ಒಂದಿಷ್ಟು ಹನಿಗಳು...
ಕವನ
ಕುರುಕ್ಷೇತ್ರ
ಜಗದಲಿ
ಈ
ಜೀವನವೇ
ಒಂದು
ದೊಡ್ಡ
ಕುರುಕ್ಷೇತ್ರ...
ನಮ್ಮೆಲ್ಲರ
ಹೋರಾಟದ
ಸೋಲು-ಗೆಲುವು
ಇಲ್ಲಿ
ನಿಮಿತ್ತ
ಮಾತ್ರ!
***
ದುರಂತ!
ಇತಿಹಾಸದಿಂದ
ಈ
ಮನುಜ
ಕಲಿಯಲಾರ
ಎಂದೂ
ಪಾಠ...
ಮತ್ತೆ
ಅದೇ
ಅರಿಷ್ಡ್ವರ್ಗಗಳ
ಅಧೀನನಾಗಿ
ಆಡುತಿರುವ
ಆಟ!
***
ಕನ್ನಡ ತಾಯೇ
ಕನ್ನಡ ಮಕ್ಕಳಿಗೆ
ಬುದ್ಧಿಕೊಟ್ಟು
ನೀನು
ಕಾಯೇ
ಓ ನನ್ನ
ಕನ್ನಡ ತಾಯೇ...
ನಿನ್ನನವಮಾನ
ಗೊಳಿಸಿದವರಿಗೆ
ಬುದ್ಧಿಯ
ಕಲಿಸು;
ನೀ ಜಗದ
ಮಾಯೇ!
***
ಹರಿಕಾರ...!
ವಿಚಿತ್ರ
ಸುದ್ಧಿ-
ದಕ್ಷಿಣ
ಕೊರಿಯಾ
ರೋಬೊ
ಆತ್ಮಹತ್ಯೆ...!
ಆತ್ಮಹತ್ಯೆಯ
ಮಹಾ
ಹರಿಕಾರ-
ಇದ ತಯಾರಿಸಿದವ
ಮಾನವನಲ್ಲವೇ
ಮತ್ತೇ?
***
ನಡುಪಂಥೀಯ..
ಅಭಿಮಾನದ
ಪಂಥಗಳ
ಸೆಲೆಯೊಂದು
ಅಂತರ್ಗತವಾಗಿ
ಹರಿಯುತಿದೆ
ಸತತಾ...
ನೀ ಎಡವೋ
ಇಲ್ಲಾ ಬಲವೋ?
ಎಂದು ಕೇಳುತಿದೆ-
ಎರಡೂ ಅಲ್ಲದ
ನಡುಪಂಥೀಯರನು
ನಗುತಾ!
***
ಸಂತ-ದುಷ್ಟ ಪಂಥ
ಅರಿಷ್ಡ್ವರ್ಗಗಳೆಲ್ಲಾ
ಒಂದು
ಪರಿಮಿತಿಯಲ್ಲಿದ್ದರೆ-
ಅವನಾಗುವ
ಈ ಲೋಕದ
ಸಂತ...
ಮಿತಿ
ಮೀರಿದರೆ
ಆಗ
ಅವ ಹಿಡಿಯುವ
ಈ ಲೋಕದ
ದುಷ್ಟ ಪಂಥ!
-ಕೆ. ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್