ಅತೀ ಹೆಚ್ಚು ಬ್ಯಾಟರಿ ಬ್ಯಾಕ್ ಅಪ್ ಇರುವ ಸಾಮಾನ್ಯ ಬೆಲೆಯ ಆಂಡ್ರಾಯ್ಡ್ ಫೋನ್

ಅತೀ ಹೆಚ್ಚು ಬ್ಯಾಟರಿ ಬ್ಯಾಕ್ ಅಪ್ ಇರುವ ಸಾಮಾನ್ಯ ಬೆಲೆಯ ಆಂಡ್ರಾಯ್ಡ್ ಫೋನ್

ಹೊಸ ಆಡ್ರಾಯ್ಡ್ ಮೊಬೈಲ್ ತೆಗೆದುಕೊಳ್ಳಬೇಕಿತ್ತು. ಐದತ್ತು ರೂಪಾಯಿಯ ಪೆನ್ನನ್ನು ತೆಗೆದುಕೊಳ್ಳಲು ನೂರೆಂಟು ಸಲ ಪರೀಕ್ಷಿಸುವ ನಾವು ಹತ್ತಾರು ಸಾವಿರ ರೂಪಾಯಿಗಳನ್ನು ಕೊಟ್ಟು ಕೊಳ್ಳುವ ಮೊಬೈಲ್ ಬಗ್ಗೆ ಪರೀಕ್ಷಿಸದಿದ್ದರೆ ಹೇಗೇ?

ಇದೇ ರೀತಿ ಉತ್ತಮ ಆಡ್ರಾಯ್ಡ್ ಮೊಬೈಲ್ ಗಾಗಿ ಸುಮಾರು ತಿಂಗಳುಗಳಿಂದ ಹುಡುಕುತ್ತಲೇ ಇದ್ದೆ. ಒಂದರಲ್ಲಿ ಕೆಮೆರಾಗೆ ಹೆಚ್ಚು ಒತ್ತು ಕೊಟ್ಟಿದ್ದರೆ, ಇನ್ನೊಂದರಲ್ಲಿ ಆಪರೇಟಿಂಗ್ ಸಿಸ್ಟಮ್, ವೇಗಕ್ಕೆ ಹೆಚ್ಚು ಒತ್ತು ಕೊಟ್ಟಿರುತ್ತಿದ್ದರೆ. ಉತ್ತಮ ಮೊಬೈಲ್ ತೆಗೆದುಕೊಂಡರೂ ಸಹ ಒಂದಿಲ್ಲೊಂದು ಕೊರತೆ ಇದ್ದೇ ಇರುತ್ತಿತ್ತು. ಎಲ್ಲ ಫೀಚರ್ ಗಳು ಉತ್ತಮವಾಗಿದ್ದರೆ ಅದರ ಬೆಲೆ ಅತೀ ಹೆಚ್ಚಿನದ್ದಿರುತ್ತಿತ್ತು.

ಹೋಗಲಿ, ಉತ್ತಮ ಫೀಚರ್ ಗಳಿರುವ ಹೆಚ್ಚಿನ ಬೆಲೆಯ (ಸುಮಾರು 10 ರಿಂದ 25 ಸಾವಿರದ ಒಳಗಿನ) ಫೋನನ್ನು ತೆಗೆದುಕೊಂಡರೂ ಸಹ ಎಲ್ಲಾ ಮೊಬೈಲ್ ಗಳಲ್ಲಿ ಇರುವ ಸಾಮಾನ್ಯವಾದ ಬ್ಯಾಟರ್ ಬ್ಯಾಕ್ ಅಪ್ ಸಮಸ್ಯೆ ಇದ್ದೇ ಇರುತ್ತಿತ್ತು. ಕಡಿಮೆ ಬೆಲೆಯ ಆಂಡ್ರಾಯ್ಡ್ ಫೋನ್ ಗಳಲ್ಲಿ ಬ್ಯಾಟರಿ ಸಾಮರ್ಥ್ಯ 1300 ಎಂ.ಎ.ಎಚ್ ನಿಂದ 1500 ಎಂ.ಎ.ಎಚ್. ವರೆಗೆ ಇರುತ್ತಿತ್ತು. ಹೆಚ್ಚಿನ ಬೆಲೆಯ ಫೋನ್ ಗಳಲ್ಲಿ 2100 ಎಂ.ಎ.ಎಚ್ ವರೆಗೆ ಬ್ಯಾಟರಿ ಬ್ಯಾಕ್ ಅಪ್ ಇರುತ್ತಿತ್ತು. (ಎಂ.ಎ.ಎಚ್= ಮಿಲಿ ಎಂಪ್ ಅವರ್ಸ್.. ಇದು ಹೆಚ್ಚಿಗೆ ಇದ್ದಷ್ಟು ಬ್ಯಾಟರಿ ಹೆಚ್ಚು ಹೊತ್ತು ಇರುತ್ತದೆ)

ಹೆಚ್ಚಿನ ಬ್ಯಾಟರಿ ಬ್ಯಾಕ್ ಅಪ್ ಇರುವ ಆಂಡ್ರಾಯ್ಡ್ ಫೋನ್ ಗಳಿಗೆ ಹುಡುಕಿ ಹುಡುಕಿ ಸಾಕಾಗಿತ್ತು. ಅಷ್ಟರಲ್ಲೇ ನನ್ನ ಕಣ್ಣಿಗೆ ಬಿದ್ದಿದ್ದು, ಜಿಯೋನಿ ಕಂಪನಿಯ "ಜಿಯೋನಿ ಎಂ2" ಮಾಡೆಲ್ ನ ಮೊಬೈಲ್. ಸುಮಾರು 11000 ಸಾವಿರ ರೂಪಾಯಿಗಳಿಗೆ ಸಿಕ್ಕುವ ಈ ಮೊಬೈಲ್ ಸಧ್ಯಕ್ಕೆ ಅತೀ ಹೆಚ್ಚು ಬ್ಯಾಟರಿ ಬ್ಯಾಕಪ್ 4200 ಎಂ.ಎ.ಎಚ್. ಹೊಂದಿದೆ. ಇನ್ನುಳೀದಂತೆ, 

ಜಿಯೋನೀ ಎಂ2 ವಿಶೇಷತೆ: ಡ್ಯುಯಲ್‌ ಸಿಮ್‌ 5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(480 x 854 ಪಿಕ್ಸೆಲ್‌) ಆಂಡ್ರಾಯ್ಡ್ 4.2 ಜೆಲ್ಲಿ ಬೀನ್‌ ಓಎಸ್‌ 1.3 GHz ಕಾರ್ಟೆ‌ಕ್ಸ್‌ ಎ7 ಪ್ರೊಸೆಸರ್‌ 4ಜಿಬಿ ಆಂತರಿಕ ಮೆಮೊರಿ 1ಜಿಬಿ ರ್‍ಯಾಮ್‌ 32ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌ 3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌, 8 ಮೆಗಾಪಿಕ್ಸೆಲ್ ಕ್ಯಾಮೆರಾ, ಎಲ್.ಇ.ಡಿ. ಫ್ಯಾಶ್, ಪ್ರಿಲೋಡೆಡ್ ಕಿಂಗ್ ಸಾಫ್ಟ್ ಆಫೀಸ್, ವಾಟ್ಸ್ ಅಪ್, ವಿ ಚಾಟ್, ಬ್ಯಾಟರಿ ಸೇವರ್ ತಂತ್ರಾಂಶಗಳಂತಹ ವಿಶೇಷತೆಗಳು ಇವೆ.

ಸುಮಾರು ಹದಿನೈದು ದಿನಗಳಿಂದ ಈ ಮೊಬೈಲನ್ನು ಉಪಯೋಗಿಸುತ್ತಿದ್ದೇನೆ. ಸದಾಕಾಲ ಇಂಟರ್ ನೆಟ್ ಆನ್ ಮಾಡಿ ಇಟ್ಟರೂ, ಗೇಮ್ ಆಡಿದರೂ ಕಡಿಮೆ ಎಂದರೆ ಮೂರು ದಿನಗಳವರೆಗೆ ಬ್ಯಾಟರಿ ಬರುತ್ತದೆ. ಇಂಟರ್ ನೆಟ್ ಬಳಸದೇ, ಸಾಮಾನ್ಯವಾಗಿ ಫೋನ್ ನನ್ನು ಉಪಯೋಗಿಸಿದರೆ, ವಾರದವರೆಗೆ ಬ್ಯಾಟರಿ ಲಭ್ಯ. ನನ್ನ ಪರಿಚಯದವರೆಲ್ಲರೂ ಇದೇ ಫೋನ್ ಖರೀದಿಸಲು ಶಿಫಾರಸ್ಸು ಮಾಡಿದ್ದೇನೆ. ಈಗಾಗಲೇ 5 ಜನ ಖರೀದಿಸಿಯಾಗಿದೆ. ನೀವೇನಾದರೂ ಹೊಸ ಮೊಬೈಲ್ ಖರೀದಿಸಬೇಕೆಂದಿದ್ದರೆ, ನನ್ನ ವೋಟು ಜಿಯೋನಿ ಎಂ2 ಗೆ..

ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವಿಳಾಸವನ್ನು ಸಂಪರ್ಕಿಸಿ

1) http://kannada.gizbot.com/mobile/gionee-gpad-g4-m2-with-3g-support-andro...

2) http://www.gsmarena.com/gionee_m2-6086.php 

ಇಂತಿ ನಿಮ್ಮ ಪ್ರೀತಿಯ

ಶಿವಶಂಕರ ವಿಷ್ಣು ಯಳವತ್ತಿ.
 

Comments

Submitted by ಗಣೇಶ Wed, 04/09/2014 - 23:42

>>ಒಂದರಲ್ಲಿ ಕೆಮೆರಾಗೆ ಹೆಚ್ಚು ಒತ್ತು ಕೊಟ್ಟಿದ್ದರೆ, ಇನ್ನೊಂದರಲ್ಲಿ ಆಪರೇಟಿಂಗ್ ಸಿಸ್ಟಮ್, ವೇಗಕ್ಕೆ ಹೆಚ್ಚು ಒತ್ತು ಕೊಟ್ಟಿರುತ್ತಿದ್ದರೆ. ಉತ್ತಮ ಮೊಬೈಲ್ ತೆಗೆದುಕೊಂಡರೂ ಸಹ ಒಂದಿಲ್ಲೊಂದು ಕೊರತೆ ಇದ್ದೇ ಇರುತ್ತಿತ್ತು. ಎಲ್ಲ ಫೀಚರ್ ಗಳು ಉತ್ತಮವಾಗಿದ್ದರೆ ಅದರ ಬೆಲೆ ಅತೀ ಹೆಚ್ಚಿನದ್ದಿರುತ್ತಿತ್ತು.
- ಇದೇ ಪ್ರಾಬ್ಲಂ. ಎರಡು ತಿಂಗಳ ಮೊದಲು ಹೀಗೆ ಹುಡುಕಾಡಿ.. ಕೊನೆಗೆ Karbonn S5 Titanium ಪರ್ಚೇಸ್ ಮಾಡಿದೆ.೧೦೦೦೦ದ ಒಳಗೆ ಬೆಲೆ. (2000 ಎಂ.ಎ.ಎಚ್ ಬ್ಯಾಟರಿ).
ಜಿಯೋನೀ ಎಂ2 ಬಗ್ಗೆ ಗೊತ್ತಿರಲಿಲ್ಲ.

@ ಗಣೇಶ..
ಒಹ್.. ಇನ್ನೂ ಸ್ವಲ್ಪ ಕಾದಿದ್ದರೆ ಇನ್ನೂ ಚನ್ನಾಗಿರೋದು ಸಿಗುತ್ತಿತ್ತೇನೋ ಅನ್ನೋ ಮನಸ್ಥಿತಿ ಎಲೆಕ್ಟ್ರಾನಿಕ್ ವಸ್ತುಗಳಿಗೆ ಮತ್ತು ಹೆಂಡತಿ ಇಬ್ಬರಿಗೂ ಅನ್ವಯಿಸುತ್ತದೆ.. ಹ್ಹ ಹ್ಹ ಹ್ಹ..

ಯಳವತ್ತಿ ಅವರೇ ಬಹು ದಿನಗಳ ನಂತರ ಸಂಪದದಲಿ ಸಕ್ರಿಯರಾಗಿದ್ದೀರಿ .ಹಾಗೆಯೇ ಒಂದು ಒಳ್ಳೆ ವಿಷ್ಯದ ಬಗ್ಗೆ ಚಿಕ್ಕ ಚೊಕ್ಕ್ದಾಗಿ ಒಳ್ಳೆ ಬರಹ ಬರೆದಿರುವಿರಿ . ಗಣೇಶ್ ಅಣ್ಣಾ ಅವರು ಇದಕ್ಕೆ ಪ್ರತಿಕ್ರಿಯಿಸಿದ ರೀತಿ :()))) ಅದು ನಿಜ ಅನಿಸುತ್ತೆ ..!!

ಟೆಕ್ನಾಲಜಿ -ದಿನ ನಿತ್ಯ ಬದಲಾಗುತ್ತಾ ದಿನ ನಿತ್ಯ ಹತ್ತು ಹಲವು ಹೊಸತು ಫೋನುಗಳು ಮಾರ್ಕೆಟ್‌ಗೆ ನುಗ್ಗುತ್ತಿವೆ - ನೆಟ್ ತೆಗೆದು ಜಾಲಾಡಿದರೆ ಏನೇನೋ ಮಾಹಿತಿ ಹತ್ತು ಒರತೆ ಕೆಲವು ಕೊರತೆ ...!!

http://www.gogi.in/gionee-m2-review.html
ಫೋನು ಕೊಳ್ಳಲು ಹೋಗ್ವಾಗ ಎಸ್ಟೆಲ್ಲಾ ಸ್ಟಡಿ ಮಾಡ್ಬೇಕು ಗೊತ್ತಾ? 2 ವರುಷಗಳ ಹಿಂದೆ ಕಂಪ್ಯೂಟರ್ ಖರೀದಿಸುವಾಗ ಅದಕ್ಕೆ ಮುಂಚೆ 6 ತಿಂಗಳು ನೆಟ್‌ನಲ್ಲಿ ಆ ಬಗ್ಗೆ ರಿ ಸರ್ಚ್ ಮಾಡಿದ್ದೆ -ಕೊನೆಗೆ ಕೋರ್ ಐ 7 ಕೆ ಪ್ರೋಸೆಸ್ಸರ್ ಅದಕ್ಕೆ ಸೂಟ್ ಆಗುವ ಮೆಮೊರಿ ಕಾರ್ಡ್ ಬೋರ್ಡು ಕೊನೆಗೆ ಎಲ್ಲ ಸೇರಿ ಆದದ್ದು 50 ಸಾವಿರ ...!!

ಹಾಗೆಯೇ ಸ್ಯಾಮ್‌ಸಂಗ್ ಕಾರ್ಬಿ ಪ್ರೊ ಪ್ಲಸ್ ತೆಗೆದುಕೊಳ್ಳುವಾಗಲೂ ಅದ್ರಲ್ಲಿ ಎಲ್ಲವೂ ಇರ್ಬೇಕು ಎಂದು ಬೇಜಾನ್ ರಿ ಸರ್ಚ್ ಮಾಡಿ ಎಲ್ಲೆಲ್ಲೋ ಹುಡುಕಿ ಕೊನೆಗೆ ಅದನ್ನು ಕೊಂಡದ್ದು 10 ಸಾವಿರಕ್ಕೆ...

ಕೆಲವೇ ದಿನಗಳಲ್ಲಿ ದಿನ ನಿತ್ಯ ಹತ್ತು ಸಾವಿರ ಹೊಸ ಫೋನುಗಳು ಬಂದು ಮತ್ತೆ ಮನಕ್ಕೆ ಅನಸಿದ್ದು ಎಲ್ಲವೂ ಬೇಕು ಅಂತ ..ಈಗಲೂ ದಿನ ನಿತ್ಯ ನೆಟ್‌ನಲ್ಲಿ ಪತ್ರಿಕೆ ಟಿವಿಯಲ್ಲಿ ಹೊಸ ಫೋನು ಟ್ಯಾಬ್ ಗಾಡಿ ಇತ್ಯಾದಿ ಬಗ್ಗೆ ನೋಡುವಾಗ ಓದುವಾಗ ಅದನ್ನು ಪಡೆವ ಆಶೆ -ದುರಾಶೆ ಅನ್ನಬಹುದು ..
ಈ ಪೋನು ವಿಷ್ಯದಲ್ಲಿ ಯಾವತ್ತೂ ಇದೇ ಕೊನೆ ಪರ್ಫೆಕ್ಟ್ ಫೋನ್ ಎನ್ನುವ ಹಾಗಿಲ್ಲ -ಕಾರಣ ದಿನ ನಿತ್ಯ ಮತ್ತೊಂದು ಹೊಸದು ಬರುತ್ತಿರುತ್ತೆ ... ನಿಮ್ಮ ಬರಹಕ್ಕಿಂತ ನನ್ನ ಪ್ರತಿಕ್ರಿಯೆ ಜಾಸ್ತಿ ಆಯ್ತು ...!!

ಹಾಗೆಯೇ ನಾನು ತೆಗೆದುಕೊಳ್ಳಬೇಕು ಎಂದುಕೊಂಡಿದ್ದು ಸೋನಿ ಎರಿಕ್‌ಸನ್ ಎಕ್ಷ್ಪೀರಿಯ ಟಿ 2 , http://www.sonymobile.com/in/products/phones/xperia-t2-ultra-dual/

http://www.gsmarena.com/sony_xperia_t2_ultra-5965.php

http://www.gsmarena.com/sony_xperia_t2_ultra_dual-5968.php

ಆದರೆ ಈಗ ನಿಮ್ಮ ಬರಹ ಓದಿದ ಮೇಲೆ ಇದರ ಮೇಲೆ ಆಶೆ ಆಯ್ತು ..ಇದು ನೋಡುವಾಗ ಮತ್ಯಾವ್ದೋ GIONEE ಮಾಡೆಲ್ ಕಾಣಿಸಿ ಅದರ ಮೇಲೆಯೂ ಆಶೆ ಉಕ್ಕುತ್ತಿದೆ ..

ಅಯ್ಯೂ .....!!!!

ನಿಮ್ಮ ಟ್ವೀಟ್ -ಬ್ಲಾಗ್ ಓದುತ್ತಿರುತ್ತೇನೆ .ಸೂಪರ್
ಶುಭವಾಗಲಿ

\|/

@ ವೆಂಕಟೇಶ ಸರ್..

ಹೌದು ನೀವು ಹೇಳಿದ ಹಾಗೆ ನಾನು ಸಂಪದದಲ್ಲಿ ಇತ್ತೀಚೆಗೆ ಮತ್ತೆ ಸಕ್ರಿಯವಾದದ್ದು ನಿಜ. ಸಂಪದದಲ್ಲಷ್ಟೇ ಅಲ್ಲ, ಬ್ಲಾಗ್ ನಲ್ಲಿ ಕೂಡಾ ಸಕ್ರಿಯವಾಗಿರಲಿಲ್ಲ. ಯಾವಾಗಲಾದರೊಮ್ಮೆ ಒಂದು ಪೋಸ್ಟ್ ಹಾಕಿದ್ದು ಬಿಟ್ಟರೆ ಏನೂ ಬರೆಯೋಕೆ ಮೂಡು+ಸಮಯ ಎರಡೂ ಕೂಡಿ ಬಂದಿರಲಿಲ್ಲ.
ನಾನು ಹೊಸದೊಂದು ಮೊಬೈಲ್ ಖರೀದಿಸಬೇಕಿತ್ತು. ಅದಕ್ಕೆ ನಿಮ್ಮ ಹಾಗೇನೇ ಎಲ್ಲ ತರಹದ ಮೊಬೈಲ್ ಗಳನ್ನು ಸ್ಟಡಿ ಮಾಡಿ ಮಾಡಿ ಕೊನೆಗೆ ಜಿಯೋನಿ ಮೊಬೈಲ್ ಗೆ ಮೊರೆ ಹೋಗಬೇಕಾಯಿತು. ಇನ್ನು ಸ್ವಲ್ಪ ದಿನ ಹೋಗಿದ್ದರೆ, ಮೊಬೈಲ್ ಗಳ ಬಗ್ಗೆ ಪಿ.ಎಚ್.ಡಿ. ಪ್ರಬಂಧವನ್ನು ಮಂಡಿಸಬಹುದಿತ್ತೇನೋ..

ಸಧ್ಯದಲ್ಲಿ ನೀವು ಹೇಳಿದ ಹಾಗೆ ದಿನನಿತ್ಯ ಹೊಸ ಫೋನುಗಳು ಹೊಸ ಫೀಚರ್ ನೊಂದಿಗೆ ಬರುತ್ತಿವೆ. ಆದರೆ, ಸಧ್ಯದ ಮಟ್ಟಿಗೆ ಕಡಿಮೆ ಬೆಲೆಯಲ್ಲಿ ಜಿಯೋನಿ ಎಂ2 ಮೊಬೈಲ್ ಎಲ್ಲದರಲ್ಲಿಯೂ ಉತ್ತಮವಾಗಿದೆ. ಹಣಕ್ಕೆ ತಕ್ಕ ಮೊಬೈಲ್ ಇದು ಎನ್ನಬಹುದು. Sony Xperia T2 Ultra ಕೂಡಾ ಅದ್ಭುತವಾಗಿದೆ. ಆದರೆ, ಇದರ ಬೆಲೆ ಎರಡು ಪಟ್ಟು ಮತ್ತು ಬ್ಯಾಟರಿ ಜಿಯೋನಿ ಎಂ2 ನೇದ್ದದ್ದು 4200 ಎಂ.ಎ.ಎಚ್. ಆದರೆ, ಸೋನಿಯದ್ದು 3000 ಎಂ.ಎ.ಎಚ್. ನಾನು ಒಂದು ತಿಂಗಳಿಂದ ಈ ಮೊಬೈಲ್ ಉಪಯೋಗಿಸುತ್ತಿದ್ದೇನೆ. ಉತ್ತಮವಾದ ಅನುಭವವನ್ನು ಪಡೆಯುತ್ತಿದ್ದೇನೆ.

ಸಾಮಾನ್ಯವಾಗಿ ಎಲ್ಲ ಸ್ಮಾರ್ಟ್ ಫೋನ್ ಗಳ ಕೊರತೆಯೆಂದರೆ ಬ್ಯಾಟರಿಯದ್ದು, ಈ ಮೊಬೈಲ್ ಹೊರತುಪಡಿಸಿದರೆ ಇನ್ಯಾವ ಮೊಬೈಲ್ ನಲ್ಲೂ ಇಷ್ಟೊಂದು ಬ್ಯಾಟರಿ ಬ್ಯಾಕಪ್ ಲಭ್ಯವಿಲ್ಲ.

ಏನೇ ಆದರೂ ನನ್ನ ಓಟು ಜಿಯೋನಿ ಎಂ2 ಗೇನೇ...

ಧನ್ಯವಾದಗಳು, ಇದರ‌ ಬಗ್ಗೆ ವಿಚಾರಣೆ ನೆಡೆಸುವಾ....