ಅಮಲು....!!!

ಅಮಲು....!!!

ಕವನ

1.

ಕಣ್ಣಲ್ಲೇ ಕರೆಯದಿರು ಹುಡುಗ
ಕೂತಲ್ಲೇ ಕರಗಿಹೋದೇನು....
ಒಂಚೂರು ಪ್ರೀತಿಗಾಗಿ
ನಿಂತಲ್ಲೇ ಉಳಿದು ಹೋದೇನು....!!

2.

ನಿನ್ನೆದೆಯ ಹಾಡಿಗೆ ಪದವಾಗುವಾಸೆ
ಮುಸ್ಸಂಜೆ ತಂಪಿನಲಿ ನಿನ್ನೊಡನೆ ಕಳೆದೋಗುವಾಸೆ
ನಿನ್ನೆಲ್ಲ ಹುಡುಕಾಟಕ್ಕೂ ಉತ್ತರವಾಗುವಾಸೆ
ನನ್ನ ಹೆಸರಿಗೆ ನಿನ್ನ ಹೆಸರ ಸೇರಿಸಿ
ಪರಿಪೂರ್ಣವಾಗುಸೆ.....!!

Comments

Submitted by ಸೀಲೈಫ್೫೩೭ Fri, 07/03/2015 - 08:19

ಹಲೋ ಸೌಮ್ಯರವರೆ, ತಮ್ಮ ಕವನ ಇಷ್ಟವಾಯಿತು, ಮೊದಲ ಬಾರಿಗೆ ಹುಡುಗರ ಪ್ರತಿ ಪ್ರೀತಿ ವ್ಯಕ್ತಪಡಿಸುವ ದೈರ್ಯ ತಮ್ಮ ಕವನದಲ್ಲಿ ಕಂಡು ಬಹಳ ಸಂತೋಷವಾಯಿತು. ಸಹಜವಾಗಿ ಹುಡುಗರು ಹುಡುಗಿಯರಿಗಾಗಿ ಕವನ ಬರೆಯುವುದು ಬಹಳ ಕಂಡಿರುವನು ಆದರೆ ತಮ್ಮ ಶೈಲಿ ಭಿನವಗಿದೆ.  ಸಾಹಿತ್ಯ ಲೋಕದ ತಮ್ಮ ಪಯಣ ಮತಷ್ಟು ಕವನಗಳನ್ನು ಓದುಗರಿಗೆ ನೀಡಲಿ ಎಂದು ಬಯಸುತೇನೆ