ಇಲ್ಲಿ ಸಂಭವಿಸು!

ಇಲ್ಲಿ ಸಂಭವಿಸು!

ಕವನ

ಪಾಪ,ಪುಣ್ಯ,ದೇವರು,ದಿಂಡರು
ಸ್ವರ್ಗ,ನರಕ,ಗರುಡ ಪುರಾಣ-
ಎಲ್ಲ ಗೋಜಲು ಗೋಜಲು
ಅನಿಸಿದ ಕ್ಷಣ
ಕಾಲು ನೆಲಕ್ಕೆ ತಾಗುತ್ತವೆ.

ಜೆನ್ ಕತೆಗಳ ಮಧ್ಯೆ
ಹಾಯ್ಕುವಿನ ಶೃಂಗಾರದಲಿ
ಪದ್ಯ ಹೊಳೆಯದೆ
ತಲೆಕೆಡಿಸಿಕೊಂಡಾಗ
ಎಲ್ಲೋ ಹಾಳೆ 
ತಿರುವಿದ ಸದ್ದು. 

ಅವಳ ಡಿಂಭದಲ್ಲಿ
ಹೆಪ್ಪುಗಟ್ಟುತ್ತಿರುವ
ಪ್ರತಿಬಿಂಬ 
ನಸುನಗುತ್ತ 
ಕವಿತೆ 
ಗೀಚುತ್ತಿದೆ:
ಬಾ ಒಮ್ಮೆ,
ಇಲ್ಲಿ ಸಂಭವಿಸು!

---