ಎರಡು ಗಝಲ್ ಗಳು.....

ಎರಡು ಗಝಲ್ ಗಳು.....

ಕವನ

ಗಝಲ್ ೧

ಮುಂದೆಯೇ ಹೊಗಳಿ ಸುಮ್ಮನೆ ಹಿಂದಿನಿಂದ ತೆಗಳಬೇಡಿ

ಎಲ್ಲವೂ ಸರಿಯಿದ್ದರು ನೀವು ಎದುರಿನಿಂದ ತೆಗಳಬೇಡಿ

 

ನನ್ನ ಕತ್ತೆಗೆ ಮೂರೇ ಕಾಲೆಂದು ಯಾಕಾಗಿ ಹೇಳುತ್ತೀರೊ

ಮಾತುಗಳ ಮೌನದೊಂದಿಗೆ ಒಳಗಿನಿಂದ ತೆಗಳಬೇಡಿ

 

ನಿಷ್ಠೂರ ನಡೆ ನುಡಿಯಲ್ಲಿ ವ್ಯಂಗ್ಯ ಭರಿತ ಹಾಡುಗಳು

ಕಾಸಿನ ಬೆಲೆ ಇರದಿದ್ದರೂ ಹೊರಗಿನಿಂದ ತೆಗಳಬೇಡಿ

 

ಎಲ್ಲರೂ ದೂರದವರಾದರೆ ಹತ್ತಿರದವರು ಯಾರಯ್ಯ

ಚಿತ್ತಾರ ಎಳೆಯುವವರೆಲ್ಲ ಹುರುಪಿನಿಂದ ತೆಗಳಬೇಡಿ

 

ಒಂದು ಹಂತದಲ್ಲಿ ಮಾತನಾಡು ಒಪ್ಪಿಕೊಳ್ಳುವೆ ಈಶಾ

ಹೊಗಳುತ್ತಲೆ ನಿಮ್ಮೊಳಗಿನ ಮಡಿಲಿನಿಂದ ತೆಗಳಬೇಡಿ

***

ಗಝಲ್ ೨

 

ಕೈಯನ್ನು ಹಿಡಿಯುತ ತಿದ್ದಿಸುವರೆ ಇಹರು

ಬೆನ್ನಿನ ಮೇಲೆಯೇ ಬಾರಿಸುವರೆ ಇಹರು

 

ಅಕ್ಷರಗಳ ಗೊಡವೆಯೇ ಬೇಡವೆಂದೆ ಏಕೆ

ನರಿಗಳಂತೆ ಇಂದು ಊಳಿಡುವರೆ ಇಹರು

 

ಸೌಂದರ್ಯದ ಮದ ಸುತ್ತೆಲ್ಲ ತುಂಬಿದೆ

ಕನ್ನಡಿಯಿಲ್ಲದೆಯೇ ಬದುಕುವರೆ ಇಹರು

 

ಹೇಳಲು ನಮ್ಮಯ ಸುತ್ತಲೂ ಏನು ಉಳಿದಿದೆ

ಬೆಳಕಿನ ನಡುವೆಯೇ ಬಡಿದಾಡುವರೆ ಇಹರು

 

ತುಂಬಿದ ಕೊಡದ ನೀರೇ ವಿಷವಾಗಿದೆ ಈಶಾ

ಗತ್ತುಗಳ ನಡುವೆಯೇ ಬರೆಯುವರೆ ಇಹರು

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್