ಆಗ್ರಾ ಶಹರಿನ ಬಲಿಷ್ಠ ಕೆಂಪು ಕೋಟೆ

ಆಗ್ರಾ ಶಹರಿನ ಬಲಿಷ್ಠ ಕೆಂಪು ಕೋಟೆ

೨೦೧೨ ರ, ಎಪ್ರಿಲ್ ತಿಂಗಳಿನಲ್ಲಿ ನಾನು ಮತ್ತು ಪರಿವಾರ ಬೆನಾರೆಸ್, ಆಗ್ರಾ, ರಾಮಜನ್ಮಭೂಮಿ, ತ್ರಿವೇಣಿ ಸಂಗಮ ಮೊದಲಾದ ಸ್ಥಳಗಳನ್ನು ನೋಡಲು ಟ್ರಾವೆಲ್ಸ್ ಕಂಪೆನಿಯ  ಬಸ್ ನಲ್ಲಿ ಹೊಗಿಬಮ್ದೆವು. ಆಗ,  ಆಗ್ರಾಕ್ಕೆ ಹೋದಾಗ, ನಾವು ಕಂಡ ಮೊಘಲರ ಕೆಂಪು ಕೋಟೆ, ದೆಹಲಿಯ ಲಾಲ್ ಕಿಲದ ತರಹವೇ ಇತ್ತು. ಭರ್ಜರಿ ಬುರುಜುಗಳು, ದಪ್ಪವಾದ ಗೋಡೆ, ಭಾರಿ ಭಾರಿ ಬಾಗಿಲುಗಳು, ಮತ್ತು ಕೆಂಪು ಬಣ್ಣದ ಮುಖ ದ್ವಾರಗಳಿಗೆ ಬಿಳಿಯ ಅಮೃತಶಿಲೆಯ ಹೂವಿನ ತರಹದ ಚಿತ್ತಾರ. ಅಮೃತ ಶಿಲೆಯ ಮೇಲೆ ಬಣ್ಣ ಬಣ್ಣದ ಹರಳುಗಳ ಅಥವಾ ಕಲ್ಲುಗಳನ್ನು ಹೊಂದಿಸಿ, ಅಂಟಿಸುವ ಕಾರಿಗರಿ, ಬಹುಶಃ ಇಟಲಿ ದೇಶದ ವಿಶಿಷ್ಠ  ಕಲೆಯೆಂದು ಗುರುತಿಸಲ್ಪಟ್ಟಿದೆ. ಅದೇ ತರಹ, ಮರದ ಬಾಗಿಲುಗಳ ಆಕಾರ, ಕೆತ್ತನೆಕೆಲಸ ಹಿಂದು ಶಿಲ್ಪಶಾಸ್ತ್ರದ  ನಮೂನೆಗಳು, ಸುಂದರವಾಗಿ ಅಳವಡಿಸಲ್ಪತ್ತಿವೆ. ರಾಜಾಸ್ಥಾನದ ಬಣ್ಣ ಬಣ್ಣದ ಕಲ್ಲುಗಳ ಸೊಬಗು ಅವರ್ಣನೀಯ !  ಶ್ಯಾಂಡ್ಲಿಯರ್ ಗಳು, ಯುರೋಪ್ ದೇಶದಿಂದ  ಆಮದುಮಾಡಿಕೊಂಡವುಗಳು  !

 

ಮುಸ್ಲಿಂ ಶಿಲ್ಪಶಾಸ್ತ್ರ, ತನ್ನದೇ ಆದ ವಿಶೇಷ ಶೈಲಿಯನ್ನು ಹೊಂದಿದೆ. ಭವ್ಯವಾಗಿದೆ ಸಹಿತ ..

 

ಪರ್ಶಿಯನ್, ಮತ್ತು ಉರ್ದು ಅಕ್ಷರಗಳನ್ನು ಉಪಯೋಗಿಸಿ ಹೆಣೆದ ಸುಂದರ ಕೆತ್ತನೆಕೆಲಸಗಳು  ನಮಗೆ ತಿಳಿಯದೆ ಹೋದರೂ, ಅವೆಲ್ಲ ಒಂದೆ ಸಮನಾಗಿದ್ದು, ಅವನ್ನು ನಿರ್ಮಿಸಿದ  ಕಾರಿಗರ್ ಗಳ ಕುಶಲ ಕಲೆಗಾರಿಕೆಗೆ, ನೈಪುಣ್ಯತೆಗೆ ಒಂದು ಅದ್ಭುತ  ಉದಾಹರಣೆಯ ರೂಪದಲ್ಲಿವೆ.