ಒಂದಿಷ್ಟು ಹನಿಗಳು, ಗಝಲ್...

ಒಂದಿಷ್ಟು ಹನಿಗಳು, ಗಝಲ್...

ಕವನ

ನಿಜ

ಖದೀಮರೆಂದ

ರೇ

ಹೀಗೆ 

ಹೇಗೆಂದರೆ ?

ನಿಜ

ಕಳ್ಳರಲ್ಲ

ಒಳ

ಕಳ್ಳರು !!

*

ಹುಷಾರು

ಕಳ್ಳರು

ಇರುವಲ್ಲಿ

ಪೋಲೀಸರು !

ರಾಜಕೀಯ

ಇರುವಲ್ಲಿ

ಕಳ್ಳರು !!

*

ಗಝಲ್

ಮೋಡಕ್ಕೆ ತಂಪದುವು ತಾಗೆ ಹಾಗೆ ನನ್ನ ನಿನ್ನ ಯೌವನ

ಮದವೇರಿದ ಸಲಗದ ಬೇಗೆ ಹಾಗೆ ನನ್ನ ನಿನ್ನ ಯೌವನ

 

ಉಪದೇಶ ಕೊಡಲೋ ನಮ್ಮೊಳಗೆ ನೂರಾರು ಜನರಿಹರು ಏಕೆ

ಮೊಗ್ಗೊಂದು ಬಿರಿದು ಅರಳಿತು ಹೀಗೆ ಹಾಗೆ ನನ್ನ ನಿನ್ನ ಯೌವನ

 

ಮದನನ ಆಗಮನಕ್ಕೆ ಕಾದಿರುವ ಪಕ್ಷಿಗಳಂತೆ ಆಯಿತೇನೋ ನಮ್ಮೊಲವು

ಉಕ್ಕಿಹರಿವ ಜಲಧಾರೆಯದು ರಭಸದಿ ಸಾಗೆ ಹಾಗೆ ನನ್ನ ನಿನ್ನ ಯೌವನ

 

ಸೊಕ್ಕುಗಳು ಯಾಕಿಂದು ಬೋರ್ಗರೆವ ಜಲಪಾತದಂತೆ ದುಮುಕುತ್ತವೆ

ಮುತ್ತೆಲ್ಲವು ಮತ್ತೇರಿ ಹೊರಳುತ ಹೋಗೆ ಹಾಗೆ ನನ್ನ ನಿನ್ನ ಯೌವನ

 

ಉನ್ಮಾದದ ಚಿತ್ರಣವದು ತೀರದ ಸನಿಹಕ್ಕೆ ಜಲವದುವು ಅಪ್ಪಳಿಸಿದಂತೆ ಈಶಾ

ಗೊನೆಯಬಿಟ್ಟ ಬಾಳೆಯ ಗಿಡವು ನಾಚುತ ಬಾಗೆ ಹಾಗೆ ನನ್ನ ನಿನ್ನ ಯೌವನ

*

ಮರೆಯಲಾಗದು

ಉಸಿರಿರುವವರೆಗೆ

ತಂದೆ ತಾಯಿ

ಅಣ್ಣ ತಮ್ಮ ಅಕ್ಕ ತಂಗಿ

ಬಂಧು ಮಿತ್ರರೆಲ್ಲವು !

ಉಸಿರಿನಾಟ ನಿಂತ ಮೇಲೆ

ಬುವಿಯ ಮೇಲೆ ಏನಿದೆ?

ಆರಡಿ ಮೂರಡಿ ಜಾಗದೊಳಗೆ

ನಮ್ಮ ದೇಹ ಕೊಳೆತಿದೆ

ಆತ್ಮವೆಲ್ಲೋ ಹೋಗಿದೆ !!

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್