ಅನಾಥ...

ಅನಾಥ...

ಕವನ

ಬಡ ಜೀವಾ ನಾ

ಬಡವಾದೆ ನಾ

ಬದುಕಿದರು ನಾ

ಸತ್ತಂತೆ ಇರುವೆ ನಾ

 

ಬಂಧುಗಳು ದೂರಿದರು

ಬಂಧನ ಹಾಕಿದರು

ಬಂದಂತೆ ಮಾತಾಡಿದರು

ನನ್ನ ದೂರ ಮಾಡಿ ಬಿಟ್ಟರು 

 

ತಂದೆ ಇಲ್ಲ ನನಗೆ

ತಂಗಿ ಇಲ್ಲ ನನಗೆ

ತಮ್ಮನು ಇಲ್ಲ ನನಗೆ

ದೇವರು ಮರುಗ ಇಟ್ಟನು ನನಗೆ 

 

ಪ್ರೀತಿ ಎಂದರೇನು ಗೊತ್ತಿಲ್ಲ

ಮಮಕಾರ ನಾನಂತೂ ನೋಡಿಲ್ಲ

ತಂಗಿಯರು ನನ್ನ ನೋಡಲಿಲ್ಲ

ನೋವು ಬಾಧಿಸುತ್ತದೆ ಅಲ್ಲ

 

ಇರಬೇಕು ಒಡಹುಟ್ಟಿದ ತಂಗಿ

ಅವಳೇ ಆಗಬೇಕಿತ್ತು ತಾಯಿ

ನಡೆದುಕೊಳ್ಳುವೆ ತಲೆ ಬಾಗಿ

ಅವಳೇ ಮಾತಾಡಿಸಲು ಕೂಗಿ 

-ಹುಚ್ಚೀರಪ್ಪ ವೀರಪ್ಪ ಈಟಿ, ಸಾ ನರೇಗಲ್ಲ ,ಗದಗ.

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್