ಆಧುನಿಕ ಚೀನೀ ಸಣ್ಣಕತೆಗಳು
ಸಂಪದ ಸ್ನೇಹಿತರೇ,
ನಿಮ್ಮಲ್ಲಿ ನನ್ನದೊಂದು ವಿಜ್ಞಾಪನೆ. ಅದೇನೆಂದರೆ, ಗೋಪಾಲಕೃಷ್ಣ ಪೈ ಅವರು ಕನ್ನಡಕ್ಕೆ ಅನುವಾದಿಸಿರುವ “ಆಧುನಿಕ ಚೀನೀ ಸಣ್ಣಕತೆಗಳು” ಎಂಬ ಕಥಾಸಂಕಲನವನ್ನು ಹೇಗಾದರು ಸಂಪಾದಿಸಿ, ಅದರ ಸ್ವಾದವನ್ನು ಆಘ್ರಾಣಿಸಬೇಕೆಂದು ಪ್ರೀತಿಯಿಂದ ಆಗ್ರಹಿಸುತ್ತಿದ್ದೇನೆ.
ಪ್ರತಿಯೊಂದು ಕತೆಯೂ ತನ್ನ ಮುಕ್ತಾಯದಲ್ಲಿ ಪ್ರಾರಂಭದ ಸೂಚನೆಯನ್ನು ಕೊಡುತ್ತೆ. ಅದು ಕತೆಗಿರಬಹುದು ಇಲ್ಲವೆ ಓದುಗನ ವಿಚಾರ ಸರಣಿಗಿರಬಹುದು. ನಾನು ಒಂದಂತೂ ಹೇಳಬಲ್ಲೆ, ಸಮಯವನ್ನು ಸಾರ್ಥಕಗೊಳಿಸಿಕೊಂಡ ಮತ್ತು ಸಮ್ಮೋಹನ ವಿದ್ಯೆಗೆ ಬಲಿಯಾಗುವಂತಹ ಬೇರೆ ತರಹದ ನಿರೂಪಣಾ ಕೌಶಲ್ಯವನ್ನು ನೀವೂ ಮೆಚ್ಚಿಯೇ ಮೆಚ್ಚಿತ್ತೀರಿ. ಅಲ್ಲದೆ ಗೋಪಾಲಕೃಷ್ಣ ಪೈ ಅವರು ಕನ್ನಡಕ್ಕೆ ಅಳವಡಿಸಿದ ರೀತಿಗೆ ಮಾರು ಹೋಗಲೆ ಬೇಕು.
ಹೀಗೆ ಹೇಳುತ್ತೇನೆಂದು ತಪ್ಪು ತಿಳಿಯಬೇಡಿ, ನಿಮ್ಮ ಮುಂದೆ ತನ್ನ ಬಗೆಗೆ ಮಾರ್ಕೆಟಿಂಗ್ ಮಾಡಲು ಒತ್ತಾಯಿಸಿದ್ದು ಅದರಲ್ಲಿಯೇ ಇರುವ ಒಂದು ಕತೆ. ಹೌದು. ಅದರ ಹೆಸರು “ಸಾವು ಬದುಕಿನ ನಡುವೆ” ಇಲ್ಲಿ ಅದರ ಕುರಿತು ನಾನು ಹೆಚ್ಚಿಗೆ ಪ್ರಸ್ತಾಪಿಸುವುದಿಲ್ಲ. ಏಕೆಂದರೆ ಕತೆಗಾರನ ಮತ್ತು ಕೇಳುಗನ ನಡುವೆ ಏಕಾಂತದ ಅವಶ್ಯಕತೆ ಇದೆ. ಕತೆ ಹೇಳುವವನಿಗೆ ಯಾರಿಗೆ ಹೇಳುತ್ತಿದ್ದೇನೆ ಎಂಬುದರೆಡೆಗೆ ಗಮನವಿಲ್ಲವಾದ್ದರಿಂದ ಕೇಳುಗನಿಗೂ ಯಾರು ಹೇಳುತ್ತಿದ್ದಾರೆಂಬ ಕುತೂಹಲವಿಲ್ಲ. ಅವರಿಬ್ಬರೂ ತದೇಕ ಚಿತ್ತದಿಂದ ಅವರವರ ಕ್ರೀಯೆಯಲ್ಲಿದ್ದಾರೆ. ಹೀಗಿದ್ದಾಗಲೆ ಅಲ್ಲವೇ, ಕತೆಗೊಂದು ಆತ್ಮ ದೊರುಕುವುದು. ಇರಲಿ ನೀವೂ ಒಮ್ಮೆ ಸಾವು ಬದುಕಿನ ನಡುವಿನ ವಿಹಂಗಮ ನೋಟಕ್ಕೆ ಅಣಿಯಾಗಿ.
...ಸಾವು-ನಾವು-ಬದುಕು