ಆರೋಗ್ಯದಾಯಕ ಅಮಟೆಕಾಯಿ

ಆರೋಗ್ಯದಾಯಕ ಅಮಟೆಕಾಯಿ

ಅಮಟೆ ಆಹಾರಯುಕ್ತ ಔಷಧೀಯ ಗುಣವುಳ್ಳ ಮರ. ಅಮಟೆಯಲ್ಲಿ ಎರಡು ವಿಧ ಹುಳಿ ಅಮಟೆ ಮತ್ತು ಸಿಹಿ ಅಮಟೆ. ಇದರ ಕಾಯಿ ಅಡಿಗೆಯಲ್ಲಿ ಉಪಯೋಗ. ಇದರ ಕಾಯಿಯಿಂದ ತೊಕ್ಕು, ತಂಬುಳಿ, ಸಾರು, ಚಿತ್ರಾನ್ನ, ಶುಂಠಿ ಉಪ್ಪಿನಕಾಯಿ, ಗೊಜ್ಜು, ಹಣ್ಣಿನಿಂದ ಜ್ಯೂಸ್, ಎಳೆ ಮಿಡಿಯಿಂದ ಉಪ್ಪಿನಕಾಯಿ, ಬೆಳೆದ ಕಾಯಿಯಿಂದ ಉಪ್ಪಿನಕಾಯಿ ಮುಂತಾದವುಗಳನ್ನು ಮಾಡುತ್ತಾರೆ. ಇದರ ಬೇರು ಎಲೆಗಳು ಔಷಧಿ ರೂಪದಲ್ಲಿ ಉಪಯೋಗಿಸುತ್ತಾರೆ.

1) ಇದರ ಚಕ್ಕೆಯನ್ನು ಕಷಾಯ ಮಾಡಿ ಮಜ್ಜಿಗೆಯೊಂದಿಗೆ ಸೇರಿಸಿ ತೆಗೆದುಕೊಳ್ಳುವುದರಿಂದ ಮೂಲವ್ಯಾಧಿ ಗುಣವಾಗುತ್ತದೆ.

2) ಚಕ್ಕೆಯ ಚೂರ್ಣದಿಂದ ಹಲ್ಲು ಉಜ್ಜುವುದರಿಂದ ಹಲ್ಲಿನ ಸಮಸ್ಯೆಗಳು ಗುಣವಾಗುತ್ತದೆ.

3) ಎಲೆಯ ರಸವನ್ನು ನಿಂಬೆರಸದೊಂದಿಗೆ ಬೆರೆಸಿ ತವಾದಲ್ಲಿ ಬೆಚ್ಚಗೆ ಮಾಡಿ ಕಿವಿಯ ಸುತ್ತ ಹಚ್ಚುವುದರಿಂದ ಕಿವಿ ನೋವು ಗುಣವಾಗುತ್ತದೆ.

4) ಎಲೆಯ ರಸದೊಂದಿಗೆ ನಿಂಬೆರಸ ಸೈಂಧವ ಲವಣ ಸೇರಿಸಿ ಬಿಸಿ ಮಾಡಿ ಹಚ್ಚುವುದರಿಂದ ಮಂಡಿ ನೋವು ಮತ್ತು ಬಾವು ಶನವಾಗುತ್ತದೆ.

5) ಬಿಳಿ ಮುಟ್ಟು ಮತ್ತು ಕೆಂಪು ಮುಟ್ಟು ಎರಡರಲ್ಲೂ ಗುಣಪಡಿಸಲು ಇದರ ಚಕ್ಕೆಯನ್ನು ಉಪಯೋಗಿಸುತ್ತಾರೆ.

-ಸುಮನಾ ಮಳಲಗದ್ದೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ