ಆಯುರ್ವೇದ ಮತ್ತು ಪ್ರಾಕೃತ ವಸ್ತು ಸ್ಥಿತಿ

ಆಯುರ್ವೇದ ಮತ್ತು ಪ್ರಾಕೃತ ವಸ್ತು ಸ್ಥಿತಿ

ಬರಹ

ಆಯುರ್ವೇದ ಭಾರತದ ಅಷ್ಟೇ ಅಲ್ಲ ಪ್ರಪಂಚದ ಅತೀ ಪುರಾತನವಾದ ವೈಜ್ಞ್ನಾನಿಕ ವೈದ್ಯ ಪದ್ದತಿಯಾಗಿದ್ದು, ಬಾಹ್ಯ ದಾಳಿಗಿಂತ ಮೊದಲು ಉಚ್ಚ್ರಾಯ ಸ್ಠಿತಿಯಲ್ಲಿತ್ತ್ತು.ಕಾಲಾನಂತರ ರಾಜಾಶ್ರಯದ ಅಭಾವ ಮತ್ತು ರಾಜ ಮಹಾರಾಜರಿಂದ ಆಯುರ್ವೇದದ ಕಡೆಗಣನೆ ಮತ್ತು ಆಯುರ್ವೆದ ಚಿಕಿತ್ಸಕರ ಮೇಲಿನ ಯೋಜಿತ ಶೋಷಣೆ ಮತ್ತು ಶಿಕ್ಷಿತರ ಮತ್ತು ಜನ ಸಾಮಾನ್ಯರ ಅಸಡ್ಡೆ ಆಯುರ್ವೇದ ವೈದ್ಯ ಪದ್ದತಿಯ ಅವನತಿಗೆ ಕಾರಣವಾಗಿದ್ದು ನಮಗೆ ಚರಿತ್ರೆಯ ಪುಟಗಳಲ್ಲಿ ಕಾಣಸಿಗುತ್ತದೆ.
ಆಂಗ್ಲ ವೈದ್ಯ ಪದ್ದತಿಯ ಶಿಸ್ತುಬದ್ದ ಅವತರಣ ಮತ್ತು ಉನ್ನತಿಯ ಹೊರತಾಗಿಯೂ ಆ ಮದ್ದುಗಳಿಂದುಂಟಾಗುವ ಪಾರ್ಶ್ವಪರಿಣಾಮಗಳು ಮತ್ತು ಪುನಃ ಗರಿಗೆದರಿದ ಆಯುರ್ವೇದದತರ್ಕಬದ್ಧ ಅಧ್ಯಯನ ಮತ್ತು ಸಂಶೋಧನೆ ಇಂದು ಆಯುರ್ವೇದವನ್ನು ಮತ್ತೆ ಪ್ರಸ್ತುತವಾಗಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ.
ಇಂದು ೫೦ಕ್ಕೂ ಮಿಕ್ಕಿ ಆಯುರ್ವೇದ ವೈದ್ಯಕೀಯ ಕಾಲೇಜುಗಳು(ಕರ್ನಾಟಕದಲ್ಲೇ) ವೈದ್ಯವಿದ್ಯಾರ್ಥಿಗಳಿಗೆ ಅವಶ್ಯಕ ಬೋಧನೆ ಮತ್ತು ಆಸ್ಪತ್ರೆಗಳಲ್ಲಿ ತರಬೇತಿ ನೀಡಿ ಉತ್ತಮ ವೈದ್ಯರನ್ನು ಸಮಾಜಕ್ಕೆ ಕೊಡುಮಾಡುವಲ್ಲಿ ಕ್ರಿಯಾಶೀಲವಾಗಿವೆ. ಆದರೂ ಸರಕಾರ ಮತ್ತು ಸರಕಾರೇತರೆ ಸಂಸ್ಥೆಗಳ ನಿರ್ಲಕ್ಸ್ಯದಿಂದಾಗಿ ನಿಜಿವಾಗಲೂ ಸಿಗಬೇಕಾದ ಪ್ರಾಧಾನ್ಯತೆ ಸಿಗದೇ ಹೋಗಿದ್ದು ದುರಂತವೇ ಸರಿ.
ಇನ್ನಾದರೂ ಈ ಸಂಸ್ಥೆಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಭಾರತೀಯ ಸಂಸ್ಕ್ರುತಿ ಮತ್ತು ಭಾರತೀಯವೈದ್ಯ ಪರಂಪರೆಯನ್ನು ಉಳಿಸಿ ಬೆಳೆಸುವತ್ತ ತಮ್ಮ ಚಿತ್ತ ಹರಿಸುವುದು ಅನಿವಾರ್ಯ.