ಆಸೆಯ ದೋಸೆ

ಆಸೆಯ ದೋಸೆ

ಬರಹ

ಆಸೆಯ ದೋಸೆ.

ಮಂಗಳೂರ ನೀರು ದೋಸೆ
ಬೆಂಗಳೂರ ಖಾಲಿ ದೋಸೆ
ಮೈಸೂರ್ ಮಸಾಲೆ ದೋಸೆ

ಸೂರ್ಯನಂತೆ ಬಣ್ಣ ದೋಸೆ
ಚಂದ್ರನ ಪ್ರತಿಬಿಂಬ ದೋಸೆ
ಅಗ್ನಿಯಿಲ್ಲದಿಲ್ಲ ದೋಸೆ

ತಾಯ ನೆನಪು ತರಿಸೊ ದೋಸೆ
ಚಿಕ್ಕಮ್ಮನ ಅವರೆ ದೋಸೆ
ನನ್ನಾಕೆಯ ಬೆಣ್ಣೆ ದೋಸೆ

ಕಾಸಿನಂತೆ ಇರುವ ದೋಸೆ
ಕಾಸು ಕೊಟ್ರೆ ಸಿಗುವ ದೋಸೆ
ಕಾಸು ಮಾಡೊ ಕಸುಬು ದೋಸೆ

ನಾಲಿಗೆಯ ಕುಣಿಸೊ ದೋಸೆ
ಹೊಟ್ಟೆಯನ್ನು ತಣಿಸೊ ದೋಸೆ
ಮಕ್ಕಳ ಪ್ರಿಯ ತಿನಿಸು ದೋಸೆ

ಭಾಷೆಭಾಷೆಗೊಂದು ದೋಸೆ
ದೇಶವಿದೇಶದಲಿ ದೋಸೆ
ಎಂದೂ ಮಾಸದಂತ ದೋಸೆ

ಹಸಿವು ನೀಗೊ ಹೆಸರು ದೋಸೆ
ಮನ ತಣಿಸುವ ಮೊಸರು ದೋಸೆ
ನಮ್ಮೆಲ್ಲರ ಉಸಿರು ದೋಸೆ

ಮನೆಮನೆಯ ತೂತು ದೋಸೆ
ಅರಿವು ಕೊಟ್ಟ ಗುರುವು ದೋಸೆ
ಹರಿಯ ಕೈಯ ಚಕ್ರ ದೋಸೆ.

ಅಹೋರಾತ್ರ.