ಇಸ್ಲಾಂ ಏಕೆ ಬಡ್ಡಿ ವ್ಯವಹಾರವನ್ನು ನಿಷೇದಿಸಿದೆ?

ಇಸ್ಲಾಂ ಏಕೆ ಬಡ್ಡಿ ವ್ಯವಹಾರವನ್ನು ನಿಷೇದಿಸಿದೆ?

Comments

ಬರಹ

ನನ್ನ ನೆಚ್ಚಿನ ಸಂಪದಿಗ ವಿಕಟಕವಿಯವರ ಇತ್ತೀಚಿನ ಕವನದ ಒಂದು ಸಾಲು ("ಗಳಿಸಿದಾ ಹಣ ಕೂಡಿ ಇಟ್ಟೆನು ಫೈನಾನ್ಸೊಂದರಲಿ| ಮುಳುಗಿ ಹೋಯಿತು ಎಲ್ಲ ಹಣ") ನನಗೆ ಇಸ್ಲಾಂ ಧರ್ಮದಲ್ಲಿನ ಬಡ್ಡಿಹಣದ ಬಗೆಗಿನ ಕಟ್ಟಳೆಯನ್ನು ನೆನಪಿಸಿತು.

ಪವಿತ್ರ ಖುರಾನ್ ಬಡ್ಡಿ ವ್ಯವಹಾರವನ್ನು ನಿಷೇಧಿಸಿದೆ.

ಇದರ ಹಿಂದಿನ ತತ್ವವನ್ನು ನನ್ನ ಸೌದೀಭಾಯಿ ವಿವರಿಸಿದ್ದು ಹೀಗಿದೆ: "ನಮ್ಮಲ್ಲಿ ಹೆಚ್ಚಿರುವ ಹಣ, ಅಥವಾ ನಮ್ಮ ಹಿರಿಯರಿಂದ ಬಂದ ಆಸ್ತಿಯ ಹಣವನ್ನು ಬಡ್ಡಿಗೆ ನೀಡಿದಾಗ ಬಡ್ಡಿಯ ಕಾಸಿನಿಂದಲೇ ಬದುಕುವ ರೂಢಿಯ ರುಚಿ ಹತ್ತಿ ನಾವು ಕೆಲಸ ಬಿಟ್ಟು ಸೋಮಾರಿಗಳಾಗುತ್ತೇವೆ. ಆದ್ದರಿಂದ ಬಡ್ಡಿಗಾಗಿ ಆಸೆ ಪಡುವುದು ಕೆಟ್ಟದ್ದು."

ಭಾರತದಲ್ಲಿನ ಹೆಚ್ಚಿನ ಶ್ರೀಮಂತ ಮುಸಲ್ಮಾನರು ಬಡ್ಡಿಯನ್ನು ಪಡೆಯಲೇ ಬೇಕಾಗಿ ಬಂದಾಗ (ಉದಾಹರಣೆಗೆ ಬ್ಯಾಂಕಿನಲ್ಲಿ ಇಟ್ಟ ಠೇವಣಿಗೆ ಬಂದ ಬಡ್ಡಿ) ಅಂತಹ ಹಣವನ್ನು ತಮ್ಮ ಸ್ವಂತಕ್ಕೆ ಬಳಸದೆ, ರಂಜಾನ್ ಹಬ್ಬದಲ್ಲಿ ಬಡಬಗ್ಗರಿಗೆ ಹಂಚಿಬಿಡುತ್ತಾರೆ.

ಹೆಚ್ಚಿನ ಓದಿಗೆ ನೋಡಿ: Money in Islam

http://www.55a.net/firas/english/?id=260&page=show_det

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet