ಅಲೆಗ್ಸಾಂಡರ್ ನ ಕೊನೆಯ ಆಸೆ

ಅಲೆಗ್ಸಾಂಡರ್ ನ ಕೊನೆಯ ಆಸೆ

ಬರಹ

ಪ್ರಪಂಚವನ್ನೇ ಗೆಲ್ಲಬೇಕೆಂಬ ಮಹಾದಾಕಾಂಕ್ಷೆಯಿಂದ ಹಲವು ದಂಡಯಾತ್ರೆಗಳನ್ನು ಕೈಗೊಂಡ ಅಲೆಗ್ಸಾಂಡರ್ ತನ್ನ ಅಂತಿಮ ದಂಡಯಾತ್ರೆಯ ಸಂದಭ೯ದಲ್ಲಿ ತಾನು ಕೈಗೊಂಡ ಯುದ್ದಗಳಿಂದ ಪ್ರಾಣ ಕಳೆದುಕೊಂಡ ಸಾವಿರಾರು ಕುಟುಂಬಗಳ ವಿಧವೆಯರು, ಮಕ್ಕಳ ಆಕ್ರಂಧನ, ಸಾವು ನೋವಿನಿಂದ ಅಲೆಗ್ಸಾಂಡರನ ಮನಃ ಪರಿವತ೯ನೆಯಾಗುತ್ತದೆ. ಆತ ತನ್ನ ಪರಿವಾರದವರೊಡನೆ ಸಮಾಲೋಚಿಸಿ ತನ್ನ ಮನದ ಮರಣ ಇಚ್ಛೆ (Will) ಯನ್ನು ಹೀಗೆ ವ್ಯಕ್ತಪಡಿಸುತ್ತಾನೆ. ಅದೇನೆಂದರೆ:--

“ಈ ಅಲೆಗ್ಸಾಂಡರ್ ನ ಸಂಕುಚಿತ -- ಸ್ವಾಥ೯ತೆಯಿಂದ ಗ್ರೀಕ್ ನ ಜನತೆ ತಂದೆ-ತಾಯಿ ಕಳೆದುಕೊಂಡು ಅನಾಥರಾದ ತಬ್ಬಲಿಗಳೆಷ್ಟೋ! ಈ ಚಕ್ರವತಿ೯ಯ ದುರಾಸೆಯ ಖಡ್ಗಕ್ಕೆ ಬಲಿಯಾದ ರಾಜರುಗಳೆಷ್ಟೋ, ಧನ-ಕನಕಗಳನ್ನು ಕಳೆದುಕೊಂಡು ನಿಗ೯ತಿಕರಾದವರೆಷ್ಟೋ ಆದರೆ ಈ ಚಕ್ರವತಿ೯ ಅಲೆಗ್ಸಾಂಡರ್ ತನ್ನ ಸಾವಿನ ನಂತರ ತನ್ನ ಜೊತೆಯಲ್ಲಿ ಏನನ್ನೂ, ಯಾವ ಸಂಪತ್ತನ್ನು ಕೊಂಡು ಹೋಗಿಲ್ಲವೆಂಬುದು ಈ ಮಾನವ ಜನಾಂಗವಿರುವವರೆಗೂ ಗೊತ್ತಾಗಬೇಕು ಹಾಗೆ ಗೊತ್ತಾಗಬೇಕಾದರೆ ನನ್ನ ಮರಣದ ನಂತರ ನನ್ನ ಎರಡು ಕೈಗಳು ಜನತೆಗೆ ಗೊತ್ತಾಗುವಂತೆ ಮೇಲಿರಿಸಿ ನನ್ನ ದೇಹವನ್ನು ಮಾತ್ರ ಮಣ್ಣು ಮಾಡಿ ಎಂಬುದಾಗಿ ತನ್ನ ಕೊನೆಯ ಇಚ್ಛೆಯನ್ನು ವ್ಯಕ್ತಪಡಿಸುತ್ತಾನೆ. ಆತನ ಇಚ್ಛೆಯಂತೆ ಕೈಯನ್ನು ಮೇಲಿರಿಸಿ ಬರೀ ದೇಹವನ್ನು ಮಾತ್ರ ಮಣ್ಣು ಮಾಡಲಾಯಿತಂತೆ ಇದನ್ನೇ ಮನಃಸಾಕ್ಷಿ ಆತ್ಮವಿಮಷೆ೯, ಸಾಕ್ಷಾತ್ಕಾರ ಎನ್ನುವುದು. ಅಂದಿನ ಚಕ್ರವತಿ೯ ಎಲ್ಲಿ, ಇಂದಿನ ಬ್ರಷ್ಟ ರಾಜಕಾರಿಣಿ ಎಲ್ಲಿ ಎತ್ತಂದೆತ್ತಣ ಸಂಬಂಧ.