ಈ ರಾಗದ ಸರಿಯಾದ ಹೆಸರೇನು?
ಬರಹ
ಕರ್ನಾಟಕ ಸಂಗೀತದಲ್ಲಿ ‘ಕದನ ಕುತೂಹಲ’ವೆಂಬ ರಾಗವಿದೆ. ತನ್ನ ಕುತೂಹಲ ನಡೆಯಿಂದಲೇ ಮನಸ್ಸಿನಲ್ಲಿ ಉಲ್ಲಾಸ ಮೂಡಿಸುವ ರಾಗ. ಈ ರಾಗದ ಬಗ್ಗೆ ಒಂದು ತರ್ಕ ಇದೆ. ಅದೇನೆಂದರೆ ಮೂಲರೂಪದಲ್ಲಿ ಇದರ ಹೆಸರು ‘ಕಥನ ಕುತೂಹಲ’ ಎಂಬುದಾಗಿದೆ. ಕುತೂಹಲಕಾರಿಯಾಗಿ ಕಥೆ ಹೇಳುವುದಕ್ಕೆ ಹೇಳಿ ಮಾಡಿಸಿದಂತಹ ರಾಗ ಎಂದು ಇದಕ್ಕೆ ಆ ಹೆಸರು ಇದೆ. ಆದರೆ ತಮಿಳುನಾಡಿನ ಸಂಗೀತ ವಿದ್ವಾಂಸರು ‘ತ’ ಮತ್ತು ‘ದ’ ಎಂಬ ಎರಡು ಅಕ್ಷರಗಳನ್ನು ಒಂದೇ ಅಕ್ಷರದಿಂದ ಸೂಚಿಸುವುದರಿಂದ ಅದನ್ನು ‘ಕದನ ಕುತೂಹಲ’ವಾಗಿ ಮಾಡಿದ್ದಾರೆಂಬುದು ಕೆಲವರ ಅಂಬೋಣ. ಈಗ ನನ್ನ ಕುತೂಹಲ ಏನೆಂದರೆ ಇದು ಕಥನದ ರಾಗವೇ ಅಥವಾ ಕದನದ ರಾಗವೇ? ಸರಿಯಾದ ಹೆಸರು ಯಾವುದು?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಈ ರಾಗದ ಸರಿಯಾದ ಹೆಸರೇನು?