ಇರುವಿನ ಗುಡಿ

ಇರುವಿನ ಗುಡಿ

ಕವನ

ಇಲ್ಲದ ಕಡೆಗೆ ಇರುವಿನ ನಡಿಗೆ
ಮಾಡುತನಡೆಯಿತು ಗುಡಿ ಅಡಿಗಡಿಗೆ
ನೀರಿನ ಪಯಣದಿ ಹಸಿರಿನ ಜನನ
ಉಸಿರಿನ ಬಸಿರಿಗೆ ಜೇನಿನಿಂಧನ
ಚಲಿಸುವ ಮೋಡದ ಗಮ್ಯವು ಕೂಡ
ಅಚಲದ ಮೋಡಿಯಧಮ್ಯವು ನೋಡ
ಅಡಗಿಹ ಚಿನ್ನವ ಹೊರಗಡೆಗೆಡುಹಿ
ಮತ್ತಡಗಿಸುವುದಸತ್ಯಪಥ
ಇಲ್ಲದ ಧಾನ್ಯವ ಶ್ರಮದಲಿ ಬೆಳುಹಿ
ಹಸಿವಡಗಿಸುವುದು ನಿಥ್ಯಪಥ
ಭೂಮಿಯು ಸುತ್ತುವ ದಿಶೆಗಳ ಕಡೆಗೆ
ನಡೆಯಿರಿ ಹತ್ತುವ ಉಷೆಗಳ ಎಡೆಗೆ
ಇಲ್ಲದಕಡೆಯೇ ಇಲ್ಲದ ಕಡೆಗೆ
ಇರುವಿನ ಅರಿವುಗಳಿರುವಿನ ಗುಡಿಗೆ.

-: ಅಹೋರಾತ್ರ.