ಅದ್ಭುತ ಕಲಾಂ

ಅದ್ಭುತ ಕಲಾಂ

ಕವನ

 

ಕಲಾಂ ಅಸ್ತಂಗತರೆಂದು

ಭಾರನಾಗಿ ಬರೆಯಲು

ಪೆನ್ನು ತೆಗೆದರೆ

ಅಕ್ಷರಗಳು ಮೂಡಲಿಲ್ಲ

ಎಷ್ಟು ಝಾಡಿಸಿದರೂ

ಶಾಯಿ ಕಾಗದಕ್ಕಿಳಿಯಲಿಲ್ಲ

ಗದ್ಗದಿತ ಪೆನ್ನು

ಗತ ನೆನಪು..........

 

 

ಪುಟ್ಟ ಹುಡುಗನಿಗೆ

ಬೈತಲೆ ಬಾಚಿ

ಕೋಟು ಪ್ಯಾಂಟು

ಟೈ ಕಟ್ಟಿ

ಪುಟಪುಟನೆ ನಡೆಸಿದ

ಸೊಬಗು

ಕಲಾಂ ಸಭೆಗಳಲ್ಲಿ

 

 

ಮಕ್ಕಳ ಗುಂಪಿನ

ಕಲರವದಲ್ಲಿ ಕಲಾಂರನ್ನು

ಹೆಕ್ಕಿ ತೆಗೆಯುವುದು

ಹೇಗೆಂದರೆ:

ತುಂಬಾ ಚೂಟಿ

ಚಟುವಟಿಕೆಯ ಹುಡುಗನೇ

ಕಲಾಂ

ಚಿತ್ರ್

Comments

Submitted by Shashikant P Desai Wed, 07/29/2015 - 16:58

ಶ್ರೀ ಅನಂತ ಅವರೇ ಪ್ರಣಾಮಗಳು.ಹನಿಗವನಗಳಲ್ಲಿ ಶ್ರೀ ಕಲಾಂ ಅವರ ವ್ಯಕ್ತಿತ್ವ‌ ಕುರಿತು ಚೆನ್ನಾಗಿ ನಿರೂಪಿಸಿರುವಿರಿ.