ಅರಲ್/ಅರಳ್

ಅರಲ್/ಅರಳ್

Comments

ಬರಹ

ಅರಲ್(ಕ್ರಿಯಾಪದ)=ವಿಕಾಸವಾಗು, ದೊಡ್ದದಾಗು. ಕೇಶಿರಾಜನ ಪ್ರಕಾರ ಲಾಂತ. ಆದರೆ ಹೊಸಗನ್ನಡದಲ್ಲಿ ಳಾಂತ.
ಭೂತಕೃದ್ವಾಚಿ: ಅರಲ್ದ/ಅರಳ್ದ/ಅರಲಿ/ಅರಳಿ
ಭವಿಷ್ಯತ್ಕೃದ್ವಾಚಿ: ಅರಲ್ವ/ಅರಳ್ವ/ಅರಲುವ/ಅರಳುವ

ಅರಲ್/ಅರಳ್ (ನಾಮಪದ)= ಹೂವು, ಭತ್ತ, ರಾಗಿ, ಜೋಳ ಮುಂತಾದುವನ್ನು ಹೆಚ್ಚಿನ ಶಾಖದಲ್ಲಿ ಕಾಯಿಸಿದಾಗ ವಿಕಾಸವಾದ ತಿನ್ನುವ ಪದಾರ್ಥ.
ಮಂಡರಳು=ಒದ್ದೆ ಮಾಡಿದ ಬತ್ತವನ್ನು ಭಟ್ಟಿಯಲ್ಲಿ ಕಾಯಿಸಿದಾಗ ವಿಕಾಸವಾದ ತಿನ್ನುವ ಪದಾರ್ಥ. ಅದಕ್ಕೆ ಮಂಡಕ್ಕಿ ಎಂತಲೂ ಮೈಸೂರು ಹಾಗೂ ದಕ್ಷಿಣ ಕರ್ಣಾಟಕದಲ್ಲಿ ಚುರುಮುಱಿ ಎಂತಲೂ ಕರೆಯುತ್ತಾರೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet