ಒಂದಿಷ್ಟು ಹನಿಗಳು…

ಒಂದಿಷ್ಟು ಹನಿಗಳು…

ಕವನ

ಶ್ರಮವಿಲ್ಲದ ಹಣ 

ರಾಜಕಾರಣಿಗಳೇ

ನೀವು-

ಜೀವನಪೂರ್ತಿ

ಆಡುತಲಿ ಕುಸ್ತಿ

ಮಾಡುವಿರಿ

ಅಪಾರ ಆಸ್ತಿ...

 

ಶ್ರಮವಿಲ್ಲದ

ನಿಮ್ಮ ಸಂತತಿ-

ತಿಂದದನು

ಮೈಮರೆತು

ಮಾಡುವರು

ಮೋಜು ಮಸ್ತಿ!

***

ಸಂಕ್ರಾಂತಿ ಶುಭಾಶಯಗಳು 

ಜಗದ

ಎಲ್ಲ

ವಿಕೃತಿಗಳ

ಮೀರಿ

ನಡೆಯುವುದೇ

ಸಂಕ್ರಾಂತಿ...

 

ಮಾನವೀಯ

ಸೆಲೆ

ಎಲ್ಲರಲಿ

ಹರಿದು

ನೆಲಸಲಿ ಶಾಂತಿ 

ಸುಮತಿ!

***

ಭಾರತೀಯ ಸಂಸ್ಕೃತಿ! 

ಶತ ಶತಮಾನದಿಂ

ನಡೆಯುತಿಹುದು

ಅದೆಷ್ಟೋ ಕುಹಕಿಗಳ 

ಕುತ್ಸಿತ

ಅಮಾನವೀಯ

ಬೀಭತ್ಸ ವಿಕೃತಿ...

 

ಆದರೂ

ಕುಂದದೆ

ವಿರಾಜಮಾನದಿಂ

ಬೆಳಗುತಲೇ ಇಹುದು

ನಮ್ಮ ಭಾರತೀಯ

ಶೋಭಿತ ಸಂಸ್ಕೃತಿ!

***

ಫೈರ್ ಫೈಟರ್ಸ್ 

ಲಾಸ್ ಏಂಜಲೀಸ್ನ

ಕಾಡ್ಗಿಚ್ಚಿನಲಿ

ಬೆಂಕಿಯೊಂದಿಗೆ

ಹೋರಾಡಿ-

ಪ್ರಾಣಿಗಳ ಜೀವ

ಕಾಪಾಡಿದ ವೀರರೇ....

 

ನಿಜಕೂ

ನೀವೇ-

ಮಾನವೀಯ

ಜಗತ್ತಿನ

ಉತ್ಕೃಷ್ಟ

ದಯಾಳು ಧೀರರೇ!

***

ಹಾಲಿವುಡ್ 

ಸಿನಿಮಾ

ಜಗತ್ತಿನ ಕಾಶಿ

ಲಾಸ್ ಏಂಜಲೀಸ್ನ

ಹಾಲಿವುಡ್-

ಧಗಧಗಿಸುವ

ಅಗ್ನಿಗಾಹುತಿ;

 

ಅಂದಿನ

ವೈಭವದ ಸಿನಿಮಾ

ನೇಪಥ್ಯಕೆ ಸರಿಯುವ 

ಭವಿಷ್ಯದ

ಮುನ್ಸೂಚನೆಯೆ

ಈ ಧಗಧಗಿಸುವ ಬೆಂಕಿ?

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್