ಇಂಗಲೀಸನಲ್ಲಿರುವ ಬಿನ್ನಣದ/ವಿಙ್ಞ್ನಾನದ ಬರಹಗಳು ಕನ್ನಡದಲ್ಲಿ ಏಕೆ ಬರೆಯಬೇಕು?

ಇಂಗಲೀಸನಲ್ಲಿರುವ ಬಿನ್ನಣದ/ವಿಙ್ಞ್ನಾನದ ಬರಹಗಳು ಕನ್ನಡದಲ್ಲಿ ಏಕೆ ಬರೆಯಬೇಕು?

ಬರಹ

 [ ಈ ಮಾತಿನ/ಚರ್ಚೆಯ ಗುರಿ/ಉದ್ದೇಶ ಯಾರನ್ನು ನಿಂದಿಸಿ/ಹೀಗಳೆಯುವುದಲ್ಲ. ಕನ್ನಡದ ಬಿನ್ನಣದ ಬರಹಗಳು ಇನ್ನಾದರೂ ಹೆಚ್ಚು ಮಂದಿಯನ್ನು ಮುಟ್ಟಲಿ ಎಂಬ ಒಳ್ಳೆಯ ತೆರೆದ ಮನಸ್ಸಿನಿಂದ ಹಾಕುತ್ತಿದ್ದೇನೆ. ದಯವಿಟ್ಟು ಹೆಚ್ಚಿನ ಅರಿವಿಗೆ ಶಂಕರಬಟ್ಟರ ಹೊತ್ತಗೆಗಳನ್ನು ಓದಿ]

ಶಂಕರಬಟ್ಟರ ಹೊತ್ತಗೆಗಳಲ್ಲಿ ಇದಕ್ಕೆ ಓಸುಗರಗಳನ್ನು ಕೊಟ್ಟಿದ್ದಾರೆ
೧) ಬಿನ್ನಣವನ್ನು ಸಾಮಾನ್ಯ ಮಂದಿಗೆ ಹತ್ತಿರ ತರುವುದು. ಅವರಿಗೆ ಅದರಲ್ಲಿ ಹುರುಪು,ಒಲವು ಮೂಡಿಸುವುದು
೨) ಬಿನ್ನಣದಲ್ಲಿ ಆಗುತ್ತಿರುವ ಹೊಸ ಹೊಸ ಹುಡುಕುಗಳನ್ನು ಮಂದಿಗೆ ತೋರಿಸುವುದು/ಪರಿಚಯಿಸುವುದು.

ಅಂದರೆ ನಾವು ಕನ್ನಡದಲ್ಲಿ ಬರುವ ಬಿನ್ನಣದ ಬರಹಗಳು ಹೆಚ್ಚು ಹೆಚ್ಚು ಮಂದಿಗೆ ತಲುಪಬೇಕು. ಇದರಿಂದ ಹೆಚ್ಚು ಹೆಚ್ಚು ಮಂದಿ ತಮ್ಮ ಅರಿವಿನ/ಙ್ಞಾನದ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು. ಹಾಗಾದರೆ ಈ ಬರಹಗಳು ಆದಶ್ಟು ಸಲೀಸಾಗಿ ತಲೆಗಿಳಿಯಬೇಕು.

ಶಂಕರಬಟ್ಟರು ತಮ್ಮ ' ಕನ್ನಡ ಬರಹವನ್ನು ಸರಿಪಡಿಸೋಣ' ಹೊತ್ತಗೆಯಲ್ಲಿ ಪುಟ ೧೫೯ ಹೀಗೆ ಬರೆದಿದ್ದಾರೆ. ಅವರನ್ನು ಕೋಟ್ ಮಾಡುತ್ತಿದ್ದೇನೆ.

".........ಜೆ.ಆರ್. ಲಕ್ಷ್ಮಣ ರಾವ್ ರವರು ಸಂಪಾದಿಸಿದ 'ವಿಙ್ಞಾನ ಬರವಣಿಗೆ: ಕೆಲವು ಸಮಸ್ಯೆಗಳು' ಎಂಬ ಪುಸ್ತಕದಲ್ಲಿ ವಿಙ್ಞಾನವನ್ನು ಜನಪ್ರಿಯಗೊಳಿಸುವುದಕ್ಕಾಗಿ ಸೂಚಿತವಾಗಿರುವ ಕೆಲವು ವಿಧಾನಗಳನ್ನು ಪರಿಶೀಲಿಸಬಹುದು. ಈ ಪುಸ್ತಕದಲ್ಲಿ ಇಂತಹ ಬರಹಗಳ ವಸ್ತು, ಶೈಲಿ ಮತ್ತು ವಿನ್ಯಾಸಗಳು ಹೇಗಿರಬೇಕೆಂಬುದನ್ನು ವಿವರಿಸುವ ಜಿ.ಟಿ. ನಾರಾಯಣರಾವ್ ಅವರ ಒಂದು ಲೇಖನವಿದೆ. ಈ ಲೇಖನದಲ್ಲಿ ಇಂಗ್ಲಿಶ್ ನ ಕೆಲವು ಆಯ್ದ ಪರಿಚ್ಚೇದಗಳನ್ನು ಅನುವಾದಿಸಿ ತೋರಿಸಲಾಗಿದೆ. ಕೆಲವೊಮ್ಮೆ ನಿಜಕ್ಕೂ ಇದು ಕನ್ನಡ ಬರಹವೇ ಅಥವಾ ಸಂಸ್ಕ್ರುತ ಬರಹವೇ ಎಂಬ ಸಂಶಯಕ್ಕೆಡೆಯಾಗುತ್ತದೆ. ಈ ಲೇಖನದಲ್ಲಿ ಬರುವ ಅನುವಾದಗಳಲ್ಲಿ ಒಂದು ವಾಕ್ಯ ಹೀಗಿದೆ: "ಅಂತರ-ಬ್ರಹ್ಮಾಂಡೀಯ ಆಕಾಶದ ಚಿರಂತನ ರಾತ್ರಿ ದಟ್ಟೈಸಿರುವ ವಿಶಾಲ ಶೀತಲ ಸರ್ವವ್ಯಾಪೀ ಶೂನ್ಯದಲ್ಲಿ"(ವಿಶ್ವದ ಒಂದೇ ಒಂದು ಪ್ರರೂಪೀ ನೆಲೆಯಿದೆ). ನಾರಾಯಣರಾವ್ ಅವರ ಇಂತಹದೇ ಇನ್ನೊಂದು ಬರಹ ತುಸು ಕಠಿಣವಾಗಿದೆಯೆಂಬುದಾಗಿ ಕನ್ನಡ ಸಾಪ್ತಾಹಿಕವೊಂದರ ಸಂಪಾದಕರು ಆಕ್ಷೇಪಿಸಿದಾಗ, ಅವರು ಈ ಉತ್ತರವನ್ನು ಕೊಟ್ಟಿದ್ದರಂತೆ: " ಕಲಗಚ್ಚು ಅತಿ ಸರಳ. ಕುಂಕುಮಕೇಸರಿ ಮಿಶ್ರಿತ ಕೆನೆ ಹಾಲು ಅತಿ ಕಠಿಣ, ನಿಮಗೆ ಕಲಗಚ್ಚು ಪ್ರಿಯವಾದರೆ ಧಾರಳವಾಗಿ ಅದನ್ನು ಕುಡಿಯಿರಿ." ( ನಾರಾಯಣರಾವ್ ೧೯೯೦: ೩೪)............"

ಆದರೆ ನಾವು(ನನ್ನನ್ನು ಸೇರಿಸಿ) ಮಾಡುತ್ತಿರುವುದೇನು ? ಈ ಮೇಲಿನ ಗುರಿಗಳನ್ನು ತಲುಪುವುದರಲ್ಲಿ ನಾವು ಗೆಲ್ಲುತ್ತಿದ್ದೇವೆಯೇ? ಎಲ್ಲ ಕನ್ನಡದ ಬಿನ್ನಣ ಬರಹಗಾರರು( ಶಿವರಾಮ ಕಾರಂತರನ್ನು ಬಿಟ್ಟು) ಬರಹದಲ್ಲಿ ಹೆಚ್ಚು ಹೆಚ್ಚು ಎಡರಿರುವ/ಕ್ಲಿಶ್ಟವಾದ ಸಕ್ಕದದ ಪದ/ಒರೆಗಳನ್ನು ತುಂಬಿದ್ದಾರೆ. ಹೋಗಲಿ ಬರೀ ಒರೆ/ಪದಗಳಲ್ಲ, ಸಕ್ಕದದ ಬೇಕರಣವನ್ನು ಚಾಚು ತಪ್ಪದೇ ಪಾಲಿಸಿದ್ದಾರೆ.

ಮಾದರಿ:
    ೧) ಪ್ರತ್ಯಾವರ್ತ - periodic ಇದಕ್ಕೆ ಇದಿರಾದ/ವಿರುದ್ಧ ಒರೆ ಕನ್ನಡದ ಬೇಕರಣ ಬಳಸಿದರೆ ಪ್ರತ್ಯಾವರ್ತವಲ್ಲದ(aperodic) [ಇಲ್ಲಿ 'ಅಲ್ಲದ' ಎಂಬ ಕನ್ನಡದ ಹಿನ್ನೊರೆ/ಪ್ರತ್ಯಯ ಬಳಸಲಾಗಿದೆ]
        ಪ್ರತ್ಯಾವರ್ತ - periodic ಇದಕ್ಕೆ ಇದಿರಾದ/ವಿರುದ್ಧ ಒರೆ ಸಕ್ಕದದ ಬೇಕರಣ ಬಳಸಿದರೆ ಅಪ್ರತ್ಯಾವರ್ತ(aperodic)   [ ಇಲ್ಲಿ 'ಅ' ಎಂಬುವ ಸಕ್ಕದದ ಹಿನ್ನೊರೆ/ಪ್ರತ್ಯಯ ಬಳಸಲಾಗಿದೆ]

ಆದರೆ ಬಿನ್ನಣದ ಬರಗಳಲ್ಲಿ  ಬಳಸುವುದೇನು? 'ಅಪ್ರತ್ಯಾವರ್ತ'. ಈ ತರ ಆದರೆ ಹೆಂಗೆ ಅರ್ತ ಆಗಬೇಕು ? ನಮ್ಮ ಬಿನ್ನಣದ ಬರಹಗಾರರು ಈ ಬಗೆಯಲ್ಲಿ ಕನ್ನಡದ 'ಸೊಗಡ'ನ್ನು ಹಾಳುಮಾಡುತ್ತಿದ್ದಾರೆ ಎಂಬುದು ಶಂಕರಬಟ್ಟರ ಅಳಲು. ಹೀಗೆ ಹಲವು ಮಾದರಿಗಳು 'ಕನ್ನಡದ ಬರಹವನ್ನು ಸರಿಪಡಿಸೋಣ' ಹೊತ್ತಗೆಯಲ್ಲಿ ಸಿಗುತ್ತವೆ.

ಶಂಕರಬಟ್ಟರ ಹೊತ್ತಗೆಯಲ್ಲಿ ಕನ್ನಡದ ಹೊಸ ಪದ/ಒರೆ ಹುಟ್ಟಿಸುವಾಗ( ಇಂಗ್ಗಲೀಸಿಗೆ ಸಮನಾದ) ಹೇಗೆ ಉಂಕಿಸಬೇಕು ಎಂಬುದನ್ನ ಸೊಗಸಾಗಿ ಹೇಳಿದ್ದಾರೆ
೧) ಆದಶ್ಟು ಕನ್ನಡದ ಸಲೀಸಾದ ಒರೆಗಳನ್ನೇ ಬಳಸಬೇಕು
೨) ಕನ್ನಡದಲ್ಲಿ ಆ ಒರೆ ಸಿಗದಿದ್ದರೆ ಸಕ್ಕದದಲ್ಲಿ ಉಲಿಯಲು/ಉಚ್ಚರಿಸಲು ತೊಡರಿರದ ಒರೆಗಳನ್ನು ಅತ್ವ ತದ್ಬವಗಳನ್ನು ಬಳಸಬೇಕು.
೩) ಕನ್ನಡದ ಬೇಕರಣ ಕಟ್ಟಳೆಗಳನ್ನು ಪಾಲಿಸಬೇಕು.

ಈ ಮೇಲಿನ ಮೂರು ಓಸುಗರಗಳನ್ನು ಚಾಚು ತಪ್ಪದೆ ಪಾಲಿಸಿದರೆ ಕನ್ನಡದಲ್ಲಿ ಬಿನ್ನಣದ ಬರಹಗಳು ಹೆಚ್ಚು ಹೆಚ್ಚು ಮಂದಿಗೆ ತಲುಪುವುದು. ಮತ್ತು ಕನ್ನಡದಲ್ಲಿ ಬಿನ್ನಣದ ಬರಹಗಳ ಗುರಿಯನ್ನು ಮುಟ್ಟಿದಂತಾಗುವುದು.

 HPNರು ಹೇಳಿದ್ದು.
"ಅವರ ಕಾಲಕ್ಕೆ ತಕ್ಕ ಹಾಗೆ ಜಿ ಟಿ ನಾರಾಯಣರು ಅನುವಾದ ಮಾಡಿದ್ದಿರಬಹುದು. ಕ್ಲಿಷ್ಟ ಪದಗಳನ್ನು ಕ್ಲಿಷ್ಟವಾಗಿಯೇ ಇರಿಸಿದ್ದಿರಬಹುದು. ಅಥವ ಆ ಪದಗಳು ಆಗಿನ ಓದುಗರಿಗೆ ಕ್ಲಿಷ್ಟವನಿಸಿಲ್ಲದಿರಬಹುದು"

HPN,
  ಅವರ ಕಾಲದಲ್ಲಿ/ಹೊತ್ತಿನಲ್ಲಿ ತಿಳಿಗನ್ನಡಕ್ಕೆ ಅನುವಾದ ಮಾಡಬಾರದು ಎಂಬ ಕಟ್ಟಳೆಯಿತ್ತೆ?

 ಅವರ ಕಾಲಕ್ಕಿಂತಲೂ ಮೊದಲೇ ಆಂಡಯ್ಯ(೧೩ ನೂರೇಡು/ಶತಮಾನ), ನಯಸೇನ(೧೨ ನೂರೇಡು/ಶತಮಾನ),ಮುಳಿಯ ತಿಮ್ಮಪ್ಪಯ್ಯ(೧೯೦೦)  ಮತ್ತು ಅವರ ಹೊತ್ತಿನವರೆ/ಕಾಲದವರೆ ಆದ ಶಿವರಾಮ ಕಾರಂತರು,ಪುಟ್ಟಣ್ಣಗೌಡರು, ಡಿ.ಎನ್.ಶಂಕರಬಟ್ಟರು ಹೇಗೆ ಕನ್ನಡವನ್ನು ಸಲೀಸು ಮಾಡಬಹುದೆಂದು ಉಂಕಿಸಲಿಲ್ಲವೆ?

ನಯಸೇನ ಕನ್ನಡದ ಬರಹಗಳಲ್ಲಿ ಸಕ್ಕದ ಒರೆ ಬಳಸುವುದರ ಬಗ್ಗೆ ಏನು ಹೇಳಿದ್ದಾನೆ ಎಂಬುದನ್ನ ಇಲ್ಲಿ ನೋಡಿ

ಕನ್ನಡದಲ್ಲಿ ಬರೆಯುವುದು ತಮ್ಮ 'ಸಂಸ್ಕ್ರುತ ಪಾಂಡಿತ್ಯ ಪ್ರದರ್ಶನ'ಕ್ಕೊ ಅತ್ವ ಬಿನ್ನಣದ ಅರಿವನ್ನು ಹೆಚ್ಚು ಹೆಚ್ಚು ಮಂದಿಗೆ ತಲುಪಿಸುವುದಕ್ಕೊ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet