ಎಲ್ಲೆಲ್ಲೂ ನೀನೇ
ಕವನ
ಬಿಳಿಯ ಬೋಳು ಗೋಡೆಯಲ್ಲು
ಮೆಟ್ಟಿಲಿ ಛಾವಣಿಗಳಲ್ಲು
ತಟ್ಟೆ ಲೋಟ ಅನ್ನದಲ್ಲು
ನೀನೇ ಕಾಣುವೆ
ನಾ ನಿನ್ನೇ ಕಾಣುವೆ
ಹಾರುವಾ ಹಕ್ಕಿಗಳಲು
ಮಿನುಗುವಾ ಚುಕ್ಕಿಗಳಲು
ಅರಳುತಿರುವ ಮೊಗ್ಗುಗಳಲು
ನೀನೇ ಕಾಣುವೆ
ನಾ ನಿನ್ನೇ ಕಾಣುವೆ
ಹರಿವ ನೀರ ಜುಳುವಿನಲ್ಲು
ಕರುವ ಮುದ್ದು ಕುಣಿತದಲ್ಲು
ಬಿರಿವ ಚಳಿಯ ಕೊರೆತದಲ್ಲು
ನೀನೇ ಮೂಡುವೆ
ನಾ ನಿನ್ನೇ ಕಾಣುವೆ
ಕೋಪದಲ್ಲು ಪ್ರೀತಿಯಲ್ಲು
ಅಳುವಿನಲ್ಲು ನಗುವಿನಲ್ಲು
ಸತ್ ಚಿತ್ ಆನಂದದಲ್ಲು
ನಿಂದೇ ಧ್ಯಾನವೇ
ಸದಾ ನಿಂದೇ ಪ್ರೇಮವೇ.
ಶಬ್ದದಲ್ಲು ಬೆಳಕಿನಲ್ಲು
ಸ್ಪರ್ಶದಲ್ಲು ಸ್ವಾದದಲ್ಲು
ತುಡಿತದೆದೆಯ ಬಡಿತದಲ್ಲು
ನೀನೇ ಮಿಡಿದಿಹೆ
ನೀ ನನ್ನೇ ಸೆಳೆದಿಹೆ
ರಕ್ತದಲ್ಲು ಪ್ರಾಣದಲ್ಲು
ದೇಹದಲ್ಲು ಆತ್ಮದಲ್ಲು
ಸಕಲ ಜೀವನಾಡಿಯಲ್ಲು
ನೀನೇ ಬೆರೆತಿಹೆ
ನೀ ನನ್ನೇ ಮರೆಸಿಹೆ
Comments
ಉ: ಎಲ್ಲೆಲ್ಲೂ ನೀನೇ
ಉ: ಎಲ್ಲೆಲ್ಲೂ ನೀನೇ
ಉ: ಎಲ್ಲೆಲ್ಲೂ ನೀನೇ
ಉ: ಎಲ್ಲೆಲ್ಲೂ ನೀನೇ