ಅಮೆರಿಕದ ಸಾರ್ವಜನಿಕ ಸೇವಾಸಂಸ್ಥೆಗಳು-೧

ಅಮೆರಿಕದ ಸಾರ್ವಜನಿಕ ಸೇವಾಸಂಸ್ಥೆಗಳು-೧

ಬರಹ

(ಕೊಲಂಬಿಯ ಊರಿನ ಸಾರ್ವಜನಿಕ ಪುಸ್ತಕ-ಭಂಡಾರ)

ನಾನು ನನ್ನ ಮಗಳಜೊತೆ ಅಲ್ಲಿಗೆ ಅಡಿಯಿಟ್ಟಾಗ ಅನ್ನಿಸಿದ್ದು ಯಾವುದೋ ಐ. ಐ. ಟಿ ಯ ಲೈಬ್ರರಿಗೆ ಹೋದಂತಿತ್ತು. ಅದೊಂದು ಹಳ್ಳಿಯ/ಊರಿನ ಪುಸ್ತಕಾಲಯ. ಆದರೆ ಅದನ್ನು ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ನೋಡಿಕೊಳ್ಳುತ್ತಿರುವ ರೀತಿ ಅನನ್ಯ. ಟ್ಯಾಕ್ಸ್ ಕೊಡುವನಾಗರೀಕರ ಹಣದಿಂದ ರಾಜ್ಯದ ಆಡಳಿತದ ಪರಿಮಿತಿಯಲ್ಲಿ ನಡೆಸುತ್ತಿರುವ ಈ ಲೈಬ್ರರಿಯ ಸೌಲಭ್ಯಗಳು ಅತ್ಯಾಕರ್ಷಕ. ನಾನು ಬೆಂಗಳೂರಿನಲ್ಲಿ ಅನೇಕ ಲೈಬ್ರರಿಗಳಿಗೆ ಹೋಗಿದ್ದೇನೆ. ಉದಾ : ದಿವಾನ್ ಶೇಶಾದ್ರಿ ಅಯ್ಯರ್ ಸಾರ್ವಜನಿಕ ಲೈಬ್ರರಿ, ಬಸವನಗುಡಿಯ ಸಾರ್ವಜನಿಕ ಲೈಬ್ರರಿ, ಇಂಡಿಯನ್ ಇನ್ ಸ್ಟಿಟ್ಯೂಟ್ ವರ್ಲ್ಡ್ ಕಲ್ಚರ್ ಸಾರ್ವಜನಿಕ ಲೈಬ್ರರಿ, ಟಾಟಾ ಇನ್ಸ್ಟಿ ಟ್ಯೂಟ್ ಲೈಬ್ರರಿ, ಇತ್ಯಾದಿ. ಚಿತ್ರದುರ್ಗ, ಮೈಸೂರು ಜಿಲ್ಲೆಗಳ ಲೈಬ್ರರಿಗಳಿಗೂ ಹೋಗಿದ್ದೇನೆ. ಮುಂಬೈ ನಲ್ಲಿ ಮೈಸೂರ್ ಅಸೋಸಿಯೇಷನ್ ಲೈಬ್ರರಿ, ಕರ್ನಾಟಕ ಸಂಘ ಲೈಬ್ರರಿ, ಏಶಿಯಾಟಿಕ್ ಸಾರ್ವಜನಿಕ ಲೈಬ್ರರಿ, ಡಾ. ಲಾಡ್ ಸಾರ್ವಜನಿಕ ಲೈಬ್ರರಿ, ಸಿ. ಟಿ. ಆರ್. ಎಲ್ ಲೈಬ್ರರಿ, ಮುಂಬೈ ಕನ್ನಡ ಸಂಘ ಸಾರ್ವಜನಿಕ ಲೈಬ್ರರಿ, ಬ್ರಿಟಿಷ್ ಕೌನ್ಸಿಲ್ ಸಾರ್ವಜನಿಕ ಲೈಬ್ರರಿ , ಅಮೆರಿಕನ್ ಸಾರ್ವಜನಿಕ ಲೈಬ್ರರಿ, , ಬಿ. ಎ. ಆರ್. ಸಿ. ಲೈಬ್ರರಿ ಇತ್ಯಾದಿ.

ನಾನು ತಿಳಿಸಿದ ಲೈಬ್ರರಿಗಳಲ್ಲಿ, ಅವೆಲ್ಲ ಒಂದಲ್ಲ ಒಂದು ವಿಧದಲ್ಲಿ ಒಂದೇ ತರಹವಿದ್ದರೂ ಆಧುನಿಕ ಲೈಬ್ರರಿಗಳ ಪಟ್ಟಿಯಲ್ಲಿ ಬರುವ ಕೆಲವೇ ಸರ್ವಜನಿಕ ಲೈಬ್ರರಿಗಳೆಂದರೆ, ದಿವಾನ್ ಶಾದ್ರಿ ಅಯ್ಯರ್ ಲೈಬ್ರರಿ, ಇಂಡಿಯನ್ ಇನ್ ಸ್ಟಿಟ್ಯೂಟ್ ವರ್ಲ್ಡ್ ಕಲ್ಚರ್ ಸಾರ್ವಜನಿಕ ಲೈಬ್ರರಿ, ಬ್ರಿಟಿಷ್ ಕೌನ್ಸಿಲ್ ಸಾರ್ವಜನಿಕ ಲೈಬ್ರರಿ, ಅಮೆರಿಕನ್ ಸಾರ್ವಜನಿಕ ಲೈಬ್ರರಿ, ಏಶಿಯಾಟಿಕ್ ಸಾರ್ವಜನಿಕ ಲೈಬ್ರರಿ, ಮುಂಬೈ, ಹಾಗೂ ಡಾ. ಲಾಡ್ ಸಾರ್ವಜನಿಕ ಲೈಬ್ರರಿಗಳು. ಅಮೆರಿಕದ ಲೈಬ್ರರಿಗಳಿಗೆ ಗುಣಮಟ್ಟದಲ್ಲಿ ಸರಿಸಮನಾದವುಗಳು. ಭಾರತದಲ್ಲಿ ಈ ಲೈಬ್ರರಿಗಳಿಗೆ ಒಳಗೆ ಪ್ರವೇಶಮಾಡಿ ಪುಸ್ತಕಗಳನ್ನು ಓದಬೇಕಾದರೆ ಸದಸ್ಯತ್ವಬೇಕು. ಮತ್ತು ಲೇಟೆಸ್ಟ್ ಪುಸ್ತಕಗಳು ಸಿಗುವುದು ದುರ್ಲಭ. ಅದಕ್ಕೆ ಕಾಯಬೇಕು.

ನಮಗೆ ಕಂಡಿದ್ದು ಕೇಳಿದ್ದರ ಪ್ರಕಾರ ಅಮೆರಿಕದಲ್ಲಿಯೂ ಸದಸ್ಯತ್ವ ಬೇಕು. ಆದರೆ ಹೊಸ ವ್ಯಕ್ತಿ ಸದಸ್ಯತ್ವವಿಲ್ಲದೆಯೂ ಅಲ್ಲಿನ ಕೆಲವು ಸೌಲಭ್ಯಗಳನ್ನು ಪಡೆಯಲು ಯಾವ ಅಡಚಣೆಗಳೂಇಲ್ಲ. ನನಗೆ ಈಗಲೂ ಜ್ಞಾಪಕವಿದ್ದಂತೆ, ಬ್ರಿಟಿಷ್ ಕೌನ್ಸಿಲ್ ಲೈಬ್ರರಿ, ಸದಸ್ಯತ್ವ ಪಡೆಯಲು ನಾನು ಬಹಳ ಸಮಯ ಕಾಯಬೇಕಾಯಿತು. ಈಗ ಅಮೆರಿಕನ್ ಹಾಗೂ ಬ್ರಿಟಿಷ್ ಕೌನ್ಸಿಲ್ ಲೈಬ್ರರಿ,ಗೆ ಸದಸ್ಯತ್ವ ಪಡೆಯುವುದು ತುಂಬ ಕಷ್ಟ. ಅಲ್ಲಿ ಸಿಗುವ ಪುಸ್ತಕಗಳು ಹಹಳ ಕಡಿಮೆ. ಜಾಗವೇಇಲ್ಲ. ಕಾಯುವ ಲೈನ್ ದೊಡ್ಡದು. ಆನ್ ಲೈನ್ ನಲ್ಲಿ ಸಹಾಯಪಡೆಯಲು, ಕಂಪ್ಯೂಟರ್ ಗಳು ಸರಿಯಾಗಿ ಕೆಲಸಮಾಡುವುದು ಯಾವಾಗಲೋ. ಪುಸ್ತಕಗಳ ಪುಟಗಳು ಮಾಯವಾಗಿಯೋ ಇಲ್ಲವೇ ಚಿದ್ರವಾಗಿಯೋ ಅಥವ ಪುಟಗಳಲ್ಲಿ ಏನಾದರೂ ಗೀಚಿರುವ ಸಂಗತಿಗಳು ಸರ್ವೇಸಾಮಾನ್ಯ. ಕೊಲಂಬಿಯ ಊರಿನ ಸಾರ್ವಜನಿಕ ಪುಸ್ತಕ-ಭಂಡಾರದಲ್ಲಿನ ಅಧಿಕಾರಿಗಳು, ನಗುಮುಖದಿಂದ ಬಂದವರೆಲ್ಲರಿಗೂ ಸಮಾಧಾನದಿಂದ ಉತ್ತರಹೇಳಿ ಅವರಿಗೆ ಬೇಕಾದ ಹೊತ್ತಿಗೆಗಳನ್ನು ತಾವೇ ಕಪಾಟಿನಹತ್ತಿರ ಕರೆದುಕೊಂಡು ಹೋಗಿ ತೋರಿಸುತ್ತಾರೆ. ಆನ್ ಲೈನಲ್ಲಿ ಕಂಪ್ಯೂಟರ್ ಗಳು ಅತಿ ದಕ್ಷತೆಯಿಂದಕೆಲಸಮಾಡುವಂತೆ ನೋಡಿಕೊಳ್ಳುತ್ತಾರೆ. ಅಲ್ಲಿನ ಸಿಬ್ಬಂದಿವರ್ಗ ಅದಕ್ಕಾಗಿಯೇ ಕಾದು-ಕುಳಿತು, ಸ್ವಲ್ಪ ಲೆಕ್ಕಾಚಾರ ಹೆಚ್ಚು-ಕಡಿಮೆಯಾದರೂ ಬಂದು ವಿಚಾರಿಸಿ, ಜವಾಬ್ದಾರಿಯಿಂದ ವರ್ತಿಸಿ, ತಮ್ಮ ಸಹಾಯದ ಕೈಕೊಡುವ ಪರಿಪಾಠ ನಮಗೆಲ್ಲ ಅಚ್ಚರಿಯನ್ನುಂಟುಮಾಡಿತು. ನಾನು, ನನ್ನ ಪತ್ನಿ, ಹಾಗೂ, ನಮ್ಮ ಆಂಟಿ, ಸುಮಾರುಸಮಯ ಅಲ್ಲೇ ಕುಳಿತಿದ್ದು ಚಲನವಲನವನ್ನು ಮನದಟ್ಟುಮಾಡಿಕೊಂಡೆವು.

ಭಾರತ ದೇಶದ ಅನೇಕ ಪ್ರಮುಖ ಸಮಸ್ಯೆಗಳಿಗೆ ಜನಸಂಖ್ಯೆಯೇ ಒಂದು ಪಿಡುಗಿನಂತೆ ಅದರ ಸುತ್ತಾ ಆವರಿಸಿ ಅದರ ಪ್ರಗತಿಗೆ ಮುಳುವಾಗಿದೆ. ತಜ್ಞರ ಅಭಿಪ್ರಾಯದಂತೆ ಇದನ್ನು ನಮ್ಮ ಒಳಿತಿಗೆ ಬದಲಾಯಿಸಿಕೊಳ್ಳುವ ಮನಸ್ಥಿತಿಯನ್ನು ನಾವು ಚೀನಾದಂತಹ ರಾಷ್ಟ್ರವನ್ನು ನೋಡಿಕಲಿಯಬೇಕು. ಜಪಾನ್ ದೇಶವನ್ನು ನೋಡಿ ನಮ್ಮ ನೈಪುಣ್ಯತೆಯನ್ನು ಬೆಳಸಿಕೊಳ್ಳಬೇಕು. ನಮ್ಮಲ್ಲಿರುವ ಕೆಲವು ಶಕ್ತಿಗಳನ್ನು ಅರಿತು ಅದರಲ್ಲಿ ಪ್ರಗತಿಯ ಶಿಖರವನ್ನು ಕೊಳ್ಳೆಹೊಡೆಯಬೇಕು. ಇತ್ಯಾದಿ.

ಇಂತಹದೇ ಅನೇಕ ಅತ್ಯುತ್ತಮ ವ್ಯವಸ್ಥೆಯನ್ನು ಕಾಪಾಡಿಕೊಂಡು ಬರುವುದು ಬಹುಶಃ ಅಮೆರಿಕದಂತಹ ರಾಷ್ಟ್ರಕ್ಕೆ ಸುಲಭವೇನೋ ! ಅಲ್ಲಿನ ನಾಗರಿಕರು, ಬಹುಪಾಲು ತಮ್ಮ ದೇಶವನ್ನು ಗಾಢವಾಗಿ ಪ್ರೀತಿಸುವ ಜನ. ತಮ್ಮ ದೈನಿಂದಿಕ ಕಾರ್ಯಗಳಲ್ಲಿ ಒಂದು ಶಿಸ್ತನ್ನು ಕಾಪಾಡಿಕೊಂಡು ಬಂದಿದ್ದಾರೆ. ಮಧ್ಯಮವರ್ಗದ ಜನ ನಮ್ಮಲ್ಲಿದ್ದಂತೆ ಅಲ್ಲಿಯೂ ಇದ್ದಾರೆ. ಪ್ರತಿಯೊಬ್ಬರೂ ಕಾರಿನಲ್ಲಿ ಬರುತ್ತಾರೆ, ಅಂದಮಾತ್ರಕ್ಕೇ ಅವರೇನೂ ಅತಿ ಶ್ರೀಮಂತರಲ್ಲ. ’ಕಾರಿಲ್ಲದೆ ಈ ದೇಶದಲ್ಲಿ ಒಂದುದಿನವೂ ಕಳೆಯಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ದುಡಿದರೆ ಮಾತ್ರ ಅವರ ಅತ್ಯಾವಶ್ಯಕ ಸಾಮಾನುಗಳನ್ನು ಖರೀದಿಸಿ ಅವುಗಳ ಬಿಲ್ ಗಳನ್ನು ತುಂಬಿ ಬದುಕಲು ಸಾಧ್ಯ. ಪ್ರತಿ ಅಮೆರಿಕನ್ ಕೂಡ, ಶುಕ್ರವಾರ ಆದಕೂಡಲೇ ತನ್ನ ಕೆಲಸವನ್ನು ತ್ವರಿತವಾಗಿ-ಸಮರ್ಪಕವಾಗಿ, ಮುಗಿಸಿ ಶನಿವಾರ, ಆದಿತ್ಯವಾರ ತಮ್ಮ ಪರಿವಾರದೊಂದಿಗೆ ಹತ್ತಿರದ ಯಾವುದಾದರೂ ಸ್ಥಳಕ್ಕೆ ಹೋಗಿ ಕಾಲಕಳೆದು ಸೋಮವರ ಬೆಳಿಗ್ಯೆ ಸರಿಯಾಗಿ ತಮ್ಮ ತಮ್ಮ ಕಚೇರಿಗಳಲ್ಲಿ ಹಾಜರಿರುವುದು ಸರ್ವೇ ಸಾಮಾನ್ಯವಾದ ಸಂಗತಿ. ತಮ್ಮ ಆಫೀಸ್ ಕೆಲಸವನ್ನು ಅವರು ಅತಿಯಾಗಿ ಪ್ರೀತಿಸುತ್ತಾರೆ. ಒಂದುವೇಳೆ ತಮ್ಮ ಕೆಲಸದ ಜಾಗದಲ್ಲಿ ಅವರಿಗೆ ಬೇಸರ, ಅಸಮಧಾನವಾದರೆ, ಖಂಡಿತ ಗೊಣಗಾಡುತ್ತಾ ಅಲ್ಲೇ ಮುಂದುವರಿಯುವುದಿಲ್ಲ. ಆದರೆ, ಇರುವಷ್ಟುಸಮಯ ತಮ್ಮ ಪೂರ್ಣ ಸಹಕಾರದೊಂದಿಗೆ ವರ್ತಿಸುವ ಅವರ ಮಾದರಿಯನ್ನು ನಾವು ಮೆಚ್ಚಲೇ ಬೇಕು.

ಇದು ಅವರ ಗುಣಗಾನವೇ ? ಸರ್ವಥಾ ಅಲ್ಲ. ಗುಣಕ್ಕೆ ಮತ್ಸರವೆಲ್ಲಿ ? ಬೇರೆ ದೇಶಕ್ಕೆ ಹೋದಾಗ ಅಲ್ಲಿನ ಗುಣಾವಗುಣಗಳನ್ನು ನಾನು ಕಣ್ಣರೆನೋಡಿ, ಕಿವಿಯಾರೆಕೇಳಿ ಬರೆದಿದ್ದೇನೆ. ಇದು ನನ್ನ ವೈಯಕ್ತಿಕ ಅಭಿಮತ. ಇದರ ಮತ್ತೊಂದು ಮುಖವೂ ಇರಬಹುದು. ಇನ್ನೊಂದು ಅತಿ ಗಮನಾರ್ಹವಾದ ಸಂಗತಿಯೆಂದರೆ, ನಮ್ಮದೇಶದ ಜನಸಂಖ್ಯಾಸ್ಫೋಟ. ನಾವು ಏನು ಪ್ರಗತಿಸಾಧಿಸಿದರೂ ಅದು ಸರಿಯಾಗಿ ನಮ್ಮ ಜನಸ್ತೋಮವನ್ನು ಮುಟ್ಟುವುದರ ಮೊದಲಲ್ಲೇ ಇಂಗಿಹೋಗಿ ಎಲ್ಲರನ್ನೂ ಖಿನ್ನರನ್ನಾಗಿಮಾಡುತ್ತದೆ. ನನ್ನ ಇಲ್ಲಿನ ಇರುವಿಕೆಯ ಅವಧಿಯಲ್ಲಿ ತೋಚಿದ್ದನ್ನು ದಾಖಲಿಸುವ ಯತ್ನ ಮಾಡಿದ್ದೇನೆ. ನಿರಕ್ಷರತೆ, ಲಂಚ, ಕೆಲಸದಲ್ಲಿ ದಕ್ಷತೆಯಿಲ್ಲದಿರುವಿಕೆ,ಬಹುತೇಕ, ಸಾರ್ವಜನಿಕ ಸಂಸ್ಥೆಗಳು ದಕ್ಷತೆಯಿಲ್ಲದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿವೆ. ತಮ್ಮ ಸಮುದಾಯ, ಪಕ್ಷ, ಹಾಗೂ ತಮ್ಮ ಸಮುದಾಯದ ಜನರ ಹಿತರಕ್ಷಣೆಯೊಂದೇ ಅವರ ಗುರಿ. ಕೆಲಸದಲ್ಲಿ ಪಾರದರ್ಶಕತೆ ಇಲ್ಲ. ಹಲವಾರು ಪಕ್ಷಗಳು ಯಾವ ಖಚಿತನೀತಿಯನ್ನೂ ಹೊಂದಿರದೆ ಸಮಯಕ್ಕೆ ತಕ್ಕಹಾಗೆ ಅವಕಾಶಗಳನ್ನು ತಮ್ಮ ಉಪಯೋಗಕ್ಕೆ ಬಳಸಿಕೊಳ್ಳುವನೀತಿಯನ್ನು ಕಂಡ ಯುವಕರು/ತಿಯರು ದಿಘ್ಬ್ರಮೆಹೊಂದುತ್ತಾರೆ. ಯುವಕರಿಗೆ ಆದರ್ಶಪ್ರಾಯರಾದ ನೇತಾಗಳೇ ಇಲ್ಲವಾಗಿದ್ದಾರೆ. ಪ್ರತಿ ವಲಯದಲ್ಲೂ ಅನಿಶ್ಚತತೆ, ಗೊಂದಲ, ಅರಾಜಕತೆ, ಹಾಗೂ ಮಾತು-ಕಾರ್ಯಾಚರಣೆಗಳಲ್ಲಿ ನೆಲ-ಆಕಾಶದಷ್ಟು ಅಂತರ. ಹೀಗಾಗಿ ಭಾರತದ ಯುವಜನಾಂಗ ಧೃತಿಗೆಟ್ಟಿದೆ.