ಆರು ವೈರಿಗಳು.
ಬರಹ
ಆರು ವೈರಿಗಳು.
ಕಾಮ ಕ್ರೋಧ ಲೋಭಗಳು
ಮೊದಲ ಮೂರು ವೈರಿಗಳು
ಇದನು ಗೆದ್ದ ನಂತರ
ಮೋಹ ಮದ ಮತ್ಸರ
ಆಶೆಯೆಂಬ ಬೀಜವು
ಕಾಮಗಿಡದ ಮೂಲವು
ಗಿಡದ ನಾಶಕಿಂತಲೂ
ಮೂಲನಾಶ ಶ್ರೇಷ್ಠವು
ಕಾಮ ಪಲಿಸದಾಗ ಬರುವ
ವೈರಿಯೇ ಕ್ರೋಧವು
ಕ್ರೋಧವೂ ನಡೆಯದಾಗ
ಲೋಭ ಪ್ರ-ವೇಶವು.
ಆಶೆ ಕೊಂದ ವ್ಯಕ್ತಿಗೇ
ಭಕ್ತಿ ಕೊಡುವ ಶಕ್ತಿಯಿಂದ
ಕಾಮ ಕ್ರೋಧ ಲೋಭವೆಂಬ
ಶತೃ ನಾಶ ಸುಲಭವು
ನಾಲ್ಕನೆಯ ಶತೃವು
ಮಾಯಾಮೋಹಪಾಶವು
ಮೋಹ ನಾಶ ಶಸ್ತ್ರಗಳು
ಸ್ನೇಹ ಪ್ರೇಮ ಕರುಣೆಗಳು
ಕಂಸ ಜರಾಸಂಧರು
ಮದಕೆ ದಾಸರಾದರು
ಮಾಧವನಾ ದೆಸೆಯಿಂದ
ಜೀವ ಕಳೆದುಕೊಂಡರು
ಕೊನೆಯ ವೈರಿ ಮತ್ಸರ
ಸಹನೆ ಇದಕೆ ಉತ್ತರ
ಬೆಳೆಯಬೇಕು ಎತ್ತರ
ಭಗವಂತನ ಹತ್ತಿರ.
ಅಹೋರಾತ್ರ.