'ಆಟೋಪಿಯ' -ಡಿಸ್ನಿಲ್ಯಾಂಡ್ ನ ಚಿಣ್ಣರ, ರೇಸ್ ಕಾರ್, ಆಟೋಟ !

'ಆಟೋಪಿಯ' -ಡಿಸ್ನಿಲ್ಯಾಂಡ್ ನ ಚಿಣ್ಣರ, ರೇಸ್ ಕಾರ್, ಆಟೋಟ !

ಬರಹ

ಅಮ್ರಿಕದಾಗ, (ಕಿವ್ಯಾಗ್) ಕೇಳಿದ್ದು, (ಕಣ್ಣಾಗ್) ಕಂಡಿದ್ದು ! (http://shyanubhogaru-davanagere.blogspot.com)- ಇದು ನನ್ನ ಬ್ಲಾಗು.

ಅಮೆರಿಕಕ್ಕೆ ಕಾಲಿಟ್ಟಮೇಲೆ ಬರೆಯಲು ಆರಂಭಿಸಿದ ಕೆಲವು ನನ್ನ ಅನುಭವಗಳು. ಅವೇ ಹೇಳುವಂತೆ , ’ಕಿವ್ಯಾಗ್) ಕೇಳಿದ್ದು, ಕಣ್ಣಾಗ್ ಕಂಡಿದ್ದು !ಅಂತಾರಲ್ಲ ಹಾಗೆ. ’ಪಂಪಾಯಾತ್ರೆ,’ ಯ ಕಾಲದಿಂದ, ಈಗಿನವರೆಗೆ, ಅಂದರೆ ’ಅಮ್ರಿಕದಾಗ, (ಕಿವ್ಯಾಗ್) ಕೇಳಿದ್ದು, (ಕಣ್ಣಾಗ್) ಕಂಡಿದ್ದು ! - ಜನ ವಿದೇಶಕ್ಕೆ ಹೋದಾಗ, ಅಥವ ಬೇರೆಜಾಗಕ್ಕೆ ಹೋದಾಗ ತಮ್ಮ ಅನುಭವಗಳನ್ನು ಬರೆದು, ಬೇರೆಯವರೊದನೆ ಪುಸ್ತಕರೂಪಗಳಲ್ಲಿ ಹಂಚಿಕೊಂಡಿದ್ದಾರೆ. ವಿ.ಸಿ. ಯವರಂತ ಮಹಾಪ್ರಾಜ್ಞರು, ಅನುಭವಿಗಳು, ಅಗಾಧ-ಪಂಡಿತರೂ ಹೇಳಿರೋದನ್ನು ಗಮನಿಸಿದರೆ, ಅವು ಅಲ್ಲಿ, ಅಲ್ಲಲ್ಲಿ ಕಂಡ ವಿಷಯಗಳೇ ! ಮಾಡುವ ನಿರೂಪಣೆ, ಅವರ ಹಿಂದಿರುವ ಓದಿನ ತಿಳುವಳಿಕೆಯ ಕಣಜಗಳ ಉಪಯೋಗ, ಅವರದೇ ಆದ, ಅಗಾಧ ಸಾಹಿತ್ಯ ಕೃಷಿಗಳನ್ನು ಬಿಟ್ಟರೆ, ಬೇರೆ ಎಲ್ಲ ಸಾಮಾನ್ಯವೇ ಎಂಬ ನಂಬಿಕೆ ನನ್ನದು. ಅವರೆಲ್ಲಾ ಸಾಮಾನ್ಯವಾದ ಸನ್ನಿವೇಷಗಳನ್ನು ಅಸಮಾನ್ಯವಾದ ರೀತಿಯಲ್ಲಿ ಬಣ್ಣಿಸಲು ಸಶಕ್ತರಾದ ನಿಷ್ಣಾತರು !

ನಾನು ಇಲ್ಲಿ ಹೇಳಬಯಸುತ್ತಿರುವುದು, ಬಹಳಸಮಯದಿಂದ ಅನೇಕರು ಈ ತರಹದ ತಮ್ಮ ಪ್ರವಾಸಗಳನುಭವಗಳ ವರ್ಣನೆಗಳನ್ನು ಮಾಡುತ್ತಾ ಬಂದಿದ್ದಾರೆ. ಎ. ಎನ್. ಮೂರ್ತಿರಾಯರು ಈ ಕ್ಷೇತ್ರದಲ್ಲಿ ಅಸಮಾನ್ಯರು ! ಅವರು ತಮ್ಮ ಕಾಲದಲ್ಲಿ ಮೈಸೂರ್ ಬಿಟ್ಟು ಬೆಂಗಳೂರಿಗೆ ಬಂದ ಹಿನ್ನೆಲೆಗಳನ್ನು ರಸವತ್ತಾಗಿ ವರ್ಣಿಸಿರುವುದನ್ನು, ಅವರ ಲಲಿತ ಪ್ರಬಂಧಗಳಲ್ಲಿ ನಾವು ಕಾಣುತ್ತೇವೆ. ಅವರ, ’ ಅಪರ ವಯಸ್ಕನ ಅಮೆರಿಕಾ ಯಾತ್ರೆ”, ಅತ್ಯುತ್ತಮ ಬರಹಗಳಲ್ಲೊ೦ದು. ನೇಮೀಚಂದ್ರರಿಂದ ಹಿಡಿದು, ಹಲವಾರು ದೊಡ್ಡ, ಅತಿದೊಡ್ಡ, ಹಾಗೂ ಸಾಮನ್ಯಲೇಖಕರು ತಮ್ಮ ಪ್ರವಾಸಕಥನಗಳನ್ನು ಮಂಡಿಸುತ್ತಾ ಬಂದಿದ್ದಾರೆ. ನನ್ನ ಕೆಲವು ಲೇಖನಗಳು ನನ್ನ ಅಲ್ಪಜ್ಞಾನದ ಪರಿಮಿತಿಯಲ್ಲೇ, ನನಗೆ ದೇವರು ಅನುಗ್ರಹಿಸಿದ ಒಂದು ಸದವಕಾಶವನ್ನು ಒಂದು ’ಡೈರಿ, ’ ಯ ತರಹ, ಬರೆದಿಟ್ಟೆದ್ದೆ. ಅದನ್ನೇ ಇ-ಪುಸ್ತಕ- ಅಥವಾ ಸಂಪದದ ಸೈಟ್ ನಲ್ಲಿ ಆಗಾಗ ಬರೆಯುತ್ತಾ ಬಂದಿದ್ದೇನೆ. ಇನ್ನು ಮೇಲೆ ನನ್ನ ಅನಿಸಿಕೆಗಳೆಲ್ಲಾ, "ಅಮ್ರಿಕದಾಗ, (ಕಿವ್ಯಾಗ್) ಕೇಳಿದ್ದು, (ಕಣ್ಣಾಗ್) ಕಂಡಿದ್ದು "! –ರ ಆಯ್ದ ಭಾಗಗಳೇ !

ಈ ಪುಟ್ಟ-ಪುಟ್ಟ ಬಣ್ಣದ ರೇಸ್ ಕಾರಿನಲ್ಲಿ ಡ್ರೈವ್ ಮಾಡೊ ಮಜ, ನಿಮಗೆ ಬೇರೆ-ಎಲ್ಲೂ ಸಿಗಲ್ಲ. ಕಾರ್ ಗಳು ಅತಿ ಆಧುನಿಕವಾಗಿದ್ದು ಸಲಕರಣೆಗಳು ಸೊಗಸಾಗಿದ್ದವು; ನಮ್ಮ ರೇಸ್ ಕಾರನ್ನು ೨ ಮೈಲಿ ರೇಸ್ ಟ್ರ್ಯಾಕ್ ನಲ್ಲಿ (To-morrow Land) ವಿಭಾಗದಲ್ಲಿ ಡ್ರೈವ್ ಮಾಡಬಹುದು. ರಸ್ತೆಯನ್ನು ಬಹಳ ಚೆನ್ನಾಗಿ, ಆಕರ್ಷಕವಾಗಿ ನಿರ್ಮಿಸಿದ್ದರು ! ಈ ತರಹದ ಅತ್ಯುತ್ತಮ ಡ್ರೈವಿಂಗ್ ಸೌಕರ್ಯ, ಕೇವಲ ಡಿಸ್ನಿಲ್ಯಾಂಡ್ ನಲ್ಲಿ ಮಾತ್ರ, ಯೆನ್ನುವ ವಿಚಾರ ನನಗೆ ಹೇಳಿದವರು, ಅನೇಕರು !

ವಾಲ್ಟ್ ಡಿಸ್ನಿಯವರು, ಏನುಮಾಡಿದರೂ ಅಚ್ಚುಕಟ್ಟು ಮತ್ತು ಅದರಲ್ಲಿ ಹೊಸತನ ಎದ್ದುಕಾಣುವುದನ್ನು ನಾವೆಲ್ಲಾಕಾಣಬಹುದು. ೧ ವರ್ಷಕ್ಕಿಂತ ಹೆಚ್ಚಿನಮಕ್ಕಳು ಇದರಲ್ಲಿ ಕೂತು ದೊಡ್ಡವರಜೊತೆ ಹೋಗಬಹುದು. ಕಾರ್ ನಡೆಸಲು, ಒಳ್ಳೆ ಆರೋಗ್ಯದ ಅವಶ್ಯಕತೆಯಿದೆ. ಹೃದಯಾಘಾತವಾದವರಿಗೆ, ಬೆನ್ನುನೋವು, ಕುತ್ತಿಗೆನೋವಿನಿಂದ ನರಳುವವರಿಗೆ, ಬಸುರಿಹೆಂಗಸರು, ಅತಿ-ವೃದ್ಧರಿಗೆ ಇದರಲ್ಲಿ ಅನುಮತಿಯಿಲ್ಲ. ಕೆಲವೊಂದು ಆಟದ ಪರಿಕರಗಳು ಎಷ್ಟು ಸುಲಭ; ಅದರೆಲ್ಲೇನಿದೆ, ಎಂದು ನಮಗನ್ನಿಸುವುದು ಸ್ವಾಭಾವಿಕ. ಆದರೂ ಅವೆಲ್ಲಾ ನಾವು ಎಣಿಸಿದಷ್ಟು ಸರಳ ಆಟಿಕೆಗಳಲ್ಲ !

ಉದಾಹರಣೆಗೆ, ಸ್ಪೋರ್ಟ್ಸ್ ಕಾರ್ ಡ್ರೈವಿಂಗ್ ನ್ನೇ ತೆಗೆದುಕೊಳ್ಳೋಣ ! ಇದರಲ್ಲಿ ಯಾನಮಾಡುವ ಮೊದಲು ನಾವು ದೊಡ್ಡ ಪುಟ್ಟಿಯಾಕಾರದ ಬಾಕ್ಸ್ ನಂತಹ ಗಾಡಿಗಳಲ್ಲಿ ಕೂತು ದುರ್ಗಮವಾದ ಗುಹೆ, ಕಾಡು, ನದಿ, ಬೆಟ್ಟ, ಗವಿ, ಮುಂತಾದ ಪ್ರದೇಶಗಳ ಮೂಲಕ ಗಡ-ಗಡ ಎಂದು ತಟ್ಟಾಡುತ್ತಾ ಅಲ್ಲಾಡುತ್ತಾ, ಧಾವಿಸುವ ಅನುಭವ ಹೊಸತರಹದ್ದು. ಆ ತತ್ವವನ್ನೇ ಆಧರಿಸಿ, ಅನೇಕ ಹೊಸ-ಹೊಸ ಆಟಿಕೆಗಳ ರೂಪದಲ್ಲಿ ಸುಧಾರಿತ ಗಾಡಿಗಳನ್ನು ಅಳವಡಿಸಿ ಆಯೋಜಿಸಿ, ಇನ್ನೂ ದುರ್ಗಮವಾದ ಕಾಡು-ಮೇಡುಗಳ ಮುಖಾಂತರ ಹೆಚ್ಚಿನವೇಗದಲ್ಲಿ ಸುಧಾರಿತ ವಾಹನಗಳಲ್ಲಿ ನಿಯಂತ್ರಿಸಿದ ಯಾನದ ಮಜವೇ ಬೇರೆ.

ಹೀಗೆ ಮುಂದುವರೆದು, ಆಧುನೀಕರಿಸಿದ, ಇಬ್ಬರು ಕೂಡುವ ಮೋಟರ್ ರೇಸ್ ಗಾಡಿಗಳಲ್ಲಿ ತಂದೆಯಾಯಂದಿರು ತಮ್ಮ ಮಕ್ಕಳನ್ನು ಆ ಕಾರ್ ಗಳಲ್ಲಿ ಡ್ರೈವ್ ಮಾಡಿಕೊಂಡು ಕರೆದೊಯ್ಯುವ ಸಡಗರ ನೋಡಿ ಅನುಭವಿಸಬೇಕು ! ನೇರವಾದ ರಸ್ತೆಯನ್ನು ಬಿಟ್ಟು, ವಕ್ರವಕ್ರವಾಗಿ ಡ್ರೈವ್ ಮಾಡುವುದು ನಮಗೆ ಸಿಗುವ ವಿಶೇಷ ಅನುಭವಗಳಲ್ಲೊಂದು ! ನಮಗೆ ಆಕರ್ಶಕ ಡ್ರೈವಿಂಗ್ ಲೈಸೆನ್ಸ್ ನ್ನೂ ಕೊಡುತ್ತಾರೆ. ಮಕ್ಕಳಿಗೆ ಇದು ಬಲು ಖುಷಿ. ಕಬ್ಬಿಣದ ಪಟ್ಟಿಯಮೇಲೆ ಓಡುವ ಈ ಪುಟ್ಟಕಾರು, ಆಕಡೆ, ಈಕಡೆ ಹೋಗದಂತೆ ಸ್ಟೀರಿಂಗ್ ಚಕ್ರವನ್ನು ನಾವು ತಿರುಗಿಸಿ ನಿಯಂತ್ರಿಸಬೇಕು. ಕೆಲವು ಬಾರಿ ಆಯತಪ್ಪಿ ಹಳಿಯಿಂದ ಹೊರಬಂದು ಬಿದ್ದ ಕಾರ್ ಗಳಿಗೇನು ಕಡಿಮೆಯಿಲ್ಲ.

ನಮ್ಮ ಮಗ, ಪ್ರಕಾಶ್, ಹಿಂದಿನಕಾರಿನಲ್ಲಿ. ನಾನು ಅವರಮ್ಮ ಮುಂದೆ; ಹೀಗೆ ನಡೆದಿತ್ತು ನಮ್ಮ ಪಯಣ. ನಾನು ಕರ್ವ್ ನಲ್ಲಿ ವೇಗವಾಗಿ ಹೋದದ್ದರಿಂದ, ದಾರಿ ತಪ್ಪಿ ಬಹಳ ಉದ್ದದ ದಾರಿಯಲ್ಲಿ ಕಾರ್ ಓಡಿಸಬೇಕಾಯಿತು. ನಮ್ಮ ಹಿಂದೆ ಕಾರ್ ನಲ್ಲಿ ಕೂತು ಡ್ರೈವ್ ಮಾಡುತ್ತಿದ್ದ ಪ್ರಕಾಶ್ ಕೂಗಿ, " ಕರ್ವ್ ನಲ್ಲಿ ನಿಧಾನವಾಗಿ ಹೋಗಿ," ಎಂದು ಎಚ್ಚರಿಸಿ ಕೂಗಿದ್ದು, ನಮ್ಮ ಕಿವಿಗೆ ಬೀಳಲಿಲ್ಲ. ನಮ್ಮ ಎಡ-ಬಲಗಳಲ್ಲಿ ವೇಗವಾಗಿ ಕಾರ್ ನಡೆಸುವ ಮಕ್ಕಳು, ಹಾಗೂ ಅವರ ರಕ್ಷಕರನ್ನು ನೋಡುತ್ತಾ ಡ್ರೈವ್ ಮಾಡುವ ಸೊಬಗು ಬಹಳ ಮುದನೀಡಿತು !

(Autopia Presented by Chevron (Opened: July 17, 1955. Completely renovated and debuted on June 29, 2000) FASTPASS Attraction)

-ವೆಂ.