ಏನಾದರೂ ಆಗಲಿ
ಕವನ
ಏನಾದರೂ ಆಗಲಿ
ನೆನಪೊಂದೆ ಇರಲಿ
ಬದುಕಲಿ ಇರಲಿ
ಮರೆಯದ ಸವಿನೆನಪೊಂದೆ ಇರಲಿ
ಏನಾದರೂ ಆಗಲಿ
ನಗುವೊಂದೆ ಇರಲಿ
ಜೀವನದಲ್ಲಿ ಇರಲಿ
ಮರೆಯದ ಮುಖದ ನಗುವೊಂದೆ ಇರಲಿ
ಏನಾದರೂ ಆಗಲಿ
ಪ್ರೀತಿಯೊಂದೆ ಇರಲಿ
ಹೃದಯದಲ್ಲಿ ಇರಲಿ
ಬಾಳಲ್ಲಿ ಮರೆಯದ ಪ್ರೀತಿಯೊಂದೆ ಇರಲಿ
ಏನಾದರೂ ಆಗಲಿ
ಸ್ನೇಹವೊಂದೆ ಇರಲಿ
ಪ್ರತಿಯೊಂದು ಜೀವಿಯಲ್ಲಿ ಇರಲಿ
ಪ್ರತಿ ಕ್ಷಣದಲ್ಲಿಯೂ ಸ್ನೇಹವೊಂದೆ ಇರಲಿ
ಏನಾದರೂ ಆಗಲಿ
ಮನಸ್ಸು ಕೆಡದಿರಲಿ
ಪ್ರತಿ ಮನುಷ್ಯನಲ್ಲಿಯೂ ಮನಸ್ಸು ಇರಲಿ
ಮನಸ್ಸು ಕೂಡ ಮನಸ್ಸಾಗಿರಲಿ
- ಹೆಚ್.ವಿರುಪಾಕ್ಷಪ್ಪ ತಾವರಗೊಂದಿ.