಏ.ಪಿ.)ಸಂಸ್ಥೆಯು ಪ್ರಪಂಚದಲ್ಲೇ ಅತಿ ದೊಡ್ಡ ಎನ್ಜೀಒ, (ನಾನ್ ಗವರ್ನಮೆಂಟಲ್ ಆರ್ಗನೈಸೇಶನ್) ಆಗಿದ್ದು, ಶಾಲೆಗಳ ಮಧ್ಯಾನ್ನದ ಊಟದ ವ್ಯವಸ್ಥೆಯನ್ನು ನಡೆಸುತ್ತಾ, ಸುಮಾರು ಒಂದು ಮಿಲಿಯನ್ ಮಕ್ಕಳಿಗೆ ಊಟವನ್ನು ಸರಬರಾಜು ಮಾಡುತ್ತಿದೆ. ಇದು ಸಧ್ಯಕ್ಕೆ ನಮ್ಮ ಭಾರತದ ಸರಕಾರಿ ಶಾಲೆಗಳಲ್ಲಿ ಈ ಕಾರ್ಯಕ್ರಮವನ್ನು ನಡೆಸುತ್ತಿದೆ. ಇದು ಒಂದು ಸರಕಾರಿ - ಖಾಸಗಿ ಸೇರಿ ಮಾಡುತ್ತಿರುವ ಒಳ್ಳೆಯ ಉದ್ಧೇಶವಾಗಿದೆ. ಮಕ್ಕಳಿಗೆ ಒಳ್ಳೆಯ ಆಹಾರವನ್ನು ಒದಗಿಸುವ ಮೂಲಕ, ಮಕ್ಕಳ ಹಸಿವನ್ನು ನಿವಾರಿಸುವುದು, ಮಕ್ಕಳಿಗೆ ಶಾಲೆಗೆ ಬರಲು ಪ್ರೋತ್ಸಾಹ, ಅಷ್ಟೇ ಅಲ್ಲದೆ ಶಾಲೆಯಲ್ಲಿದ್ದು ಕಲಿಯುವ ಉದ್ಧೇಶವನ್ನೂ ಪೂರೈಸುತ್ತಿದೆ. ಸರಕಾರದಿಂದ ಬರುವ ಹಣದಿಂದಾಗಿ ಅಕ್ಷಯ ಪಾತ್ರಕ್ಕೆ ಒಂದು ಮಗುವಿಗೆ ಒಂದು ವರುಷ ಪೂರ್ತಿ ಮಧ್ಯಾನ್ನದ ಊಟ ಒದಗಿಸಲು ಆಗುವ ಖರ್ಚು, ಸುಮಾರು ೧೫ ಡಾಲರ್ಗಳಷ್ಟು. ಅಂದರೆ ಭಾರತ ಸರಕಾರದಿಂದ ಶೇ% ೫೦ ರಷ್ಟು ಮತ್ತು ಅಕ್ಷಯ ಪಾತ್ರ ಮಿಕ್ಕಿದ ಶೇ ೫೦ ರಷ್ಟು ಹಣ ಕೂಡಿಸಿ ಯಶಸ್ವಿಯಾಗಿ ನಡೆಸುತ್ತಿರುವ ಸುಕಾರ್ಯವಾಗಿದೆ. ಬಹಳಷ್ಟು ಮಕ್ಕಳಿಗೆ ಇದೊಂದೇ ಊಟ ಇಡೀ ದಿನಕ್ಕಾಗಿದೆ. ಹಾಗಾಗಿ ಮಕ್ಕಳು ಶಾಲೆಗೆ ತಪ್ಪದೇ ಬಂದು, ಶಾಲೆಯಲ್ಲಿ ಇದ್ದು ತಮ್ಮ ಹಸಿವನ್ನು ಇಂಗಿಸಿಕೊಳ್ಳುವುದರ ಜೊತೆ ವಿದ್ಯೆಯನ್ನು ಕಲಿಯುತ್ತಿದ್ದಾರೆ. ಅಕ್ಷಯ ಪಾತ್ರ ಶುರುವಾಗುವ ಮುಂಚೆ, ಊಟದ ವ್ಯವಸ್ಥೆಗೆ ಮೊದಲು ಸರಕಾರಿ ಹಳ್ಳಿಯ ಶಾಲೆಗಳಲ್ಲಿ ಮಕ್ಕಳು ಗೈರು ಹಾಜರಿಯೇ ಜಾಸ್ತಿಯಾಗಿತ್ತು. ಈ ವ್ಯವಸ್ಥೆಯ ನಂತರ ಮಕ್ಕಳು ಆಸೆಯಿಂದ ಶಾಲೆಗೆ ಬರುವುದು, ಕಲಿಕೆಯಲ್ಲಿ ಆಸಕ್ತಿವಹಿಸುವುದು, ಹಾಜರಿ ಸಂಖ್ಯೆ ಶೇ% ೯೦ ರಷ್ಟು ಅಧಿಕವಾಗಿರುವುದು ಖಚಿತವಾಗಿದೆ.

ಆಹಾರವನ್ನು ತುಂಬಾ ಮುತುವರ್ಜಿಯಿಂದ ತಯಾರಿಸುವುದಲ್ಲದೇ, ಪುಷ್ಠಿಕರವಾದ ಮತ್ತು ಆರೋಗ್ಯಕ್ಕೆ ಉತ್ತಮವಾದ ಆಯಾ ಜಾಗಗಳ ಸಂಸ್ಕೃತಿಯ ಮೇರೆಗೆ ಆಹಾರ ಪದಾರ್ಥಗಳನ್ನು ಅಲ್ಲೇ ಸೆಂಟ್ರಲೈಸ್ಡ್ ಅಡಿಗೆ ಮನೆಯಲ್ಲಿ ತಯಾರಿಸುತ್ತಾರೆ. ಅಂದರೆ, ಉತ್ತರಭಾರತದಲ್ಲಿ ರೋಟಿ, ದಾಲ್( ಬೇಳೇ), ತರಕಾರಿ ಸಬ್ಜಿ, ದಕ್ಷಿಣ ಭಾರತದಲ್ಲಾದರೆ, ಅನ್ನ, ಹುಳಿ, ತರಕಾರಿ ಪಲ್ಯ ಹೀಗೆ ಪ್ರಾದೇಶಿಕ ಅಡಿಗೆಗಳನ್ನು ಮಾಡುತ್ತಾರೆ. ಹೊಸ ತಾಂತ್ರಿಕ ಯಂತ್ರಗಳನ್ನು ಉಪಯೋಗಿಸಿ, ಸಾವಿರಾರು ಮಕ್ಕಳಿಗೆ ಏಕಕಾಲಕ್ಕೆ ತರ ತರವಾದ ಅಡಿಗೆಗಳನ್ನು ಮಾಡಲನುಕೂಲವಾಗುವಂತೆ ಯೋಜನೆ ಹಾಕಿ ದೊಡ್ಡ ದೊಡ್ಡ ಮಶಿನ್ಗಳನ್ನು ಇನ್ನೋವೇಟ್ ಮಾಡಿ ಅಳವಡಿಸಿಕೊಂಡಿದ್ದಾರೆ. ಇದರಿಂದ ಸ್ಥಳೀಯ ಜನರಿಗೆ ಕೆಲಸ, ಮಕ್ಕಳಿಗೆ ಆಹಾರ, ಹೊಸ ಸಂಶೋಧನೆಗಳು ಮುಂತಾದ ಗುರಿಗಳು ಒಟ್ಟಿಗೇ ಮುಟ್ಟಲು ಸಾಧ್ಯವಾಗುತ್ತಿದೆ. ಈಗಾಗಲೇ ಅಕ್ಷಯ ಪಾತ್ರ ೧.೩ ಮಿಲಿಯನ್ ಮಕ್ಕಳಿಗೆ ಮಧ್ಯಾನ್ನದ ಊಟವನ್ನು ೧೧ ಭಾರತದ ರಾಜ್ಯಗಳಲ್ಲಿ ನೀಡಲಾಗಿದ್ದು, ದಿನ ದಿನಕ್ಕೆ ಮಕ್ಕಳ ಸಂಖ್ಯೆ ಏರುತ್ತಿದೆ. ಇದರ ಗುರಿ ೫ ಮಿಲಿಯನ್ ಮಕ್ಕಳಿಗೆ ಊಟವನ್ನು ೨೦೨೦ ವರುಷದ ಹೊತ್ತಿಗೆ ಒದಗಿಸುವುದು. ಅಕ್ಷಯ ಪಾತ್ರ ಸ್ಥಾಪನೆಯಾಗಿದ್ದು ವರುಷ ೨೦೦೦ ದಲ್ಲಿ, ಆಗ ೧೫೦೦ ಮಕ್ಕಳಿಗೆ ಬೆಂಗಳೂರಿನಲ್ಲಿ ಉಣಬಡಿಸುತ್ತಿದ್ದು, ಈಗ ೧೧ ರಾಜ್ಯಗಳಲ್ಲಿ ಒಟ್ಟು ೧.೩ ಮಿಲಿಯನ್ ಮಕ್ಕಳವರೆಗೆ ಅಕ್ಷಯವಾಗಿ ಯಶಸ್ವಿಯಾಗಿ ಮುಂದುವರೆಯುತ್ತಿರುವುದು ಸಂತೋಷದ ಮತ್ತು ಹೆಮ್ಮೆಯ ವಿಷಯವಾಗಿದೆ.

ಪ್ರಪಂಚದ ಉತ್ತಮವಾದ (ಮೊದಲನೆಯ) ಮಾರುಕಟ್ಟೆ ಸಂಶೋಧನೆ ಸಂಸ್ಥೆಯಾದ, ಏ.ಸಿ.ನೀಲ್ಸನ್ ಅವರ ಸಂಶೋಧನೆ ಮೇರೆಗೆ..."ಅಕ್ಷಯ ಪಾತ್ರ ಸಂಸ್ಥೆ ಈ ಮೂರು ಅಂಶಗಳಲ್ಲಿ ಯಶಸ್ವಿಯಾಗಿ ನೆರವೇರಿಸಿದೆ...೧. ಶಾಲೆಗಳಲ್ಲಿ ಮಕ್ಕಳ ಹಾಜರಿ ಸಂಖೆ ಒಪ್ಪುವ ಮಟ್ಟದಲ್ಲಿ ಜಾಸ್ತಿಯಾಗಿರುವುದು, ೨. ಶಾಲೆಗಲ್ಲಿ ಮಕ್ಕಳು ನಿಲ್ಲುವುದು ಅಂದರೆ ಶಾಲೆಯನ್ನು ಬಿಡದೆ ಮುಂದುವರಿಸುವ ಸಂಖೆ ಕೂಡಾ ಬಹಳ ಮಟ್ಟದಲ್ಲಿ ಏರಿರುವುದು, ೩. ಮಕ್ಕಳ ಆರೋಗ್ಯ ಬಹುಮಟ್ಟಿಗೆ ಸುದಾರಿಸಿರುವುದು (ಹಸಿವೆಯನ್ನು ಪೂರೈಸಿ), ಮಕ್ಕಳು ಶಾಲೆಯಲ್ಲಿದ್ದು ಕಲಿಯುವುದು ಯಶಸ್ವಿಯಾಗಿ....ಈ ಮೂರೂ ಅಂಶಗಳು ಯಶಸ್ವಿಯಾಗಿ ಉಂಟಾಗಿರುವುದು ಅಕ್ಷಯ ಪಾತ್ರದ ಆಹಾರ ಯೋಜನೆಯಿಂದ ಎಂದು ಖಚಿತಪಡಿಸಿದೆ. ಅಕ್ಷಯ ಪಾತ್ರದ ಕೆಲಸ ಕೆಳಗಿನ ರಾಜ್ಯಗಳಲ್ಲಿ ಈ ಪ್ರಮಾಣದಲ್ಲಿ ನಡೆಯುತ್ತಿದೆ.......

ಆಂಧ್ರ ಪ್ರದೇಶ....೪೨,೭೪೨

ಅಸ್ಸಾಮ್...............೪೭,೫೭೧

ಚಟ್ಟೀಸ್ಗರ್...........೨೯,೭೭೧

ಗುಜರಾತ್.............೨೬೦,೬೦೦

ದೆಲ್ಹಿ.............೨೫,೦೦೦

ಕರ್ನಾಟಕ....ಬೆಂಗಳೂರು.....೨೧೯,೬೫೧ * ಹುಬ್ಳಿ- ದಾರ್ವಾಡ......೧೪೭,೩೪೪ * ಬಳ್ಳಾರಿ.....೧೩೩,೩೮೪ *  ಮೈಸೂರು.....೧೬, ೫೧೦ * ಮಂಗಳೂರು.....೨೫,೨೯೨

ಒರಿಸ್ಸ.........೯೦,೦೦೦

ರಾಜಸ್ಥಾನ್......೧೫೭,೧೦೦

ಉತ್ತರ ಪ್ರದೇಶ್.....೧೬೫,೫೬೨

ತಮಿಲ್ ನಾಡು........೭೫೦

ಒಟ್ಟು............೧,೩೫೨,೪೯೯ (ಅಂದಾಜು)

ಅಕ್ಷಯ ಪಾತ್ರದ ಬಗ್ಗೆ ಎಷ್ಟು ಹೇಳಿದರೂ ಅದು ಕಡಿಮೆ ಅನ್ನಿಸುತ್ತೆ. ಹೆಚ್ಚಿನ ಮಾಹಿತಿಗೆ...ಫುಡ್ಫರೆಜುಕೇಶನ್.ಆರ್ಗ್ ಗೆ ಕ್ಲಿಕ್ಕಿಸಿ.

ಅಕ್ಷಯ ಪಾತ್ರ ವೆಂಬ ಸಂಸ್ಥೆಯ ವಿಷಯವನ್ನು ನಿಮ್ಮ ಸ್ನೇಹಿತರೊಡನೆ ಹಂಚಿಕೊಳ್ಳುತೀರೆಂದೂ, ಹಾಗೂ ಈ ಒಳ್ಳೆಯ ಕಾರ್ಯಕ್ಕೆ ಕೈಜೋಡಿಸುತ್ತೀರೆಂದೂ ನನಗೆ ನಂಬಿಕೆ ಇದೆ. ಈ ವಿಷಯವನ್ನು ನಾನೇ ಬರೆಯಬೇಕೆಂದಿದ್ದರೆ ಇದು ಯಾವತ್ತಿಗೇ ಆಗುತ್ತಿತ್ತೋ ಏನೋ? ಅಥವಾ ಆಗುತ್ತಿತ್ತೋ ಇಲ್ಲವೋ. ಆದರೆ, ಇದನ್ನು ಆ ಒಂದು ಪ್ರೇರಣೆ, ಇಚ್ಚಾ ಶಕ್ತಿ, ದೈವೇಚ್ಚೆ, ಮತ್ತು ಅನುಗ್ರಹ ಅನ್ನುವುದು ನನ್ನಿಂದ ಬರೆಸುತ್ತಿದೆಯಷ್ಟೇ. ನೀವೆಲ್ಲಾ ಈ ಒಂದು ಒಳ್ಳೆಯ ಕಾರ್ಯದಲ್ಲಿ ಭಾಗವಹಿಸುತ್ತೀರೆಂದು ನನಗೆ ಭರವಸೆ ಇದೆ. ಹೆಚ್ಚಿನ ಮಾಹಿತಿಗೆ ಅಕ್ಷಯಪಾತ್ರಯುಎಸ್ ಏ ಅನ್ನೂ ನೋಡಬಹುದು

ಚಿತ್ರ ಕೃಪೆ:

.http://www.chaptersfrommylife.com/2010/12/akshaya-patra-celebrates-one-million.html

Comments

Submitted by rasikathe Tue, 01/29/2013 - 10:47

ಈ ಲೆಖನಕ್ಕೆ ಚಿತ್ರ‌ ಈಗ‌ ಸೆರಿಸಬಹುದಾ? ಹೇಗೆ ಗೊತ್ತಾ? ಚಿತ್ರ‌ ಸೇರಿಸಲು ಮರೆತು ಹೋಯಿತು. ಮುಮ್ಗಡವಾಗಿ ಧನ್ಯವಾದಗಳು. ಮೀನಾ
Submitted by ಕೀರ್ತಿರಾಜ್ ಮಧ್ವ Sun, 04/14/2013 - 14:30

ಮೀನಾರವರೇ ಅಕ್ಷಯ ಪಾತ್ರ ಕುರಿತಾಗಿ ನೀವು ನೀಡಿದ ಮಾಹಿತಿಗೆ ಧನ್ಯವಾದಗಳು. ನಾನು ಕೂಡ ಅಕ್ಷಯ ಪಾತ್ರ ಬಿಸಿಯೂಟ ಯೋಜನೆಯ ಫಲಾನುಭವಿಯಾಗಿದ್ದು ಇದೊಂದು ಸರಕಾರಿ ಯೋಜನೆ ಎಂದುಕೊಂಡಿದ್ದೆ. ಅಚ್ಚರಿಯ ವಿಷಯವೇನೆಂದರೆ ನಮ್ಮ ಶಿಕ್ಷಕರು ಕೂಡ ಅಕ್ಷಯ ಪಾತ್ರ ಸರಕಾರಿ ಯೋಜಿತ ಕಾರ್ಯಕ್ರಮ ಎಂದು ತಿಳಿದಿದ್ದಾರೆ. ತಮ್ಮ ಮಾಹಿತಿಗೆ ಮತ್ತೊಮ್ಮೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ.
Submitted by rasikathe Sat, 05/18/2013 - 00:45

In reply to by ಕೀರ್ತಿರಾಜ್ ಮಧ್ವ

ಧನ್ಯವಾದಗಳು ಕೀರ್ತಿ ರಾಜ್ ಅವರೆ, ಅಕ್ಷಯ ಪಾತ್ರ ವನ್ನು ದಯವಿಟ್ಟು ಪ್ರೋತ್ಸಾಹಿಸಿ. ಮೀನಾ