ಅಮೇರಿಕಾದ ಬ್ಯಾ೦ಕುಗಳು ಮಾಯ ಯಾಕ್ ಆಗ್ತಿವೇ ?

ಅಮೇರಿಕಾದ ಬ್ಯಾ೦ಕುಗಳು ಮಾಯ ಯಾಕ್ ಆಗ್ತಿವೇ ?

ಬರಹ

ಬ೦ಡವಾಳ ಷಾಹಿ ಪದ್ದತಿಯನ್ನೇ ತನ್ನ ಜೀವ ನಾಡಿ ಅ೦ದು ಎಲ್ಲಾ ದೇಶಗಳಿಗೂ ಈ ನೀತಿಯನ್ನು ರಫ್ತು ಮಾಡಿದ ಅಮೇರಿಕಾ ತಾನೇ ಈ ವರ್ಸ್ದಾಗೆ ಮುಳುಗಿ ಹೋಗುವ೦ತೆ ಕಾಣಿಸ್ತಿದೆ. ಅದೇನೋ ಮನೆ ಭೋಗ್ಯಕ್ಕೆ ಕೊಟ್ಟು ಯಾರು ಸಾಲ ತೀರಿಸಿಲ್ಲವ೦ತೆ. ಅದಕ್ಕೆ ಅಲ್ಲಿನ ಬ್ಯಾ೦ಕುಗಳು ನಷ್ಟ ಅನುಭವಿಸಲಾಗದೇ ಮುಚ್ಚಿ ಹೋದವ೦ತೆ. AIG ಅನ್ನೋ Insurance company ಗೆ insurance
ಸಿಗದೇ - ಅದು ಅಮೇರಿಕಾ ಸರ್ಕಾರಕ್ಕೆ ಮೊರೆ ಹೋಗಿ ಹೆ೦ಗೋ ಕ್ಯಾನ್ಸರ್ ರೋಗಿ ಯ೦ತೆ ಉಸಿರಾಡ್ತಾಯಿದೆ. ಈಗ ಅಮೇರಿಕಾದಲ್ಲಿ ಬ೦ಡವಾಳ ಹೂಡಲೂ ಯಾರಿಗೂ ಧೈರ್ಯ ಇಲ್ಲವ೦ತೆ. ಹೊರಗಿ೦ದಲೂ ದುಡ್ಡ್ ಬರದೇ - ಒಳಗೆ ಎಲ್ಲಾ ಬ್ಯಾ೦ಕುಗಳು ಸಾಲದ ಕೊ೦ಡಿಯಲ್ಲಿ ಸಿಳುಕಿರುವಾಗ ಯಾವ ಅರ್ಥ ನೀತಿ ಒಳ್ಳೇದು ಅ೦ತಾ ಯಾರಿಗೂ ಗೊತ್ತಾಗ್ತಾ ಇಲ್ಲವ೦ತೆ .

ನಿ೦ಜಾಗಳಿಗೆ (No job , no asset, ) ಸಾಲ ಕೊಟ್ಟು ದುಡ್ಡು ಕಳ್ಕೊ೦ಡಿರೋ ಭಾರಿ ಬ್ಯಾ೦ಕುಗಳನ್ನು ಉಳಿಸಲು ಅಲ್ಲಿನ ಸರ್ಕಾರ
ಬ್ಯಾ೦ಕುಗಳನ್ನು ಖರೀದ್ ಮಾಡಿಯೋ ಅಥವಾ ಖರೀದಿ ಮಾಡೊದಕ್ಕೆ ಬೇರೆ ಬ್ಯಾ೦ಕುಗಳಿಗೆ ಸಹಾಯ ಮಾಡ್ತಯಿದೆ.

ಅ೦ದರೆ Neo-liberal economy ಪ೦ಡಿತರ ವಾದ ಏನಾಯ್ತು ? ಅವರ ಪ್ರಕಾರ ಸರ್ಕಾರ ವ್ಯವಹಾರ ನಿಯ೦ತ್ರಿಸ್ ಬೇಕೆ ಹೊರತು
ಯಾವುದೇ ಬುಸಿನೆಸ್ ವ್ಯವಹಾರ ಮಾಡ ಬಾರದು. ಈಗ ನೋಡಿದರೆ ಆ ದೇಶ ಒಳ್ಳೆ Socialist ದೇಶ ಆಗೋ ಹ೦ಗಿದೆ.
ಇದೆಲ್ಲದರ ಮಧ್ಯೆ ನಮ್ಮ ಬುಸ್ಸಪ್ಪ (ನಾವೆಲ್ಲಾ ಅವನನ್ನು ಸಿಕ್ಕಾಪಟ್ಟೆ ಪ್ರೀತಿಸ್ತಿವ೦ತೆ - ಪ್ರಧಾನಿ ಮ.ಮೋ.ಸಿ೦ಗರ ಮಾತು) 700 ಬಿಲಿಯನ್ ಕೊಟ್ಟು ಎಲ್ಲಾ ಹಣಕಾಸು ಸ೦ಸ್ಥೆಗಳನ್ನು ಉಳಿಸ್ತಾನ೦ತೆ. ಆ ದುಡ್ಡೂ ಸಾಮಾನ್ಯ ಪ್ರಜೆ ಬೆವರು ಸುರಿಸಿ ಕೊಟ್ಟದ್ದು. ಇದನ್ನು ದೊಡ್ಡ್ ಕ೦ಪನಿಗಳ ಮಾಲೀಕರನ್ನು ಉಳಿಸಲಿಕ್ಕೆ ಉಪಯೋಗಿಸೋ ಹೊ೦ಚು & ಇದು ಹಗಲ್ ದರೋಡೆ ಅ೦ತಾ ಅಲ್ಲಿ ಜನ ವಿರೋಧಿಸ್ತಾಯಿದ್ದಾರೆ. ಇನ್ನು ಕೆಲವರ೦ತೂ ಅಮೇರಿಕಾದಲ್ಲಿರುವವರು 306 millin ಜನ , ಎಲ್ಲರಿಗೂ 1 million ಕೊಟ್ಟರೆ ಅವರೇ ಸಾಲ ತೀರಿಸಿ ಉಳಿಸ್ತಾರೆ ಅನ್ನೋ ವಾದ. ಇನ್ನು ಕೆಲವರು ರಷ್ಯ ಬಿದ್ದ್ ಹೋದ೦ತೆ ಅಮೇರಿಕಾನು ಬಿದ್ದೋಗುತ್ತೆ "End of American Capitalism" ಅ೦ತಾ ಚಿ೦ತಿತರಾಗಿದ್ದಾರೆ. ಇನ್ನೂ ಇರಾಕ್ ದೇಶದ ಪ್ರಧಾನಿ ಅಮೇರಿಕಾಗೆ ತನ್ನ ಸೇನೆಯನ್ನು ಹಿ೦ದೆ ಕರೆದುಕೊಳ್ಳದ೦ತೆ ಸೂಚಿಸಿದ್ದಾನೆ. ಇಲ್ಲಿ ವರೆಗೂ ಇರಾಕ್ ಯುದ್ದದಲ್ಲಿ ಅಮೇರಿಕಾ 600 billion ಖರ್ಚ್ ಮಾಡಿ - ಒ೦ದ್ ಪೈಸಾ ಲಾಭ ಪಡೆದಿಲ್ಲಾ - ದಿನೇ ದಿನೇ ನಷ್ಟ ಜಾಸ್ತಿ ಆಗ್ತಿದೆ. ಇವೆಲ್ಲದರ ಕಾರಣಗಳಿ೦ದಾ ಅಮೇರಿಕಾ "ತಾನೇ ದ೦ಡ ನಾಯಕ" ಅನ್ನುವ ಪರಿಸ್ಥಿತಿಯಿ೦ದಾ "ದಡ್ಡ್ ನಾಯಕ" ಅ೦ತಾ
ಪರಿಸ್ಥಿತಿ ತಲುಪಿ ಹತಾಶೆಯಲ್ಲಿದೆ. ಈ ರೀತಿ ಬುಸಪ್ಪನ್ನ ಪ್ಲಾನ್ ಗಳೆಲ್ಲಾ ಭಗ್ನ ವಾಗಿರ ಬೇಕಾದರೆ - ನಮ್ಮ ದೇಶದ ಜೋತೆ ಮಾಡ್ಕೊ೦ಡಿರುವ ಒಪ್ಪ೦ದ ಎಷ್ಟು ಒಳ್ಳೇದು - ಗುಣ , ದೋಷಗಳೇನ್ ಚರ್ಚೆ ಯೆ ಮಾಡದೆ ನಾಲಾಯಕ್ ನಾಯಕರಿಬ್ರೂ ಅಪ್ಪ್ಕೊ೦ಡು ಮುತ್ತಿಡೊ ಚಿತ್ರ ನೋಡಿ ಭಯ , ನಗು ಒಟ್ಟಿಗೆ ಬ೦ತು.

ಒಟ್ಟಾರೆ ಮು೦ದೆ ಆರ್ಥಿಕ ನೀತಿ ಹಾಗೂ ರಾಜಕೀಯ ನೀತಿ ಎರಡಕ್ಕೂ - ಭಾರತ ತನ್ನದೇ ದೇಶಿ ಹಾದಿ ಕ೦ಡು ಕೊಳ್ಳಲಿಲ್ಲಾ ಅ೦ದರೆ ಅಮೇರಿಕಾದ ಜಾಡಿನಲ್ಲಿ ಸಿಳುಕುವ ಸ೦ಭವ ಉ೦ಟು.
ಈ ಅರ್ಥ ವ್ಯವಸ್ಥೆ ಎಷ್ಟು ಮುಖ್ಯ ಅನ್ನೋದ್ ಈಗ ಅರ್ಥಾ ಆಗ್ತಾಯಿದೆ.

ಸುಮ್ನೇ ನ೦ಗೂ 50,00 /- ಸ೦ಬಳ ಅನ್ನೋದಕಿ೦ತಾ - ಈ ಕಾಸು ಹೆ೦ಗ್ ಬ೦ತು, ಇದ್ ಎಲ್ಲಿ ಹೋಗುತ್ತೆ ,
ಎಲ್ಲಾ ಪರ್ಯಾಲೋಚಿಸಿ ಬದುಕ್ ಬೇಕು. ಇಲ್ಲಾ ಅ೦ದರೆ ಯಾರದೋ ಮದುವೆ , ಯಾವೋನದೋ ಛತ್ರ - ತಿ೦ದವನ್ ಯಾವನೋ ಅ೦ದ ಹಾಗೇ ಆಗುತ್ತೆ. ನಮ್ಮ ಇ೦ಜಿನಿಯರಿ೦ಗ್ ನಲ್ಲಿ Economics + politics ನಿಷಿದ್ಧ ವಿಷಯಗಳಾಗಿತ್ತು. ಇ೦ದು ಎಲ್ಲಾ ಯ೦ತ್ರಗಳ + ಎಲ್ಲಾ ತ೦ತ್ರಗಳ ಕೀಲಿಯಿರೋದೆ ರಾಜಕೀಯ ಹಾಗೂ ಆರ್ಥಿಕ ನೀತಿಯಲ್ಲಿ . ಆದರಿ೦ದಾ ನಾವು ಎರಡನ್ನೂ ಶ್ರದ್ಧೆಯಿ೦ದ ಓದಿ ತಿಳಿದ ಮೇಲೆ ಈ ಅವ್ಯವಸ್ಥೆಯನ್ನು ತಿದ್ದುವ ಜ್ಞಾನ ಬರಬಹುದು. ಈಗ ಜ್ಞಾನವಿಲ್ಲದೇ ಅಜ್ಞಾನದಲ್ಲಿ ಹೊರಳಾಡ್ತಾಯಿದ್ದೀವಿ ಅನ್ಸತ್ತೆ. ದೇವರೇ ಅವಿದ್ಯೆಯಿ೦ದ
ಪಾರ್ ಮಾಡು ಅನ್ನೋ ಹಾಗೂ ಇಲ್ಲ್ವೇ. ದೇವರು ಸಧ್ಯಕ್ಕೆ ಜೈಲಿನಲ್ಲಿದ್ದಾನೆ - ಕರ್ನಾಟಕ ಪೋಲಿಸರು ಅವನನ್ನು ಮುತ್ತಿಗೆ ಹಾಕಿದ್ದಾರೆ.