ಎರಡು ಗಝಲ್ ಗಳು.....
ಗಝಲ್ - ೧
ಸಪ್ತಾಶ್ವವೇರಿ ದಿನಕರನು ಬಾನಲಿ ಸಾಗುತಿಹನು ಸಖಿ
ಸುಪ್ತ ಮನದ ಭಾವನೆಗಳ ನೋಡುತಿಹನು ಸಖಿ
ಸಪ್ತಮಿ ತಿಥಿಯ ಅರುಣೋದಯದಿ ಹೊಸತನವಿದೆಯಲ್ಲ
ಆಪ್ತತೆಯ ಹಾರೈಸುತ ಜಗವ ಸೋಕುತಿಹನು ಸಖಿ
ರಾಗ-ದ್ವೇಷ ಪಾಪಕೂಪಗಳಲಿ ತೊಳಲಾಟ ಬೇಡವೆಂದು
ಅನುರಾಗ ಬಾಳಿನ ಹಾದಿಯಲಿ ಬಿಂಬಿಸಿಹನು ಸಖಿ
ಪ್ರಕೃತಿ ಮಾತೆಯ ಒಡಲಾಳದಿ ನವಚೈತನ್ಯ ಮೂಡಿತಿಂದು
ವಿಕೃತಿ ಗುಣಂಗಳ ಸುಟ್ಟು ಉರುಹುವನು ಸಖಿ
ಸ್ನಾನ ಜಪ-ತಪ ಸೂರ್ಯನಮಸ್ಕಾರ ತನುವಿಗೆ ರತ್ನ ಕಲಶವಿದ್ದಂತೆ
ಮಾನ -ಸಮ್ಮಾನಗಳ ಪರಿಧಿಯ ಅರಿತಿಹನು ಸಖಿ
-ರತ್ನಾ ಕೆ ಭಟ್, ತಲಂಜೇರಿ
***
ಗಝಲ್ ೨
ಮುನಿಸು ಕಳೆದು ಮಾತು ನೆಗೆಯಲಿ ಗೆಳತಿ
ಕನಸು ಒಡೆದು ನನಸು ಹೊಳೆಯಲಿ ಗೆಳತಿ
ಚೆಲುವು ಅರಳಿ ರಶ್ಮಿ ಸುರಿಯುತ ಹಾಡಿದೆ
ಒಲವು ಚಿಗುರಿ ಪ್ರೀತಿ ಬೆರೆಯಲಿ ಗೆಳತಿ
ಸವಿಯ ಸುಖದಿ ಚಿತ್ತ ಕುಣಿಯುತ ಸಾಗಿದೆ
ನಲಿವ ಹೊಂದುತ ಬಾಳು ಸೆಳೆಯಲಿ ಗೆಳತಿ
ಖುಷಿಯ ಬೆಸೆದು ಪ್ರೇಮ ಅರಳುತ ಬೆಳೆದಿದೆ
ದೆಸೆಯು ಬರುತ ಮೋಹ ಹರಿಯಲಿ ಗೆಳತಿ
ಮನದಿ ರಣಿತ ಬೆಳಗುತ ನಡೆದನೆ ಈಶಾ
ವರದಿಯ ಗುರುತು ಕಣ್ಣ ಕರೆಯಲಿ ಗೆಳತಿ
-ಹಾ ಮ ಸತೀಶ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ