ಅಲ್ಲಮನಿಗೆ...

ಅಲ್ಲಮನಿಗೆ...

ಬರಹ

ಅಲ್ಲ ಮತ್ತೆ ಮತ್ತೆ ಕಾಡಿದರೂ ..
ನೆನಪಾಗಲೊಲ್ಲದಲ್ಲ ; ಅಲ್ಲಮ..
ಕಾರು ಬಾ೦ಬುಗಳ ಸ್ಪೋಟದ
ಹೊಗೆಯ ಬೆ೦ಕಿ ಆರಲೊಲ್ಲದು;
ನಕ್ಸಲೀಯರ ಪಡೆ ಬಿರುಕು ಸ೦ಧಿ
ಯೊಳಗೆಲ್ಲೋ.. ಕಣ್ಣು ಕಿರಿದಾಗಿಸಿ..
ನೋಟ ಹರಿಸಿ ದಿಟ್ಟಿಸಿ ದಿಗ೦ತದೂರ
ದಾಚೆಯ ಸ೦ದುಗೊ೦ದಿಗಳು ಒ೦ದೊ೦ದಾಗಿ
ಮು೦ಬರುವ ದಿನ ದಾರಿ ಕಾಯಲೊಲ್ಲದು..

ಅಲ್ಲ ಮತ್ತೆ ಮತ್ತೆ ಕಾಡಿದರೂ..
ಮರೆಯಾಗಲೊಲ್ಲದು.. ಓ..ಅಲ್ಲಮ..
ಅಸ್ಸಾ೦-ಬಿಹಾರಿ, ತುಳುವ-ಕನ್ನಡಿಗ
ಹಿ೦ದೂ-ಮುಸ್ಲಿ೦ರೆಲ್ಲರೊಳಗೊ೦ದಾಗಿರುವ
ಒಡಲ ನೆತ್ತರ ಬಣ್ಣ ಕರಿದು-ಬಿಳಿದಾಗಿರಲು
ಮಾನವೀಯತೆಯ ನೆಲದೊಳಗೆ ಕಿಚ್ಚ
ಹಚ್ಚಬೇಡೆ೦ದರೂ..

ಕ್ರೌರ್ಯ-ಪೈಶಾಚಿಕ ಮನದ ಮಾತು-
ಮಾತುಗಳ ದಿಟ್ಟಿ -ದಿಟ್ಟಿಸಿ ನೋಡಿದರೂ
ಅಲ್ಲ.. ಮತ್ತೆ ಮತ್ತೆ ಕಾಡಿದರೂ.. ನೆನಪಾಗಲೊಲ್ಲದು..
ಮರೆಯಾಗಲೊಲ್ಲದು; ಕಾಡುವ
ನಿರಾಶೆ-ಬೆ೦ಕಿ ಪರಿಮಳದ ಬುತ್ತಿ..