ಎಲ್ಲರಿಗೂ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು !
ಎಲ್ಲರಿಗೂ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು
ಭವ ಬಂಧನವೆಂಬ ಒರಳಕಲ್ಲ
ಎನ್ನಿಂದ ಸೆಳೆದೊಯ್ಯ ಓ ಗೊಲ್ಲ
ವಿಷವೇ ತುಂಬಿಹ ದೇಹಗಳ
ವಿಷ ಹೀರಿ ಸೆಳೆಯಯ್ಯ ಕಳ್ಳ
ನಾನೇ ಎಂಬ ಭಾವದ ಕಾಳಿಂಗನ
ಹರಿಪಾದದಿ ನೀ ಮಾಡಯ್ಯ ಮರ್ದನ
ಒಳಿತನ್ನೇ ಮಾಡಲು ಪ್ರೇರೇಪಿಸಿ ಎನ್ನ ಮನ
ಪುಣ್ಯವಾಗಲಿ ಕಿರು ಬೆರಳಿನಿಂದೆತ್ತಿದ ಗೋವರ್ಧನ
ಪರರ ನಿಂದಿಪ ನಾಲಿಗೆ ಈ ಶಿರವ
ಮರೆವಂತೆ ಮಾಡಯ್ಯ ಈ ಭವವ
ಅರಿವೆಂಬ ಅರಿವೆ ಕಳಚಿ ದಿಗಂಬರರಾಗಿರೆ
ಅರಿವು ಮೂಡಿಸಿ ನೀ ಸಲಹಯ್ಯ ಈ ಧರೆ
ಇರುಳಲ್ಲಿ ಹುಟ್ಟಿ ಲೋಕಕೆಲ್ಲ ಬೆಳಕ ನೀಡಿದವನೇ
ಮನದ ಅಂಧಕಾರವನ್ನು ತೊಳೆಯೋ ಸುದರ್ಶನನೇ
Comments
ಉ: ಎಲ್ಲರಿಗೂ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು !
ಇಷ್ಟವಾಯಿತು.
In reply to ಉ: ಎಲ್ಲರಿಗೂ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು ! by Srinivas Achar
ಉ: ಎಲ್ಲರಿಗೂ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು !
ಧನ್ಯವಾದಗಳು :-)