ಅಪರಾಧ ನಿಗ್ರಹದಲ್ಲಿ AI ಕ್ಯಾಮೆರಾಗಳು ಪೊಲೀಸರಿಗೆ ವರದಾನ
ಬೆಂಗಳೂರು ಪೊಲೀಸರು ಬಳಸುತ್ತಿರುವ ಫೇಶಿಯಲ್ ರೆಕಗ್ನಿಷನ್ ಸಾಫ್ಟ್ ವೇರ್ [Facial Recognition Software] ಕಳೆದ 90 ದಿನಗಳಲ್ಲಿ ನಗರದಾದ್ಯಂತ 2.5 ಲಕ್ಷ ಅಪರಾಧ ಹಿನ್ನೆಲೆಯುಳ್ಳ ಚಹರೆಗಳನ್ನು ಗುರುತಿಸಿ, ಕನಿಷ್ಠ 10 ಅಪರಾಧಿಗಳನ್ನು ಬಂಧಿಸಲು ಉಪಯುಕ್ತಕರವಾಗಿದೆ. 'ಸೇಫ್ ಸಿಟಿ ಪ್ರಾಜೆಕ್ಟ್' ಯೋಜನೆಯಡಿ ಬೆಂಗಳೂರಿನಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಫೇಶಿಯಲ್ ರೆಕಗ್ನಿಷನ್ ಸಿಸ್ಟಮ್ [ಎಫ್.ಆರ್.ಎಸ್] ಅನ್ನು ಪ್ರಯೋಗಿಸಲಾಯಿತು. ಪೊಲೀಸ್ ಕಮಾಂಡ್ ಸೆಂಟರಿನಲ್ಲಿ ಸ್ಥಾಪಿಸಲಾದ ಎಫ್.ಆರ್.ಎಸ್ ಗೆ ನಗರದಾದ್ಯಂತ ಸ್ಥಾಪಿಸಲಾಗಿದ್ದ CCTV ಕ್ಯಾಮೆರಾಗಳನ್ನು ಸಂಪರ್ಕಿಸಲಾಗಿದೆ. ಪೊಲೀಸರು ಈಗ ವ್ಯವಸ್ಥೆಯ ನಿಖರತೆಯನ್ನು ಸುಧಾರಿಸುವತ್ತ ಗಮನಹರಿಸುತ್ತಿದ್ದಾರೆ.
"ಕ್ರಿಮಿನಲ್ ಡೇಟಾಬೇಸ್ ನೊಂದಿಗೆ ಅಪರಾಧಿಗಳ ಚಹರೆಯ ಲಕ್ಷಣಗಳನ್ನು ನಿಖರವಾಗಿ ಹೊಂದಿಸುವ ವ್ಯವಸ್ಥೆಯ ಸಾಮರ್ಥ್ಯವನ್ನು ಇನ್ನೂ ಪರೀಕ್ಷಿಸಬೇಕಾಗಿದೆ. ನಾವು ಪ್ರಸ್ತುತ ಕಮಾಂಡ್ ಸೆಂಟರಿನಲ್ಲಿ ಎರಡು ಮುಖ ಗುರುತಿಸುವಿಕೆ ಸಾಫ್ಟ್ವೇರ್ ಗಳನ್ನು ಪರೀಕ್ಷಿಸುತ್ತಿದ್ದೇವೆ; ಉತ್ತಮವಾದದನ್ನು ಅಳವಡಿಸಿಕೊಳ್ಳುತ್ತೇವೆ" ಎಂದು ಪೊಲೀಸ್ ಕಮಿಷನರ್ - ಬಿ ದಯಾನಂದ ಅವರು ಮಾಧ್ಯಮಗಳಿಗೆ ತಿಳಿಸಿದರು.
Automatic Number Plate Recognition [ANPR] ಕ್ಯಾಮೆರಾಗಳಂತೆಯೇ ಎಫ್.ಆರ್.ಎಸ್ ಅನ್ನು, ಅದೇ ಮಟ್ಟದ ನಿಖರತೆಗೆ ತರುವುದು ಗುರಿಯಾಗಿದೆ ಎಂದು ಕಮಿಷನರ್ ಅವರು ಹೇಳಿದರು. ಸೇಫ್ ಸಿಟಿ ಯೋಜನೆಯ ಭಾಗವಾಗಿ, ಮುಖಗಳನ್ನು ಗುರುತಿಸಲು 7,500 AI ಚಾಲಿತ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ; ಇವುಗಳಲ್ಲಿ, ಎಫ್.ಆರ್.ಎಸ್ ನೊಂದಿಗೆ ಲಿಂಕ್ ಮಾಡಲು ಪೊಲೀಸರು 1,000 ಕ್ಯಾಮೆರಾಗಳಿಗೆ ಲೈಸೆನ್ಸ್ ಗಳನ್ನು ಖರೀದಿಸಿದ್ದಾರೆ.
"ಕಮಾಂಡ್ ಸೆಂಟರಿನ ಅಧಿಕಾರಿಯೊಬ್ಬರು ಈ ವ್ಯವಸ್ಥೆಯು 75-80% ನಿಖರತೆಯನ್ನು ಸಾಧಿಸಿದೆ ಎಂದು ಗಮನಿಸಿದರು; ಇದನ್ನು ಮಷಿನ್ ಲರ್ನಿಂಗ್ ಮತ್ತು ಡೇಟಾ ರೀಡಿಂಗ್ ಮೂಲಕ 98-99 ಪ್ರತಿಶತ ಹೆಚ್ಚಿಸಲಾಗುತ್ತಿದೆ. ಸ್ಥಿರೀಕರಣದ ಫಲಿತಾಂಶಗಳ ಆಧಾರದ ಮೇಲೆ, ನಾವು ಹೆಚ್ಚಿನ ಲೈಸೆನ್ಸ್ ಗಳನ್ನು ಪಡೆದುಕೊಳ್ಳುವುದನ್ನು ಪರಿಗಣಿಸುತ್ತೇವೆ" ಎಂದು ಅವರು ಹೇಳಿದರು.
ಹಲವು ಸಂದರ್ಭಗಳಲ್ಲಿ ಪೊಲೀಸರಿಗೆ ಈ ವ್ಯವಸ್ಥೆ ಉಪಯೋಗಕ್ಕೆ ಬಂದಿದೆ. ಉದಾಹರಣೆಗೆ, ಆಗಸ್ಟ್ ತಿಂಗಳಿನಲ್ಲಿ ತುಮಕೂರು ಪೊಲೀಸ್ ಪೇದೆಯೊಬ್ಬರು 40 ಪ್ರಕರಣಗಳಲ್ಲಿ ಭಾಗಿಯಾಗಿರುವ ಒಬ್ಬ ಅಪರಾಧಿಯನ್ನು ಹುಡುಕಲು ಬೆಂಗಳೂರಿಗೆ ಬಂದಿದ್ದರು. ಎಫ್.ಆರ್.ಎಸ್ ಶಂಕಿತನ ಸ್ಥಳವನ್ನು ಗುರುತಿಸಲು ಸಹಾಯ ಮಾಡಿತು; ನಾಟಕೀಯವಾಗಿ ಬೆನ್ನಟ್ಟಿದ ಬಳಿಕ ಸದಾಶಿವನಗರದ ಬಳಿ ಆ ಅಪರಾಧಿಯನ್ನು ಸೆರೆಹಿಡಿಯಲು ಕಾರಣವಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಿಂದ ನಾಪತ್ತೆಯಾದ ಟೆಕ್ಕಿಯ ರೂಟ್ ಮ್ಯಾಪ್ ರಚಿಸಲು ಎಫ್.ಆರ್.ಎಸ್ ಅನ್ನು ಬಳಸಲಾಗಿದೆ; ನೋಟು ಬದಲಾವಣೆಯೊಂದಿಗೆ ನೋಯ್ಡಾದಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿ ಹೇಳಿದರು. ಕಾಣೆಯಾದ ವ್ಯಕ್ತಿಗಳು ಮತ್ತು ಅಪಹರಣ ಪ್ರಕರಣಗಳಲ್ಲಿಯೂ ಈ ವ್ಯವಸ್ಥೆಯು ಬಹಳ ಪರಿಣಾಮಕಾರಿಯಾಗಿದೆ ಎಂಬುದನ್ನು ಒತ್ತಿಹೇಳಲು ಅವರು ಈ ಉದಾಹರಣೆಯನ್ನು ನೀಡಿದರು.
ಜನಸಂದಣಿ ಇರುವ ಸ್ಥಳಗಳು, ರಾಜಕೀಯ ಸಭೆಗಳು, ಮತ್ತು ಹಬ್ಬ ಆಚರಣೆಗಳಂತಹ ಮಹತ್ವದ ಸಭೆಗಳಲ್ಲಿ ಈ ವ್ಯವಸ್ಥೆಯು ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಮತ್ತೊಬ್ಬರು ಪೊಲೀಸ್ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದರು. ಇದು ಪೊಲೀಸರಿಗೆ ಲೈವ್ ಫೀಡ್ ಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಜನಸಮೂಹದಲ್ಲಿ ಬೆರೆದಿರುವ ಅಪರಾಧ ಹಿನ್ನೆಲೆ ಹೊಂದಿರುವ ಯಾವುದೇ ವ್ಯಕ್ತಿಗಳನ್ನು ನಿಕಟವಾಗಿ ಪತ್ತೆಹಚ್ಚಲು ಅನುವು ಮಾಡಿಕೊಡುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು.
ಕಮಾಂಡ್ ಸೆಂಟರಿನಲ್ಲಿ ಸ್ಥಾಪಿಸಲಾದ ಮುಖ ಗುರುತಿಸುವಿಕೆ ಸಾಫ್ಟ್ ವೇರ್ ಗೆ ಕ್ಯಾಮೆರಾಗಳನ್ನು ಲಿಂಕ್ ಮಾಡಲಾಗಿದೆ; ಸಾಫ್ಟ್ ವೇರ್ ಅನ್ನು ಬೆಂಗಳೂರಿನ ಪೋಲೀಸರು ನಿರ್ವಹಿಸುವ ಕ್ರಿಮಿನಲ್ ಡೇಟಾಬೇಸ್ ನೊಂದಿಗೂ ಕನೆಕ್ಟ್ ಮಾಡಲಾಗಿದೆ; CCTV ಕ್ಯಾಮೆರಾಗಳು ಕಮಾಂಡ್ ಸೆಂಟರ್ ಗೆ ಅಧಿಸೂಚನೆಯನ್ನು ಕಳುಹಿಸುತ್ತದೆ, ಕ್ಯಾಮೆರಾ ಕಣ್ಣಿನಲ್ಲಿ ಶಂಕಿತ ವ್ಯಕ್ತಿ ಬಂದರೆ, ಅದು ಕಮಾಂಡ್ ಸೆಂಟರ್ ಗೆ ಎಚ್ಚರಿಕೆಯನ್ನು ಕಳುಹಿಸುತ್ತದೆ ಎಂದು ಕಮಿಷ್ನರ್ ಅವರು ಮಾಧ್ಯಮಗಳಿಗೆ ತಿಳಿಸಿದರು. ಕ್ರಿಮಿನಲ್ ಡೇಟಾಬೇಸ್ ನೊಂದಿಗೆ ಶಂಕಿತರ ಚಹರೆಯ ವೈಶಿಷ್ಟ್ಯಗಳನ್ನು ನಿಖರವಾಗಿ ಹೊಂದಿಸಲು ಸಿಸ್ಟಮಿನ ಸಾಮರ್ಥ್ಯವನ್ನು ಸ್ಥಿರಗೊಳಿಸಬೇಕಾಗಿದೆ. ನಾವು ಸದ್ಯಕ್ಕೆ ಕಮಾಂಡ್ ಸೆಂಟರಿನಲ್ಲಿ ಎರಡು ಮುಖ ಗುರುತಿಸುವಿಕೆ ಸಾಫ್ಟ್ವೇರ್ ಅನ್ನು ಪರೀಕ್ಷಿಸುತ್ತಿದ್ದೇವೆ; ಉತ್ತಮವಾದುದನ್ನು ಅಳವಡಿಸಿಕೊಳ್ಳುತ್ತಿದ್ದೇವೆ ಎಂದು ಬೆಂಗಳೂರಿನ ಪೊಲೀಸ್ ಕಮಿಷನರ್ ಬಿ. ದಯಾನಂದ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಾಹಿತಿ ಮೂಲ : Deccan Herald ದೈನಿಕ
-ಶಿಕ್ರಾನ್ ಶರ್ಫುದ್ದೀನ್ ಎಂ., ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ